ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

NHAI: ರಾಷ್ಟ್ರೀಯ ಹೆದ್ದಾರಿಗಳ ಬಳಕೆ ಶುಲ್ಕ ಶೇ 5ರಷ್ಟು ಏರಿಕೆ !!

NHAI: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಶುಲ್ಕವನ್ನು ಶೇ 5ರಷ್ಟು ಹೆಚ್ಚಿಸಿದ್ದು, ಇಂದಿನಿಂದಲೇ (ಜೂನ್ ಸೋಮವಾರ 3ರಂದು) ಈ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಆದೇಶಿಸಲಾಗಿದೆ.
10:01 AM Jun 03, 2024 IST | ಸುದರ್ಶನ್
UpdateAt: 10:04 AM Jun 03, 2024 IST
Advertisement

NHAI: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಶುಲ್ಕವನ್ನು ಶೇ 5ರಷ್ಟು ಹೆಚ್ಚಿಸಿದ್ದು, ಇಂದಿನಿಂದಲೇ (ಜೂನ್ ಸೋಮವಾರ 3ರಂದು) ಈ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಆದೇಶಿಸಲಾಗಿದೆ.

Advertisement

ಇದನ್ನೂ ಓದಿ: 1993 ಮುಂಬೈ ಬಾಂಬ್ ಸ್ಫೋಟದ ಅಪರಾಧಿ ಕೊಲ್ಲಾಪುರ ಜೈಲಿನಲ್ಲಿ ಬರ್ಬರ ಹತ್ಯೆ

ಹೌದು, ಎಕ್ಸ್ ಪ್ರೆಸ್ ವೇ ಗಳನ್ನು ಬಳಕೆ ಮಾಡುವ ವಾಹನ ಸವಾರರು ನಾಳೆಯಿಂದ ಟೋಲ್ ಗಳಲ್ಲಿ ಹೆಚ್ಚಿನ ದರ ನೀಡಬೇಕಾಗುತ್ತದೆ. ಅಂದರೆ ದೇಶಾದ್ಯಂತ ಹೆದ್ದಾರಿಗಳ ಟೋಲ್ ಶುಲ್ಕವನ್ನು ಸರಾಸರಿ ಶೇ. 5ರಷ್ಟು ಏರಿಕೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ.

Advertisement

ಸಾಮಾನ್ಯವಾಗಿ ಟೋಲ್ ಶುಲ್ಕ(Toll Fees) ಪ್ರತಿವರ್ಷ ಹೆಚ್ಚಾಗುತ್ತದೆ. ಇದರಂತೆ ಎಪ್ರಿಲ್ 1 ರಿಂದ ಪರಿಷ್ಕೃತ ಶುಲ್ಕ ಜಾರಿಯಾಗಬೇಕಿತ್ತು. ಆದರೆ, ಲೋಕಸಭಾ ಚುನಾವಣೆಯ(Parliament Election) ಹಿನ್ನೆಲೆಯಲ್ಲಿ ಪರಿಷ್ಕೃತ ಶುಲ್ಕ ಜಾರಿಗೆ ವಿಳಂಬವಾಗಿತ್ತು. ಅಂದಹಾಗೆ ಶುಲ್ಕ ಏರಿಕೆಯು ಸಿಪಿಐ ಆಧಾರಿತ ಹಣದುಬ್ಬರಕ್ಕೆ ಅನುಗುಣವಾಗಿ NHAI ದರ ಪರಿಷ್ಕರಣೆಯಾಗುತ್ತಿರುತ್ತದೆ.

ದೇಶದಲ್ಲಿ ಇರುವ ಫ್ಲಾಜಾಗಳೆಷ್ಟು?
ದೇಶದಲ್ಲಿ ಒಟ್ಟು 855 ಟೋಲ್ ಪ್ಲಾಜಾಗಳಿವೆ. ಈ ಪೈಕಿ 675 ಪ್ಲಾಜಾಗಳು ಸರ್ಕಾರದ ನೆರವಿನೊಂದಿಗೆ ಕಾರ್ಯಾಚರಣೆ ನಡೆಸುತ್ತವೆ. ಉಳಿದ 180 ಪ್ಲಾಜಾಗಳು ಖಾಸಗಿ ಕಂಪನಿಗಳ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸುತ್ತವೆ.

ಇದನ್ನೂ ಓದಿ: Radhika Kumaraswamy: ರಾಧಿಕಾ ಕುಮಾರಸ್ವಾಮಿ ಆಸ್ತಿ ವಿಚಾರ ನಿಮ್ಮ ಊಹೆಗೂ ಮೀರಿದ್ದು! ಅಷ್ಟಕ್ಕೂ ಆ ಸೀಕ್ರೆಟ್ ಇಲ್ಲಿದೆ!

Advertisement
Advertisement