For the best experience, open
https://m.hosakannada.com
on your mobile browser.
Advertisement

Solar Eclipse and Lunar Eclipse 2024: 2024ರಲ್ಲಿ ಸಂಭವಿಸಲಿದೆ ಈ ಎರಡು ಭಯಾನಕ ಗ್ರಹಣ !! ಯಾವಾಗ ಗೊತ್ತಾ ?!

11:55 AM Dec 22, 2023 IST | ಕಾವ್ಯ ವಾಣಿ
UpdateAt: 12:08 PM Dec 22, 2023 IST
solar eclipse and lunar eclipse 2024  2024ರಲ್ಲಿ ಸಂಭವಿಸಲಿದೆ ಈ ಎರಡು ಭಯಾನಕ ಗ್ರಹಣ    ಯಾವಾಗ ಗೊತ್ತಾ
Advertisement

Solar Eclipse and Lunar Eclipse 2024: ಹೊಸ ವರ್ಷದ ಆಗಮನಕ್ಕೆ ನಾವೆಲ್ಲರೂ ಕಾಯುತ್ತಿದ್ದೇವೆ. ಈ ನಡುವೆ 2024ರಲ್ಲಿ ಏನೆಲ್ಲಾ ಸಂಭವಿಸಬಹುದು ಎಂಬ ಕುತೂಹಲಕ್ಕೆ ಇಲ್ಲಿ ಕೆಲವು ಮಾಹಿತಿ ನೀಡಲಾಗಿದೆ . ಅದರಲ್ಲೂ ಆಕಾಶದಲ್ಲಿ ನಡೆಯುವ ಕೌತುಕಗಳಲ್ಲಿ ಗ್ರಹಣ ಕೂಡ ಒಂದು. ಅದೇ ರೀತಿ 2024ರಲ್ಲಿ ಎರಡು ಬಾರಿ ಸೂರ್ಯಗ್ರಹಣ ಹಾಗೂ 2 ಬಾರಿ ಚಂದ್ರಗ್ರಹಣ ಸಂಭವಿಸಲಿದೆ (Solar Eclipse and Lunar Eclipse 2024). ಈ ಕುರಿತ ವಿವರ ಇಲ್ಲಿದೆ. ಅದರಲ್ಲೂ ಜ್ಯೋತಿಷ್ಯ ಹಾಗೂ ಖಗೋಳಶಾಸ್ತ್ರ ಎರಡಲ್ಲೂ ಗ್ರಹಣಕ್ಕೆ ಬಹಳ ಮಹತ್ವವಿದೆ.

Advertisement

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದುಹೋದಾಗ ಸೂರ್ಯಗ್ರಹಣ ಸಂಭವಿಸಿದರೆ, ಸೂರ್ಯ ಹಾಗೂ ಚಂದ್ರ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರಗ್ರಹಣದ ಸಮಯದಲ್ಲಿ ಈ ಮೂರು ಗ್ರಹಗಳು ಒಂದೇ ನೇರದಲ್ಲಿ ಇರುತ್ತವೆ. ಪ್ರಪಂಚದಾದ್ಯಂತ ಸೂರ್ಯ ಹಾಗೂ ಚಂದ್ರಗ್ರಹಣಕ್ಕೆ ಬಹಳಷ್ಟು ಪ್ರಾಮುಖ್ಯವಿದೆ. ಮುಂದಿನ ವರ್ಷ ಗ್ರಹಣ ಯಾವಾಗ ನಡೆಯುತ್ತದೆ, ಎಲ್ಲಿ ಗೋಚರವಾಗಬಹುದು ಎಂಬ ವಿವರ ಇಲ್ಲಿದೆ.

ಸೂರ್ಯ ಗ್ರಹಣ 2024:
2024ರ ಮೊದಲ ಸೂರ್ಯಗ್ರಹಣ ಏಪ್ರಿಲ್‌ 8 ರಂದು ನಡೆಯಲಿದೆ. ಇದು ಸಂಪೂರ್ಣ ಸೂರ್ಯಗ್ರಹಣವಾಗಿರುತ್ತದೆ. ಇದು ಸೌತ್‌ ಪೆಸಿಫಕ್‌ ಮಹಾಸಾಗರದಿಂದ ಆರಂಭವಾಗಿ ಉತ್ತರ ಅಮೆರಿಕವನ್ನು ದಾಟುತ್ತದೆ. ನಂತರ ಮೆಕ್ಸಿಕೊ, ಅಮೆರಿಕ ಮತ್ತು ಕೆನಡಾವನ್ನು ಹಾದು ಹೋಗುತ್ತದೆ. ಈ ನಡುವೆ ಕೋಸ್ಟರಿಕಾ, ಕ್ಯೂಬಾ, ಅರುಬಾ, ಕೇಮನ್‌ ದ್ವೀಪಗಳು, ಡೊಮಿನಿಕಾ, ರೆಂಚ್ ಪಾಲಿನೇಷ್ಯಾ ಮತ್ತು ಜಮೈಕಾದಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ.

