ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

HSRP ನಂಬರ್ ಪ್ಲೇಟ್ ಅಳವಡಿಕೆ- ಎದುರಾಯ್ತು ಹೊಸ ಸಮಸ್ಯೆ !!

HSRP ನಂಬರ್‌ ಪ್ಲೇಟ್ ಅಳವಡಿಸಲು ಸಾರಿಗೆ ಇಲಾಖೆ ಮೂರು ತಿಂಗಳು ಕಾಲಾವಕಾಶ ನೀಡಿದೆ. ಅಂದರೆ ಮೇ 31 ಕೊನೆಯ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದೆ
10:22 AM May 02, 2024 IST | ಸುದರ್ಶನ್
UpdateAt: 10:25 AM May 02, 2024 IST

HSRP ನಂಬರ್‌ ಪ್ಲೇಟ್ ಅಳವಡಿಸಲು ಸಾರಿಗೆ ಇಲಾಖೆ ಮೂರು ತಿಂಗಳು ಕಾಲಾವಕಾಶ ನೀಡಿದೆ. ಅಂದರೆ ಮೇ 31 ಕೊನೆಯ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದೆ. ಈ ಗಡುವು ಮುಗಿಯಲು ಇನ್ನೇನು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದೆ. ಈ ನಡುವೆ ವಾಹನ ಸವಾರರಿಗೆ ಹೊಸ ಸಮಸ್ಯೆ ಎದುರಾಗಿದೆ.

Advertisement

ಇದನ್ನೂ ಓದಿ: Mangaluru: ಹಿರಿಯ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಹೃದಯಾಘಾತದಿಂದ ಸಾವು

ಹೌದು, ದೇಶಾದ್ಯಂತ ಏಕೀಕೃತ ವಾಹನ ನೋಂದಣಿ ಸಂಖ್ಯೆ ಫಲಕ ಅಳವಡಿಕೆ ಹಾಗೂ ವಾಹನಗಳ ಸುರಕ್ಷತೆ ದೃಷ್ಟಿಯಿಂದಾಗಿ ಸಾರಿಗೆ ಇಲಾಖೆ 2019ರ ಏಪ್ರಿಲ್‌ಗಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ರಾಜ್ಯದಲ್ಲಿ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ (HSRP) ಅಳವಡಿಕೆ ಏರಿಕೆ ಕಾಣುತ್ತಿದ್ದ ಕಾರಣ ಅದನ್ನು ಮೇ 31 ರ ತನಕ ವಿಸ್ತರಿಸಿದೆ. ಆದರೀಗ ದಿಢೀರ್ ಎಂಬಂತೆ ಹೊಸ ಸಮಸ್ಯೆ ಎದುರಾಗಿದೆ.

Advertisement

ಇದನ್ನೂ ಓದಿ: Prajwal Revanna: ಅಶ್ಲೀಲ ವೀಡಿಯೋ ಪ್ರಕರಣ; ಕಾರು ಚಾಲಕ ಕಾರ್ತಿಕ್‌ ಎಸ್ಕೇಪ್‌

ಏನಿದು ಹೊಸ ಸಮಸ್ಯೆ?

ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅನ್ನು ಅದರ ಅಧಿಕೃತ ಕಂಪನಿಗಳಿಂದ ಪಡೆಬೇಕಿದೆ. ಆದರೆ ಈಗ ನೋಂದಣಿಗೆ ಮುಂದಾಗಿರುವ fiat, cielo ambassador, LML, kinetic honda ಮುಂತಾದ ವಾಹನಗಳ ಮಾಲೀಕರು ಸಮಸ್ಯೆ ಎದುರಿಸುತ್ತಿದ್ದಾರೆ. ಯಾಕೆಂದರೆ ಇಂತಹ ಹಲವು ಕಂಪನಿಗಳು ಸದ್ಯಕ್ಕೆ ಇಲ್ಲ. ಕೆಲವು ಕಂಪನಿಗಳು ಭಾರತದ ತಯಾರಿಕಾ ಘಟಕ ಮುಚ್ಚಿ ವಿದೇಶಕ್ಕೆ ಸ್ಥಳಾಂತರಗೊಂಡಿವೆ. ಆದ್ದರಿಂದ ಅಧಿಕೃತ ಮಾರಾಟಗಾರರನ್ನು ಹುಡುಕುವುದು ಹೇಗೆ? ಎಂಬುದು ವಾಹನ ಮಾಲೀಕರ ಪ್ರಶ್ನೆಯಾಗಿದೆ.

ಅಂದಹಾಗೆ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ ನೋಂದಣಿಗಾಗಿ ಸಾರಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾರಾಟಗಾರರನ್ನು ಆಯ್ಕೆ ಮಾಡಬೇಕು. ಆದರೆ ದೇಶದಲ್ಲಿ ತಯಾರಿಕಾ ಘಟಕ ಮುಚ್ಚಿರುವ ಕಂಪನಿಗಳನ್ನು ಆಯ್ಕೆ ಮಾಡುವುದು ಹೇಗೆ? ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಹೀಗಾಗಿ ಈ ತಾಂತ್ರಿಕ ಕಾರಣದಿಂದ ಮೇ 31ರ ಗಡುವಿನೊಳಗೆ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ಕುರಿತು ನಿರ್ದೇಶನ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

Advertisement
Advertisement
Next Article