ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

New ration card application : ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ದಿನಾಂಕ ಬಿಡುಗಡೆ! ಈ ದಾಖಲೆಗಳು ಕಡ್ಡಾಯವಾಗಿ ಬೇಕು!

New ration card application: ಎರಡು ವರ್ಷಗಳ ಹಿಂದೆ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದವರ ದಾಖಲೆಗಳನ್ನು  ಪ್ರಸ್ತುತ ಪರಿಶೀಲನೆ ಮುಗಿದ ನಂತರ ಅವರಿಗೆ ಹೊಸ ರೇಷನ್ ಕಾರ್ಡ್ಗಳನ್ನು ಮೊದಲು ವಿತರಣೆ ಮಾಡಲಾಗುತ್ತದೆ.
12:25 PM Jun 17, 2024 IST | ಕಾವ್ಯ ವಾಣಿ
UpdateAt: 12:27 PM Jun 17, 2024 IST
Advertisement

New ration card application : ಎರಡು ಮೂರು ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಜನ ಕಾಯುತ್ತಿದ್ದು, ಇದೀಗ ಕರ್ನಾಟಕ ಸರ್ಕಾರ ಕಡೆಯಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ದಿನಾಂಕ ನಿಗದಿ ಮಾಡಲಾಗಿದೆ. ಸದ್ಯ ಖಾಸಗಿ ಮಾಧ್ಯಮಗಳ ಮೂಲಕ ಬಂದಿರುವ ಮಾಹಿತಿ ಪ್ರಕಾರ ಈಗಾಗಲೇ ಎರಡು ವರ್ಷಗಳ ಹಿಂದೆ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದವರ ದಾಖಲೆಗಳನ್ನು  ಪ್ರಸ್ತುತ ಪರಿಶೀಲನೆ ಮುಗಿದ ನಂತರ ಅವರಿಗೆ ಹೊಸ ರೇಷನ್ ಕಾರ್ಡ್ಗಳನ್ನು ಮೊದಲು ವಿತರಣೆ ಮಾಡಲಾಗುತ್ತದೆ. ನಂತರ ಹೊಸ ರೇಷನ್ ಕಾರ್ಡಿಗೆ ಅರ್ಜಿ (New ration card application) ಹಾಕಲು ಅವಕಾಶ ನೀಡಲಾಗುತ್ತದೆ.

Advertisement

ಹೊಸ ರೇಷನ್ ಕಾರ್ಡ್ ವಿತರಣೆ ಮುಗಿದ ಮೇಲೆ ಮತ್ತೆ  ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಮಾಡಿ ಕೊಡಲಾಗುತ್ತದೆ. ಒಟ್ಟಿನಲ್ಲಿ ಜೂನ್ ತಿಂಗಳು ಮುಗಿಯುವುದರೊಳಗಾಗಿ ಹೊಸ ರೇಷನ್ ಕಾರ್ಡ್ ಗೆ ಹಾಕಲು ಸರ್ಕಾರವು ಅವಕಾಶ ನೀಡುವುದಾಗಿ ಮಾಹಿತಿ ಬಂದಿದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಬೇಕಾಗುವ ಪ್ರಮುಖ ದಾಖಲೆಗಳು:

Advertisement

ಕುಟುಂಬ ಸದಸ್ಯರ ಆಧಾರ್ ಕಾರ್ಡ್

ಆದಾಯ ಪ್ರಮಾಣ ಪತ್ರ

ಜಾತಿ ಪ್ರಮಾಣ ಪತ್ರ

ಕುಟುಂಬದ ವಾಸ ಸ್ಥಳ ಪ್ರಮಾಣ ಪತ್ರ

ಜನನ ಪ್ರಮಾಣ ಪತ್ರ (ಆರು ವರ್ಷಕ್ಕಿಂತ ಒಳಗಿನ ಮಕ್ಕಳಿಗೆ ಮಾತ್ರ)

ಮೊಬೈಲ್ ಸಂಖ್ಯೆ

ಈ ಎಲ್ಲಾ ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅಥವಾ ತಿದ್ದುಪಡಿ ಮಾಡಿಕೊಳ್ಳಲು ನೀವು ನಿಮ್ಮ ಹತ್ತಿರದ ಸಿ ಎಸ್ ಸಿ ಕೇಂದ್ರ, ಕರ್ನಾಟಕ ಒನ್, ಗ್ರಾಮ್ ಒನ್ , ಬೆಂಗಳೂರು ಒನ್, ಮುಂತಾದ ಆನ್ಲೈನ್ ಸೆಂಟರ್ಗಳಿಗೆ ಭೇಟಿ ನೀಡುವ ಮೂಲಕ ಮೇಲೆ ನೀಡಲಾದ ಎಲ್ಲಾ ದಾಖಲೆಗಳನ್ನು ನೀಡಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವುದು ಅಥವಾ ತಿದ್ದುಪಡಿ ಮಾಡಿಸಿಕೊಳ್ಳಬಹುದು.

 

Advertisement
Advertisement