New Criminal Law: ಜುಲೈ 1ರಿಂದ ಭಾರತದಾದ್ಯಂತ ಹೊಸ ಕ್ರಿಮಿನಲ್ ನ್ಯಾಯ ಕಾನೂನುಗಳು ಜಾರಿ
03:26 PM Feb 25, 2024 IST
|
ಹೊಸ ಕನ್ನಡ
UpdateAt: 03:27 PM Feb 25, 2024 IST
Advertisement
New Criminal Law: ಜುಲೈ 1ರಿಂದ ಹೊಸದಾಗಿ ಜಾರಿಗೆ ತರಲಾದ ಮೂರು ಕ್ರಿಮಿನಲ್ ನ್ಯಾಯ ಕಾನೂನುಗಳು 2024ರ ಜುಲೈ 1ರಿಂದ ಜಾರಿಗೆ ಬರಲಿವೆ ಎಂದು ಶುಕ್ರವಾರ ಕೇಂದ್ರ ಗೃಹ ಸಚಿವಾಲಯವು ಮೂರು ರೀತಿಯ ಅಧಿಸೂಚನೆ ಹೊರಡಿಸಿದೆ.
Advertisement
ಈ ಕಾನೂನುಗಳು-ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯಾ ಕಾಯ್ದೆ-ಡಿಸೆಂಬರ್ 21, 2023 ರಂದು ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಅನುಮೋದನೆಯನ್ನು ಪಡೆದವು. ರಾಷ್ಟ್ರಪತಿ ದ್ರೌಪದಿ ಮುರ್ಮು ಡಿಸೆಂಬರ್ 25ರಂದು ಒಪ್ಪಿಗೆ ನೀಡಿದ್ದರು.
ಈ ಕಾನೂನುಗಳು ಬ್ರಿಟಿಷ್-ಯುಗದ ಭಾರತೀಯ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲಾಯಿಸುತ್ತವೆ.
Advertisement
Advertisement