ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

New Rules On EMI Payment: ಬ್ಯಾಂಕಲ್ಲಿ ಸಾಲ ಮಾಡಿ EMI ಕಟ್ಟುವವರಿಗೆ ಬಂತು ಹೊಸ ರೂಲ್ಸ್- ನಿರ್ಮಲಾ ಸೀತಾರಾಮನ್ ಹೊಸ ಘೋಷಣೆ

03:17 PM Dec 09, 2023 IST | ಕಾವ್ಯ ವಾಣಿ
UpdateAt: 03:33 PM Dec 09, 2023 IST
Advertisement

New Rules On EMI Payment: ಆರ್ ಬಿ ಐ (RBI) ವತಿಯಿಂದ ಸಾಲಗಾರರ ಪಾಲಿಗೆ ಒಂದು ಸಿಹಿ ಸುದ್ದಿ ನೀಡಿದೆ. ಹೌದು, ಗೃಹ ಸಾಲ (home loan) ಚಿನ್ನದ ಮೇಲೆ ಸಾಲ (Gold Loan), ವೈಯಕ್ತಿಕ ಸಾಲ (personal loan) ವಾಹನದ ಮೇಲಿನ ಸಾಲ, ಮುಂತಾದ ಬ್ಯಾಂಕ್ ಸಾಲ (bank loan) ಮಾಡಿರುವ ಗ್ರಾಹಕರಿಗೆ ಅನುಕೂಲವಾಗುವಂತಹ ಹಿನ್ನೆಲೆ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ತರಲಾಗಿದೆ. ಅಂದರೆ ಇಎಂಐ ಪಾವತಿಯ ಮೇಲಿನ ಹೊಸ ನಿಯಮವನ್ನು ಆರ್ ಬಿ ಐ ತಂದಿದೆ.

Advertisement

ಬ್ಯಾಂಕ್ ನಲ್ಲಿ ಬೇರೆ ಬೇರೆ ರೀತಿಯ ಸಾಲ ಪಡೆದುಕೊಳ್ಳಲು ಅವಕಾಶವಿರುತ್ತದೆ. ಅಂತಹ ಎಲ್ಲಾ ಸಾಲಗಳನ್ನು ತೀರಿಸಲು ತಿಂಗಳ EMI ಅನ್ನು ನೀವು ಆಯ್ದುಕೊಳ್ಳುತ್ತೀರಿ , ಪ್ರತಿ ತಿಂಗಳು ತಪ್ಪದೇ ಇಎಂಐ ಮೊತ್ತವನ್ನು ಸಾಲಗಾರ ತನ್ನ ಸಾಲದ ಖಾತೆಗೆ ಜಮಾ ಮಾಡಬೇಕು, ನೀವು ಸಾಲ ಎಷ್ಟು ತೆಗೆದುಕೊಳ್ಳುತ್ತೀರಿ ಎನ್ನುವ ಮೌಲ್ಯದ ಆಧಾರದ ಮೇಲೆ ಇಎಂಐ ಮೊತ್ತ ಕೂಡ ನಿರ್ಧಾರಿತವಾಗಿರುತ್ತದೆ.

