ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

New Parliament: ರಾಮ ಮಂದಿರ ಬಳಿಕ ಹೊಸ ಪಾರ್ಲಿಮೆಂಟ್ ನಲ್ಲೂ ಮಳೆ ನೀರು ಸೋರಿಕೆ !!

New Parliament: ಅಯೋಧ್ಯೆಯಲ್ಲಿನ ಮೊದಲ ಮಳೆಗೇ ಮಂದಿರದ ಗರ್ಭಗುಡಿ ಸೋರುತ್ತಿದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಹೊಸದಾಗಿ ನಿರ್ಮಿಸಿರುವ ಪಾರ್ಲಿಮೆಂಟ್ ಕೂಡ ಮಳೆಗೆ ಸೋರುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ.
05:51 PM Aug 01, 2024 IST | ಸುದರ್ಶನ್
UpdateAt: 05:51 PM Aug 01, 2024 IST
Advertisement

New Parliament: ಸುಮಾರು ಒಂದು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಯೋಧ್ಯೆಯ ರಾಮಮಂದಿರ(Rama Mandir) ಅವ್ಯವಸ್ಥೆಯ ಕೂಪವಾಗುತ್ತಿದ್ದು ಅಯೋಧ್ಯೆಯಲ್ಲಿನ ಮೊದಲ ಮಳೆಗೇ ಮಂದಿರದ ಗರ್ಭಗುಡಿ ಸೋರುತ್ತಿದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಹೊಸದಾಗಿ ನಿರ್ಮಿಸಿರುವ ಪಾರ್ಲಿಮೆಂಟ್(NeW Parliament) ಕೂಡ ಮಳೆಗೆ ಸೋರುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ.

Advertisement

ಹೌದು, ಟ್ವಿಟರ್ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್ 'ಸೋರುತಿಹುದು ಸಂಸತ್ ಮಾಳಿಗೆ, ಅಜ್ಞಾನದಿಂದ, ಭ್ರಷ್ಟರಿಂದ ಸೋರುತಿಹುಹುದು ದೇಶದ ಮಾಳಿಗೆ. ಪಾರ್ಲಿಮೆಂಟ್ ಒಳಗೆ ಮಳೆ ನೀರು ಸೋರಿಕೆ, ಹೊರಗೆ ಪ್ರಶ್ನೆಪತ್ರಿಕೆ ಸೋರಿಕೆ ಎಂದು ಕಾಂಗ್ರೆಸ್(Congress) ಟ್ವೀಟ್ ನಲ್ಲಿ ವ್ಯಂಗ್ಯವಾಡಿದೆ.

Advertisement

ಕಾಂಗ್ರೆಸ್ ಪೋಸ್ಟ್ ನಲ್ಲಿ ಏನಿದೆ?
ಸೋರುತಿಹುದು ಸಂಸತ್ ಮಾಳಿಗೆ, ಅಜ್ಞಾನದಿಂದ, ಭ್ರಷ್ಟರಿಂದ ಸೋರುತಿಹುಹುದು ದೇಶದ ಮಾಳಿಗೆ. ಪಾರ್ಲಿಮೆಂಟ್ ಒಳಗೆ ಮಳೆ ನೀರು ಸೋರಿಕೆ, ಹೊರಗೆ ಪ್ರಶ್ನೆಪತ್ರಿಕೆ ಸೋರಿಕೆ! 20,000 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸೆಂಟ್ರಲ್ ವಿಸ್ತಾ ಎಂಬ ನೂತನ ಸಂಸತ್ ಭವನದ ಒಳಗೆ ಮೊದಲ ವರ್ಷಕ್ಕೆ ಮಳೆ ನೀರು ಸೋರಿಕೆಯಾಗಿದೆ.
ಅಚ್ಚೆ ದಿನಗಳ ವಿಕಾಸದಲ್ಲಿ ವಾರಕ್ಕೆ ಮೂರು ಸೇತುವೆಗಳು ಮುರಿದು ಬೀಳುತ್ತಿವೆ, ದಿನಕ್ಕೊಂದು ರೈಲು ಹಳಿ ತಪ್ಪುತ್ತಿವೆ, ರಾಮಮಂದಿರದೊಳಗೆ ನೀರು ಇಳಿಯುತ್ತಿದೆ, ಸಂಸತ್ ಭವನವೂ ಸೋರುತ್ತಿದೆ. ಮೋದಿಯವರ 10 ವರ್ಷದ ಆಡಳಿತದಲ್ಲಿ ಒಂದೇ ಒಂದು ಲೋಪವಿಲ್ಲದ ಕೆಲಸ ಆಗಿದೆಯೇ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Jharkhand : 3 ತಿಂಗಳ ಹಿಂದೆ ಕಾಣೆಯಾಗಿದ್ದ ಹುಡುಗಿ ಗುಹೆಯೊಳಗೆ ಹಾವಾಗಿ ಪತ್ತೆ !! ಏನಿದು ವಿಸ್ಮಯ?

Related News

Advertisement
Advertisement