For the best experience, open
https://m.hosakannada.com
on your mobile browser.
Advertisement

Nitin Gadkari: ಕರ್ನಾಟಕ ರಸ್ತೆಗಳ ಅಭಿವೃದ್ಧಿಗೆ 2 ಲಕ್ಷ ಕೋಟಿ ಭರ್ಜರಿ ಆಫರ್-‌ ಷರತ್ತು ಅನ್ವಯ; ನಿತಿನ್‌ ಗಡ್ಕರಿ

Nitin Gadkari: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಕರ್ನಾಟಕ ಸರಕಾರಕ್ಕೆ ಬಂಪರ್‌ ಆಫರ್‌ ನೀಡಿದ್ದಾರೆ.
03:19 PM Jul 05, 2024 IST | ಸುದರ್ಶನ್
UpdateAt: 03:19 PM Jul 05, 2024 IST
nitin gadkari  ಕರ್ನಾಟಕ ರಸ್ತೆಗಳ ಅಭಿವೃದ್ಧಿಗೆ 2 ಲಕ್ಷ ಕೋಟಿ ಭರ್ಜರಿ ಆಫರ್ ‌ ಷರತ್ತು ಅನ್ವಯ  ನಿತಿನ್‌ ಗಡ್ಕರಿ

Nitin Gadkari: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಕರ್ನಾಟಕ ಸರಕಾರಕ್ಕೆ ಬಂಪರ್‌ ಆಫರ್‌ ನೀಡಿದ್ದಾರೆ. ಒಂದು ತಿಂಗಳ ಅವಧಿಯೊಳಗೆ ರಾಜ್ಯದ ರಸ್ತೆಗಳ ಅಭಿವೃದ್ಧಿ ಯೋಜನೆಗಳಿಗೆ ಎರಡು ಲಕ್ಷ ಕೋಟಿ ರೂಪಾಯಿ ಬಿಡುಗಡೆ ಮಾಡಲು ಸಿದ್ಧ ಎಂದ ಹೇಳಿಕೆ ನೀಡಿದ್ದಾರೆ.

Advertisement

ಆದರೆ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರಕಾರವು ಯೋಜನೆಗಳಿಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಬೇಕು ಎಂಬ ಮಾತನ್ನು ಕೂಡಾ ಹೇಳಿದ್ದಾರೆ. ನಿತಿನ್‌ ಗಡ್ಕರಿ ಅವರು ಬೆಂಗಳೂರಿನಲ್ಲಿ ಗುರುವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಮಾತನ್ನು ಹೇಳಿದ್ದೃೆ.

ಒಂದು ತಿಂಗಳಲ್ಲಿ ರಸ್ತೆ ಕಾಮಗಾರಿಗೆ ಎರಡು ಲಕ್ಷ ಕೋಟಿ ರೂಪಾಯಿ ನೀಡಲು ಸಿದ್ಧ ಎಂದು ಭೇಟಿ ಸಂದರ್ಭದಲ್ಲಿ ಸಿಎಂ ಅವರಿಗೆ ನಾನು ಹೇಳಿದ್ದೇನೆ. ಆದರೆ ಷರತ್ತು ಏನೆಂದರೆ ಭೂಸ್ವಾಧೀನಕ್ಕೆ ಅರಣ್ಯ ಮತ್ತು ಇತರ ಅನುಮತಿಗಳನ್ನು ಪಡೆಯುವುದು. ನಾನು ಗಾಳಿಯಲ್ಲಿ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ಇದುವರೆಗೆ 3.5 ಲಕ್ಷ ಕೋಟಿ ರೂಪಾಯಿ ಕಾಮಗಾರಿಗಳಿಗೆ ಹಣ ಮಂಜೂರು ಮಾಡಲಾಗಿದೆ. ನನ್ನ ಭೇಟಿ ಮಾಡುವವರಿಗೆ ಕೇಂದ್ರ ಸಚಿವರು ಒಂದು ಕಿವಿ ಮಾತು ಹೇಳಿದ್ದಾರೆ. ಕೆಲಸ ಕೇಳಿ ಪಡೆಯಿರಿ, ನಾವು ಹಣ ನೀಡುತ್ತೇವೆ. ಸರಕಾರದಲ್ಲಿ ಅಥವಾ ಇಲಾಖೆಯಲ್ಲಿ ಹಣದ ಕೊರತೆಯಿಲ್ಲ ಎಂದು ಹೇಳಿದರು.

Advertisement
Advertisement
Advertisement