ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Guidelines For Govt Employees: ಸರ್ಕಾರಿ ನೌಕರರೇ ಗಮನಿಸಿ- ಕೇಂದ್ರದಿಂದ ಬಂದಿದೆ ನಿಮಗೊಂದು ಖಡಕ್ ಎಚ್ಚರಿಕೆ !!

01:07 PM Dec 13, 2023 IST | ಕಾವ್ಯ ವಾಣಿ
UpdateAt: 01:14 PM Dec 13, 2023 IST
Advertisement

Guidelines For Govt Employees: ಸರ್ಕಾರಿ ನೌಕರರು ಇನ್ನುಮುಂದೆ ಯಾವುದೇ ಖಾಸಗಿ ಸಂಸ್ಥೆಗಳಿಂದ ಪ್ರಶಸ್ತಿ ಪಡೆಯುವ ಮುನ್ನ ಕೇಂದ್ರವು ಹೊರಡಿಸಿರುವ ಹೊಸ ಮಾರ್ಗಸೂಚಿಗಳನ್ನು (Guidelines For Govt Employees) ಖಡ್ಡಾಯವಾಗಿ ಅನುಸರಿಸಲು ಮಾಹಿತಿ ನೀಡಿದೆ.

Advertisement

ಹೌದು, ಹೊಸ ಮಾರ್ಗಸೂಚಿಗಳ ಪ್ರಕಾರ, ಸರ್ಕಾರಿ ನೌಕರರು ಖಾಸಗಿ ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಪಡೆಯುವ ಮೊದಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಅನಿವಾರ್ಯವಾಗಿದೆ. ಅಲ್ಲದೇ ನೌಕರರು ಸ್ವೀಕರಿಸುವ ಪ್ರಶಸ್ತಿ ಯಾವುದೇ ರೀತಿಯ ಹಣವನ್ನು ಒಳಗೊಂಡಿರಬಾರದು ಎಂದು ಸಚಿವಾಲಯ ಹೇಳಿದೆ. ಈ ಬಗ್ಗೆ ಅಸ್ತಿತ್ವದಲ್ಲಿರುವ ಸೂಚನೆಗಳನ್ನು ಸರಿಯಾಗಿ ಅನುಸರಿಸುತ್ತಿಲ್ಲ ಎನ್ನುವ ಅಂಶ ಸಚಿವಾಲಯದ ಗಮನಕ್ಕೆ ಬಂದಿದ್ದು, ಈ ಕ್ರಮ ಕೈಗೊಳ್ಳಲಾಗಿದೆ.

ಸದ್ಯ ಕಾರ್ಮಿಕ ಸಚಿವಾಲಯ ಹೊರಡಿಸಿರುವ ಆದೇಶದಲ್ಲಿ, 'ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿಗಳನ್ನು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದ ನಂತರವೇ ಸ್ವೀಕರಿಸಬಹುದು' ಎಂದು ಸ್ಪಷ್ಟಪಡಿಸಲಾಗಿದೆ. ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳು/ಇಲಾಖೆಗಳಿಗೆ ಈ ಆಗ್ಗೆ ಆದೇಶ ಹೊರಡಿಸಲಾಗಿದೆ.

Advertisement

ಸರ್ಕಾರ ಜಾರಿಗೊಳಿಸಿದ ಆದೇಶದ ಪ್ರಕಾರ 'ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ' ಪ್ರಶಸ್ತಿ ಅಥವಾ ಗಿಫ್ಟ್ ಗೆ ಅನುಮೋದನೆಯನ್ನು ನೀಡಬಹುದು. ಬಹುಮಾನವು ನಗದು ಅಥವಾ ಸೌಲಭ್ಯಗಳ ರೂಪದಲ್ಲಿ ಇರಬಾರದು ಎನ್ನುವುದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಪ್ರಶಸ್ತಿ ನೀಡುವ ಖಾಸಗಿ ಸಂಸ್ಥೆಗಳ ದಾಖಲೆಗಳು ಸರಿಯಾಗಿರಬೇಕು. ಅಲ್ಲದೆ ಯಾವುದೇ ರೀತಿಯಲ್ಲಿಯೂ ಕೆಟ್ಟ ಹೆಸರು ಗಳಿಸಿರಬಾರದು.

ಇದನ್ನು ಓದಿ: Ganga kalyana Scheme: ಕೃಷಿ ಭೂಮಿ ಇರುವವರೇ, ಒಂದು ರೂ ಖರ್ಚಿಲ್ಲದೆ ಸರ್ಕಾರವೇ ಬೋರ್ವೆಲ್ ಕೊರೆಸಿ, ಎಲ್ಲಾ ಸೌಲಭ್ಯ ಕಲ್ಪಿಸಿ ಕೊಡುತ್ತೆ - ಬೇಗ ಅರ್ಜಿ ಹಾಕಿ !!

ಕೇಂದ್ರ ನಾಗರಿಕ ಸೇವೆಗಳ (ನಡತೆ) ನಿಯಮಗಳು, 1964 ರ ನಿಯಮ 14, 'ಯಾವುದೇ ಸರ್ಕಾರಿ ನೌಕರನು, ಸರ್ಕಾರದ ಪೂರ್ವಾನುಮತಿಯಿಲ್ಲದೆ ಯಾವುದೇ ಪ್ರಶಂಸಾಪತ್ರವನ್ನು ಸ್ವೀಕರಿಸಬಾರದು ಅಥವಾ ಯಾವುದೇ ಇತರ ಸರ್ಕಾರಿ ನೌಕರನಿಗೆ ಯಾವುದೇ ಉಲ್ಲೇಖವನ್ನು ಮಾಡಬಾರದು. ಅಲ್ಲದೆ ಬೇರೆ ಸರ್ಕಾರಿ ನೌಕರನ ಹೆಸರಿನಲ್ಲಿ ಆಯೋಜಿಸಲಾದ ಯಾವುದೇ ಸಭೆ ಅಥವಾ ಮನರಂಜನಾ ಕಾರ್ಯಕ್ರಮದಲ್ಲಿಯೂ ಭಾಗವಹಿಸುವಂತಿಲ್ಲ ಎನ್ನಲಾಗಿದೆ.

Advertisement
Advertisement