For the best experience, open
https://m.hosakannada.com
on your mobile browser.
Advertisement

New scheme: ರಾಜ್ಯದ 'ಗೃಹಲಕ್ಷ್ಮೀ'ಯರ ಖಾತೆಗೆ ಜಮಾ ಆಗಲಿದೆ 90,000 !! ಸರ್ಕಾರದಿಂದ ಹೊಸ ಘೋಷಣೆ

02:53 PM Jan 05, 2024 IST | ಹೊಸ ಕನ್ನಡ
UpdateAt: 02:58 PM Jan 05, 2024 IST
new scheme  ರಾಜ್ಯದ  ಗೃಹಲಕ್ಷ್ಮೀ ಯರ ಖಾತೆಗೆ ಜಮಾ ಆಗಲಿದೆ 90 000    ಸರ್ಕಾರದಿಂದ ಹೊಸ ಘೋಷಣೆ
Advertisement

News scheme: ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಈಗಂತೂ ರಾಜ್ಯ ಸರ್ಕಾರವು ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿ ಅವರ ಏಳಿಗೆಗೆ ಸಹಕರಿಸುತ್ತಿದೆ. ಅಂತೆಯೇ ಇದೀಗ ಮೊದಲೇ ಜಾರಿಯಾಗಿದ್ದ ಉದ್ಯೋಗಿನಿ(Udyogini scheme)ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಸರ್ಕಾರ 90, 000 ರೂಪಾಯಿಗಳನ್ನು ನೀಡಲು ತೀರ್ಮಾನಿಸಿದೆ.

Advertisement

ಹೌದು, ನಿರುದ್ಯೋಗಿ ಮಹಿಳೆಯರಿಗಾಗಿ ಸ್ವಯಂ ಉದ್ಯೋಗ ಹೊಂದಲು ನೆರವಾಗಲು ರಾಜ್ಯ ಸರ್ಕಾರ ಉದ್ಯೋಗಿನಿ ಯೋಜನೆ ಜಾರಿ ಮಾಡಿದೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದು, ಸಾಲ ಸೌಲಭ್ಯ ಒದಗಿಸುತ್ತಿದೆ.

ಎಸ್ಟು ಸಹಾಯ ಧನ ಸಿಗುತ್ತದೆ?

Advertisement

ಈ ಯೋಜನೆಯಡಿ ಮಹಿಳೆಯರು 90 ಸಾವಿರ ರೂಪಾಯಿಗಳನ್ನು ಮಹಿಳೆಯರು ಪಡೆದುಕೊಳ್ಳಬಹುದು. ಅದೇ ರೀತಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಗೆ 1.50 ಲಕ್ಷಗಳ ವರೆಗೆ ಸಬ್ಸಿಡಿ ಸಿಗುತ್ತದೆ. ಬೇಗ ಸಾಲ (Loan) ಹಿಂತಿರುಗಿಸಿದರೆ ಅಂತಹ ಮಹಿಳೆಯರು 5 ಲಕ್ಷ ರೂಪಾಯಿಗಳವರೆಗೂ ಸಾಲ (Loan) ಪಡೆಯಬಹುದು.

ಯಾವೆಲ್ಲಾ ಉದ್ಯೋಗಕ್ಕೆ ಈ ಸಾಲ ದೊರೆಯುತ್ತದೆ?

ಟೈಲರಿಂಗ್, ಪಾರ್ಲರ್, ಹೋಂ ಮೇಡ್ ಫುಡ್, ಪ್ರಿಂಟಿಂಗ್ ಶಾಪ್, ಅಗರಬತ್ತಿ ತಯಾರಿಕೆ ಮೊದಲಾದ ಗುಡಿ ಕೈಗಾರಿಕೆಗಳು ಮೊದಲಾದ ಉದ್ಯಮಗಳಲ್ಲಿ ತೊಡಗಿಕೊಳ್ಳುವ ಮಹಿಳೆಯರಿಗೆ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸರ್ಕಾರ ಧನ ಸಹಾಯ ನೀಡಲಿದೆ.

ಯಾರು ಅರ್ಹರು?

ಈ ಸೌಲಭ್ಯಕ್ಕೆ 18ರಿಂದ 55 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ/ಪಂಗಡದವರಾಗಿದ್ದಲ್ಲಿ ವಾರ್ಷಿಕ ಆದಾಯ 2 ಲಕ್ಷ ರೂ.ಗಳ ಒಳಗಿರಬೇಕು. ಸಾಮಾನ್ಯ ವರ್ಗದವರಾಗಿದ್ದಲ್ಲಿ ವಾರ್ಷಿಕ ಆದಾಯ 1.5 ಲಕ್ಷ ರೂ.ಗಳ ಒಳಗಿರಬೇಕು.

ಇದನ್ನು ಓದಿ: Karnataka government : ಇನ್ಮುಂದೆ ಈ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಸಿಗೋದಿಲ್ಲ ಯಾವುದೇ ಸಂಬಳ - ಸರ್ಕಾರದಿಂದ ಖಡಕ್ ನಿರ್ಧಾರ !!

ಯಾವೆಲ್ಲ ಬ್ಯಾಂಕ್ಗಳು ಸಾಲ ನೀಡುತ್ತವೆ?

ದೇಶದ ಅನೇಕ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಅನೇಕ ಬ್ಯಾಂಕ್ಗಳು ಉದ್ಯೋಗಿನಿ ಯೋಜನೆಯಡಿ ಸಾಲ ನೀಡುತ್ತಿವೆ. ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್, ಸಾರಸ್ವತ ಬ್ಯಾಂಕ್ಗಳಲ್ಲಿಯೂ ಸಾಲ ಪಡೆಯಹುದಾಗಿದೆ. ಇವುಗಳು ಮಾತ್ರವಲ್ಲದೆ ಎಲ್ಲ ವಾಣಿಜ್ಯ ಬ್ಯಾಂಕ್ಗಳು, ಸಹಕಾರಿ ಬ್ಯಾಂಕ್ಗಳಿಂದಲೂ ಸಾಲ ಪಡೆಯಬಹುದಾಗಿದೆ.

ಏನೆಲ್ಲಾ ದಾಖಲೆ ಬೇಕು?

ಆಧಾರ್ ಕಾರ್ಡ್

ಜನನ ಪ್ರಮಾಣಪತ್ರ

ಸ್ಥಳೀಯ ಶಾಸಕ ಅಥವಾ ಸಂಸದನ ಲೆಟರ್ಹೆಡ್ ಇರುವ ಪತ್ರ

ಬಿಪಿಎಲ್ ಕಾರ್ಡ್ನ ಪ್ರತಿ

ಜಾತಿ ಪ್ರಮಾಣಪತ್ರ

ಆದಾಯ ಪ್ರಮಾಣಪತ್ರ

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಿ:

ಬೇರೆ ಬೇರೆ ಬ್ಯಾಂಕ್ ಗಳು ಉದ್ಯೋಗಿನಿ ಯೋಜನೆಗೆ ಸಾಲ ಸೌಲಭ್ಯ ನೀಡುತ್ತದೆ. ಹಾಗಾಗಿಯೇ ನೀವು ಹತ್ತಿರದ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಮಾಹಿತಿ ಪಡೆಯಬಹುದು. ಅಥವಾ ಆನ್ಲೈನ್ ನಲ್ಲಿ ಬ್ಯಾಂಕ್‌ ನ ಅಧಿಕೃತ ವೆಬ್ ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

Advertisement
Advertisement
Advertisement