ಸಾಮಾನ್ಯವಾಗಿ ಬ್ಯಾಂಕ್‌ ಯಾವುದೇ ರೀತಿಯ ಸಾಲಕ್ಕೆ ಪ್ರತಿ ತಿಂಗಳು 2ರಿಂದ 4ನೇ ತಾರೀಖಿನ ಒಳಗೆ ಹಣವನ್ನ ನೇರವಾಗಿ ಗ್ರಾಹಕನ ಖಾತೆಯಿಂದ ಕಡಿತಗೊಳಿಸುತ್ತದೆ. ಆದರೆ ಸಾಕಷ್ಟು ಕಂಪನಿಗಳು ಪ್ರತಿ ತಿಂಗಳು 5 ನೇ ತಾರೀಖಿನಿಂದ 10ನೇ ತಾರೀಖಿನ ಒಳಗೆ ನೌಕರರಿಗೆ ಸಂಬಳ ವಿತರಣೆ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ನಲ್ಲಿ ಸಾಲ ಮಾಡಿರುವ ವ್ಯಕ್ತಿಗೆ ಬ್ಯಾಂಕ್ ನಿಗದಿಪಡಿಸಿದ ದಿನಾಂಕವೇ ಇಎಂಐ ಪಾವತಿ ಮಾಡಲು ಸಾಧ್ಯವಾಗದೆ ಇರಬಹುದು. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಸಾಲಗಾರರಿಗೆ ತಕ್ಷಣವೇ ಹೆಚ್ಚುವರಿ ಶುಲ್ಕ (extra fees) ವಿಧಿಸುತ್ತದೆ. ಈ ಪ್ರಕ್ರಿಯೆ ಗೆ ಆರ್ ಬಿ ಐ ಕಡಿವಾಣ ಹಾಕಿದೆ.

Advertisement

ಇದನ್ನು ಓದಿ: Bloating Acidity: ಪುರುಷರೇ ಹೊಟ್ಟೆ ಊತ, ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ- ಈ 5 ಕ್ರಮ ರೂಡಿಸಿಕೊಂಡ್ರೆ ಎರಡೇ ದಿನದಲ್ಲಿ ಎಲ್ಲಾ ಮಾಯ

ಹೌದು, ಇನ್ನು ಮುಂದೆ ಬ್ಯಾಂಕ್‌ ಏಕಾಏಕಿ ನೀವು ಒಂದು ತಿಂಗಳ ಇಎಂಐ ಅನ್ನು ಅದೇ ನಿಗದಿತ ದಿನಾಂಕದಂದು ಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ. ಪ್ರತಿಯೊಬ್ಬ ಸಾಲಗಾರರಿಗೂ ಕೂಡ ಇಎಂಐ ಪಾವತಿ ಮಾಡಲು ಒಂದು ವಾರದ ಗ್ರೇಸ್ ಪಿರಿಯೆಡ್ (Grace period) ನೀಡಬೇಕು ಎಂದು ಆರ್ ಬಿ ಐ ಸೂಚಿಸಿದೆ. ಆದರೆ ನಿಗದಿತ ದಿನಾಂಕದ ಮೇಲೆ ಒಂದು ವಾರವನ್ನು ಹೆಚ್ಚುವರಿಯಾಗಿ ನೀಡಿದ ನಂತರವೂ ಕೂಡ ಇಎಂಐ ಪಾವತಿ ಮಾಡದೆ ಇದ್ದಲ್ಲಿ ಆಗ ದಂಡ ವಿಧಿಸಬಹುದು ಎಂದು ಆರ್‌ಬಿಐ ತಿಳಿಸಿದೆ.

ಅದಲ್ಲದೆ ಇನ್ನು ಎಷ್ಟೋ ಬಾರಿ ಗ್ರಾಹಕರ ಖಾತೆಯಲ್ಲಿ ಇಎಂಐ ಪಾವತಿ ಮಾಡಲು ಬೇಕಾಗಿರುವಷ್ಟು ಹಣ ಇರುವುದಿಲ್ಲ. ಆದ್ದರಿಂದ ಇಎಂಐ ಪಾವತಿ ಅಲರ್ಟ್ ಮಾಹಿತಿಯನ್ನು ಗ್ರಾಹಕರಿಗೆ ಮುಂಚಿತವಾಗಿಯೇ ನೋಟಿಫಿಕೇಶನ್ (notification) ಕಳುಹಿಸುವುದರ ಮೂಲಕ ಗ್ರಾಹಕರನ್ನ ಜಾಗೃತಗೊಳಿಸಬೇಕು ಎಂದು ಆರ್‌ಬಿಐ ತಿಳಿಸಿದೆ.

Advertisement
Advertisement