ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bengaluru: ಬೆಂಗಳೂರಿನ ಎಲ್ಲಾ ಹೋಟೆಲ್‌, ಪಬ್‌, ಬಾರ್‌ & ರೆಸ್ಟೋರೆಂಟ್‌ಗಳಿಗೆ ಹೊಸ ರೂಲ್ಸ್‌ ಜಾರಿ – ಮಿಸ್ ಮಾಡ್ದೇ ಪಾಲಿಸಲು ಸರ್ಕಾರದಿಂದ ಕಟ್ಟಾಜ್ಞೆ

06:03 PM Jul 27, 2024 IST | ಸುದರ್ಶನ್
UpdateAt: 06:03 PM Jul 27, 2024 IST
Advertisement

Bengaluru: ಬೆಂಗಳೂರು ಹೋಟೆಲ್‌, ಪಬ್‌, ಬಾರ್‌, ರೆಸ್ಟೋರೆಂಟ್‌ (Bar And Restaurant) ಹಾಗೂ ಕಾಫಿ ಬಾರ್‌ಗಳಿಗೆ ಹೊಸ ನಿಯಮಗಳನ್ನ ಜಾರಿಗೊಳಿಸಿಲಾಗಿದ್ದು, ಯಾವ ರೂಲ್ಸ್ ಕೂಡ ಬ್ರೇಕ್ ಆಗದಂತೆ ತಪ್ಪದೇ ಪಾಲಿಸಬೇಕೆಂದು ಸರ್ಕಾರ ಕಟ್ಟಾಜ್ಞೆ ಹೊರಡಿಸಿದೆ.

Advertisement

BBMP ಹೊರಡಿಸಿದ ಹೊಸ ನಿಯಮಗಳು:
* 30 ಕೊಠಡಿಗಳಿಗಿಂತ ಮೇಲ್ಪಟ್ಟ ಹೋಟೆಲ್ (Bengaluru Hotels), ಬಾರ್ & ರೆಸ್ಟೋರೆಂಟ್, ಪಬ್ ಇದ್ರೆ 30 ಕುರ್ಚಿ ಇರುವ ಧೂಮಪಾನ ಪ್ರದೇಶ ನಿಗದಿ ಮಾಡಬೇಕು
* ಧೂಮಪಾನ ವಲಯ (Smoking zone) ನಿರ್ಮಾಣ ಮಾಡಿ ಪೋಟೋ ಸಮೇತ ಸ್ಮೋಕಿಂಗ್ ಝೂನ್‌ಗೆ ಪರವಾನಗಿಗೆ ಅರ್ಜಿ ಹಾಕಬೇಕು
* ಅಧಿಕಾರಿಗಳು ಸ್ಥಳಕ್ಕೆ ಭೇಟಿ ನಿಯಮಾನುಸಾರ ಸ್ಮೋಕಿಂಗ್ ಝೂನ್ ಇದೆಯೇ ಅಂತ ರಿಪೋರ್ಟ್ ಕೊಟ್ಟರೆ, ಆಮೇಲೆ ಎನ್‌ಒಸಿ ವಿತರಣೆಗೆ ಸೂಚನೆ ನೀಡಲಾಗುತ್ತದೆ.
* ಸ್ಮೋಕಿಂಗ್ ಏರಿಯಾ ಕೊಠಡಿಗೆ ಎಂಟ್ರಿ ಆದಾಗ ಸ್ವಯಂಚಾಲಿತವಾಗಿ ಬಾಗಿಲು ಬಂದ್‌ ಆಗುವ ರೀತಿಯಲ್ಲಿ ಇರಬೇಕು
* ಸ್ಮೋಕಿಂಗ್ ಏರಿಯಾ ಅಂತ ನಾಮಫಲಕ ದೊಡ್ಡದಾಗಿ ಇರಬೇಕು. 60-30ರ ನಿಯಮದಲ್ಲಿ ಅಕ್ಷರಗಳು ಇರಬೇಕು
* ಸ್ಮೋಕಿಂಗ್‌ ಝೂನ್‌ಗಳಲ್ಲಿ ಏರ್‌ ಫ್ಲೋ ಸಿಸ್ಟಂ ಇರಬೇಕು.
* ಪಕ್ಕದ ಮನೆ ಅಥವಾ ಪಕ್ಕದ ಕಟ್ಟಡಗಳಿಗೆ ಹೊಗೆ ಹೋಗುವಂತೆ ಇರಬಾರದು
* ಸ್ಮೋಕಿಂಗ್ ಝೂನ್ ನಿಯಮ ಉಲ್ಲಂಘನೆಯಾದ್ರೆ ಕಾನೂನು ಕ್ರಮ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.

ಅಂದಹಾಗೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಹೋಟೆಲ್‌, ಬಾರ್‌ & ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ವಲಯ ಮಾಡದೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಬಿಎಂಪಿ ಹೋಟೆಲ್, ಪಬ್, ಬಾರ್ ಗಳಿಗೆ ಹೊಸ ನಿಯಮ ಜಾರಿಗೊಳಿಸಿದೆ.

Advertisement

Related News

Advertisement
Advertisement