ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Driving Licence: ಡ್ರೈವಿಂಗ್ ಲೈಸೆನ್ಸ್ ಬೇಕಂದ್ರೆ RTO ಎದುರು ಕ್ಯೂ ನಿಲ್ಲಬೇಕಿಲ್ಲ - ಬಂತು ಹೊಸ ನಿಯಮ !!

Driving Licence: ಸಾರಿಗೆ ಇಲಾಖೆಯು ಇದೀಗ ಡ್ರೈವಿಂಗ್ ಲೈಸೆನ್ಸ್ (DL) ಹಾಗೂ RC ಬಗ್ಗೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ
09:06 AM May 03, 2024 IST | ಸುದರ್ಶನ್
UpdateAt: 09:58 AM May 03, 2024 IST
Advertisement

Driving Licence: ವಾಹನ ಚಲಾವಣೆ, ರಸ್ತೆ ನಿಯಮಗಳ ಕುರಿತು ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುವ ಸಾರಿಗೆ ಇಲಾಖೆಯು ಇದೀಗ ಡ್ರೈವಿಂಗ್ ಲೈಸೆನ್ಸ್ (DL) ಹಾಗೂ RC ಬಗ್ಗೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಈ ಹೊಸ ನಿಯಮ ಹೊಸದಾಗಿ ಲೈಸೆನ್ಸ್ ಮಾಡಿಸುವವರ ಮುಖದಲ್ಲಿ ಮಂದಹಾಸ ಮೂಡಿಸಿದೆ.

Advertisement

ಇದನ್ನೂ ಓದಿ: Digital House Arrest: ಡಿಜಿಟಲ್ ಹೌಸ್ ಅರೆಸ್ಟ್ ಎಂದರೇನು? : ಇದನ್ನು ನಿಭಾಯಿಸುವುದು ಹೇಗೆ? : ಇಲ್ಲಿದೆ ಉತ್ತರ

ಇದುವರೆಗೂ ನೀವು ಡ್ರೈವಿಂಗ್ ಲೈಸೆನ್ಸ್ ಬೇಕು ಅಂದರೆ RTO ನಲ್ಲಿ ಕ್ಯೂ ನಿಂತು ಟೆಸ್ಟ್ ಡ್ರೈವ್ ನೀಡಿ ಪಡೆದುಕೊಳ್ಳಬೇಕಿತ್ತು. ಅದರಿಗ ಸರ್ಕಾರ ಈ ನಿಯಮದಲ್ಲಿ ಕೆಲ ಬದಲಾವಣೆಗಳನ್ನು ತರಲು ತೀರ್ಮಾನಿಸಿದ್ದು ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ (Driving License) ಪಡೆದುಕೊಳ್ಳಲು ಆರ್‌ಟಿಓ ಆಫೀಸ್ ಬಳಿಯೇ ಹೋಗಬೇಕಿಲ್ಲ, ಬದಲಿಗೆ ಯಾವುದಾದರೂ ಖಾಸಗಿ ಸಂಸ್ಥೆಯಲ್ಲಿ ಡ್ರೈವ್ ಟೆಸ್ಟ್ ಮಾಡಿಸಿ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು.

Advertisement

ಇದನ್ನೂ ಓದಿ: CAA: ಮೇ ತಿಂಗಳಿನಿಂದ ಸಿಎಎ ಪೌರತ್ವ ಗ್ಯಾರಂಟಿ

ಹೌದು, ಈ ಹೊಸ ನಿಯಮವನ್ನು ಜೂನ್ 1ನೇ ತಾರೀಕು 2024ರಂದು ಸರ್ಕಾರ ಜಾರಿಗೆ ತರಲಿದ್ದು, ಅದಾಗಲೇ ಇದರ ನೋಟಿಸನ್ನು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಬ್ರೋಕರ್ ಗಳ ಕಾಟವೂ ತಪ್ಪಲಿದೆ ಜೊತೆಗೆ ಪದೇ ಪದೇ RTO ಆಫೀಸ್ ಗೆ ಅಲೆಯುವ ಕಾಟವು ಇರುವುದಿಲ್ಲ. ಒಟ್ಟಿನಲ್ಲಿ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಂತಾಗಿದೆ.

• ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅಪ್ಲಿಕೇಶನ್ ಹಾಕುವುದು ಹೇಗೆ?

1. ನೀವೇನಾದರೂ ಹಲವು ತಿಂಗಳಿಂದ ಡ್ರೈವಿಂಗ್ ಲೈಸನ್ಸ್ (Driving License) ಪಡೆದುಕೊಳ್ಳಬೇಕೆಂದು ಯೋಚಿಸುತ್ತಿದ್ದರೆ ಅಂತರ್ಜಾಲದಲ್ಲಿ ಲಭ್ಯವಿರುವ ಅಧಿಕೃತ ವೆಬ್ಸೈಟ್ https://parivahan.gov.in ಗೆ ಭೇಟಿ ನೀಡಿ.

2. ನಂತರ ಹೋಂ ಪೇಜ್ ನಲ್ಲಿ ಪ್ರಕಟವಾಗುವ ಅಪ್ಲೈ ಡ್ರೈವಿಂಗ್ ಲೈಸೆನ್ಸ್ (Apply Driving License) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

3. ಅಪ್ಲಿಕೇಶನ್ ಫಾಮ್ (Application Form) ಒಂದು ಲಭ್ಯವಾಗುತ್ತದೆ ನಿಮಗೆ ಬೇಕಿದ್ದರೆ ಅದನ್ನು ಪ್ರಿಂಟ್ ತೆಗೆದುಕೊಳ್ಳಬಹುದು.

4. ಡ್ರೈವಿಂಗ್ ಲೈಸೆನ್ಸ್ ಅನ್ನು ಆಫ್ ಲೈನ್ ಮತ್ತು ಆನ್ ಲೈನ್ ನಲ್ಲಿ ಅಪ್ಲೈ ಮಾಡಬಹುದು.

5. ಸೂಕ್ತವಾದ ಮಾಹಿತಿಗಳನ್ನು ಅಪ್ಲಿಕೇಶನ್ ಫಾರ್ಮ್ ನಲ್ಲಿ ದಾಖಲಿಸಿ ಹಾಗೂ ಕೇಳಲಾಗುವಂತಹ ದಾಖಲಾತಿಗಳನ್ನೆಲ್ಲ ಅಪ್ಲೋಡ್ ಮಾಡಿ.

6. ಈ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮ ಹತ್ತಿರದ ಆರ್ ಟಿ ಓ ಆಫೀಸ್ (RTO office) ಗೆ ಭೇಟಿ ನೀಡಿ ಅಪ್ಲಿಕೇಶನ್ ಫಾರ್ಮಿನ ಜೊತೆಗೆ ಬೇಕಾಗುವ ದಾಖಲಾತಿಗಳನ್ನು ಒದಗಿಸಿ ಹಾಗೂ ನಿಮ್ಮ ಚಾಲನ ಕೌಶಲ್ಯದ ಪುರಾವೆಯನ್ನು ನೀಡಿ.

ಶುಲ್ಕ ಎಷ್ಟು,

• ಲರ್ನರ್ ಲೈಸೆನ್ಸ್/Learner License – ₹200

ಲರ್ನರ್ ಲೈಸೆನ್ಸ್ ರಿನಿವಲ್/Learner License Renewal -₹200

• ಇಂಟರ್ನ್ಯಾಷನಲ್ ಲೈಸೆನ್ಸ್/International License – ₹1000

• ಪರ್ಮನೆಂಟ್ ಲೈಸೆನ್ಸ್/Permanent License -₹200

Related News

Advertisement
Advertisement