Advertisement

ದೃಕ್‌ ಪಂಚಾಗದ ಪ್ರಕಾರ ಈ ಸೂರ್ಯಗ್ರಹಣದ ಅವಧಿ:
ಗ್ರಹಣ ಆರಂಭ ಸಮಯ: ಮಧ್ಯಾಹ್ನ 3.42 (UTC- Coordinated Universal Time)
ಗ್ರಹಣ ಮುಕ್ತಾಯ: ಸಂಜೆ 4.30 (UTC)

ಇದನ್ನು ಓದಿ: Crime News: ಕರಾವಳಿಗರೇ ಎಚ್ಚರ; ಆಕ್ಟಿವ್‌ ಆಗಿದೆ ಮೈಗೆ ಎಣ್ಣೆ, ಗ್ರೀಸ್‌ ಹಚ್ಚಿ ಬರ್ತಿದೆ ನಟೋರಿಯಸ್‌ ಕಳ್ಳರ ಗ್ಯಾಂಗ್‌!!!

2024ರ ಎರಡನೇ ಸೂರ್ಯಗ್ರಹಣ ಅಕ್ಟೋಬರ್‌ 2 ರಂದು ಸಂಭವಿಸಲಿದೆ. ಇದು ಆನ್ಯುಲರ್‌ ಸೂರ್ಯಗ್ರಹಣವಾಗಿರುತ್ತದೆ. ಈ ಗ್ರಹಣವು ದಕ್ಷಿಣ ಅಮೆರಿಕದಲ್ಲಿ ಗೋಚರಿಸುತ್ತದೆ. ಚಂದ್ರನು ಸೂರ್ಯನ ಮುಂದೆ ಚಲಿಸುವಾಗ ಆನ್ಯುಲರ್‌ ಸೂರ್ಯಗ್ರಹಣ ಅಥವಾ ಸೂರ್ಯನ ಸುತ್ತಲೂ ಅಗ್ನಿಜ್ವಾಲೆಯಂತಹ ರಿಂಗ್‌ ಆಕಾರ ಗೋಚರವಾಗುತ್ತದೆ. ಇದು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವುದಿಲ್ಲ. ಭಾಗಶಃ ಸೂರ್ಯಗ್ರಹಣ ಅಂತಲೂ ಕರೆಯುವ ಅನ್ಯೂಲರ್‌ ಸೂರ್ಯಗ್ರಹಣವು ದಕ್ಷಿಣ ಅಮೆರಿಕ, ಅಂಟಾರ್ಟಿಕಾ, ಪೆಸಿಫಿಕ್‌ ಮಹಾಸಾಗರ, ಅಟ್ಲಾಂಟಿಕ್‌ ಸಾಗರ ಮತ್ತು ಉತ್ತರ ಅಮೆರಿಕದಲ್ಲಿ ಗೋಚರಿಸುತ್ತದೆ.

ಗ್ರಹಣದ ಸಮಯ:
ಗ್ರಹಣ ಆರಂಭ: ಮಧ್ಯಾಹ್ನ 3.42
ಗ್ರಹಣ ಅಂತ್ಯ ಸಮಯ: ಸಂಜೆ 4.50

ಈ ಎರಡೂ ಗ್ರಹಣಗಳು ಭಾರತದಲ್ಲಿ ಗೋಚರವಾಗುವುದಿಲ್ಲ. ಆ ಕಾರಣಕ್ಕೆ ಸೂತಕ ಛಾಯೆ ಭಾರತೀಯರಿಗೆ ಇರುವುದಿಲ್ಲ.

ಚಂದ್ರಗ್ರಹಣ:
2024ರ ಮೊದಲ ಚಂದ್ರಗ್ರಹಣವು ಮಾರ್ಚ್‌ 25 ರಂದು ಸಂಭವಿಸಲಿದೆ. ಇದು ಪೆನಂಬ್ರಲ್‌ ಚಂದ್ರಗ್ರಹಣವಾಗಿರುತ್ತದೆ. ಪೆನಂಬ್ರಲ್‌ ಸೂರ್ಯಗ್ರಹಣದ ಸಮಯದಲ್ಲಿ ಚಂದ್ರನು ಭೂಮಿಯ ಹೊರ ಭಾಗದ ನೆರಳಿನ ಮೇಲೆ ಹಾದು ಹೋಗುತ್ತಾನೆ. ಇದನ್ನು ಪೆನಂಬ್ರಾ ಎಂದು ಕರೆಯುತ್ತಾರೆ. ಇದು ಯುರೋಪ್, ಆಸ್ಟ್ರೇಲಿಯಾ ಮತ್ತು ಆಫ್ರಿಕಾ, ಉತ್ತರ/ಪೂರ್ವ ಏಷ್ಯಾ, ಉತ್ತರ ಅಮೇರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್ ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕಾದಲ್ಲಿ ಗೋಚರಿಸುತ್ತದೆ.

ಗ್ರಹಣ ಆರಂಭ: ಬೆಳಗಿನ ಜಾವ 4.53
ಗ್ರಹಣ ಮುಕ್ತಾಯ: ಬೆಳಿಗ್ಗೆ 7.12

ಎರಡನೇ ಚಂದ್ರಗ್ರಹಣವು ಸೆಪ್ಟೆಂಬರ್‌ 18 ರಂದು ಸಂಭವಿಸಲಿದೆ. ಇದು ಭಾಗಶಃ ಚಂದ್ರಗ್ರಹಣವಾಗಿರುತ್ತದೆ. ಇದು ಯುರೋಪ್‌, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ/ಪಶ್ಚಿಮ ಉತ್ತರ ಅಮೆರಿಕ, ಉತ್ತರ/ಪೂರ್ವ ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಆರ್ಕ್ಟಿಕ್ ಮತ್ತು ಅಂಟಾರ್ಟಿಕಾ ಭಾಗದಲ್ಲಿ ಗೋಚರಿಸುತ್ತದೆ.

Advertisement
Advertisement
Advertisement