For the best experience, open
https://m.hosakannada.com
on your mobile browser.
Advertisement

Neetu Vanajakshi: ನನ್ನ ಖಾಸಗಿ ಅಂಗ ನೋಡಲು ಮುಜುಗರ ಆಗ್ತಿತ್ತು! ನಾನು ಅವನಲ್ಲ ಅವಳು ಆಗೋದು ಅಷ್ಟೊಂದು ಸುಲಭವಾಗಿರಲಿಲ್ಲ !

Neetu Vanajakshi: ಸ್ನಾನದ ವೇಳೆ ನನ್ನ ಖಾಸಗಿ ಅಂಗ ನೋಡಲು ನನಗೇ ಮುಜುಗರ ಆಗ್ತಿತ್ತು, ಯಾವಾಗ ಹೆಣ್ಣಾಗ್ತೀನೋ ಅನಿಸ್ತಿತ್ತು. ಹೇಳಿಕೊಳ್ಳಲಾಗದ ನೋವು ಅನುಭವಿಸಿ, ಈಗ ಗೆದ್ದ ಖುಷಿಯಲ್ಲಿದ್ದೇನೆ' ಎಂದಿದ್ದಾರೆ ನೀತು ವನಜಾಕ್ಷಿ.
05:58 PM May 09, 2024 IST | ಸುದರ್ಶನ್
UpdateAt: 06:01 PM May 09, 2024 IST
neetu vanajakshi  ನನ್ನ ಖಾಸಗಿ ಅಂಗ ನೋಡಲು ಮುಜುಗರ ಆಗ್ತಿತ್ತು   ನಾನು ಅವನಲ್ಲ ಅವಳು ಆಗೋದು ಅಷ್ಟೊಂದು ಸುಲಭವಾಗಿರಲಿಲ್ಲ

Neetu Vanajakshi: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಖ್ಯಾತಿಯ ನೀತು ವನಜಾಕ್ಷಿ (Neetu Vanajakshi) ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ. ಸದ್ಯ ನೀತು ಅವರು ಟ್ರಾನ್ಸ್‌ವುಮೆನ್‌ ಆಗಿ ಬದಲಾಗುವ ಮುಂಚಿನ ಸಂದರ್ಭದಲ್ಲಿ ಯಾವ ರೀತಿ ಮನಸ್ಥಿತಿ ಯಲ್ಲಿ ಇದ್ದರೂ ಎಂಬುದನ್ನು ಸಾಮಾಜಿಕ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. ಹೌದು, ಅವರಲ್ಲಿ ದೈಹಿಕವಾಗಿ ಯಾವಾಗಿನಿಂದ ಬದಲಾವಣೆ ಶುರುವಾಯ್ತು, ಮನೆಯವರ ಮನವೊಲಿಸಿದ್ದು ಹೇಗೆ? ಕೊನೆಗೆ ಏನಾಯ್ತು ಅನ್ನೋದನ್ನು ಸಂದರ್ಶನದಲ್ಲಿ ನೀತು ವಿವರಿಸಿದ್ದಾರೆ.

Advertisement

ಇವರು ಟ್ಯಾಟೂ ಕಲಾವಿದೆಯಾಗಿ ತಮ್ಮದೇ ಸ್ವಂತ ಉದ್ಯಮ ನಡೆಸುತ್ತಿದ್ದು, ಒಂದಷ್ಟು ಜನಕ್ಕೆ ಕೆಲಸವನ್ನೂ ನೀಡಿ, ಯಾರಿಗೂ ನಾನೇನು ಕಮ್ಮಿ ಇಲ್ಲ ಎಂದು ಸಮಾಜಕ್ಕೆ ಬದುಕಿ ತೋರಿಸಿದ್ದಾರೆ.

ಇದನ್ನೂ ಓದಿ: ಉಪನ್ಯಾಸಕಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ

Advertisement

ಈಗ ಇದೇ ನೀತು ತಮ್ಮ ಜೀವನದ ಖಾಸಗಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ " ನಾನು ಅವನಲ್ಲ ಅವಳು ಸಿನಿಮಾ ನನಗೆ ತುಂಬ ಸ್ಫೂರ್ತಿ ನೀಡಿತು. ಏನೇ ಆಗಲಿ ನಾನು ಹೆಣ್ಣು ಆಗಲೇ ಬೇಕು ಎಂದು ನಿರ್ಧರಿಸಿದ್ದೆ. ಅಮ್ಮನ ಮನವನ್ನು ಕೂಡಾ ಮನವೊಲಿಸಿದೆ. ಅವರಿಂದಲೂ ಒಪ್ಪಿಗೆ ಸಿಕ್ಕಿದ ನಂತರ ವೈದ್ಯರ ಬಳಿ ಹೆಣ್ಣಾಗುವ ಪ್ರೊಸೆಸ್‌ ಆಗುವ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದೆ. ಹಾರ್ಮೋನ್ಸ್‌ ತೆಗೆದುಕೊಳ್ಳುತ್ತಿದ್ದೆ. ಅದರಿಂದ ತುಂಬ ಸಮಸ್ಯೆ ಎದುರಿಸುತ್ತಿದ್ದೆ. ಸ್ನಾನದ ವೇಳೆ ನನ್ನ ಖಾಸಗಿ ಅಂಗ ನೋಡಲು ನನಗೇ ಮುಜುಗರ ಆಗ್ತಿತ್ತು, ಯಾವಾಗ ಹೆಣ್ಣಾಗ್ತೀನೋ ಅನಿಸ್ತಿತ್ತು. ಹೇಳಿಕೊಳ್ಳಲಾಗದ ನೋವು ಅನುಭವಿಸಿ, ಈಗ ಗೆದ್ದ ಖುಷಿಯಲ್ಲಿದ್ದೇನೆ" ಎಂದಿದ್ದಾರೆ ನೀತು ವನಜಾಕ್ಷಿ.

ಇನ್ನು ಶಸ್ತ್ರ ಚಿಕಿತ್ಸೆ ಪ್ರೊಸೆಸ್ ಗೆಂದು, "ಮೊದಲಿಗೆ ದೆಹಲಿಗೆ ಹೋದೆ. ವೈದ್ಯರು ಕೌನ್ಸಲಿಂಗ್‌ ಮಾಡಿದ್ರು. ಫಾರ್ಮ್‌ ಫಿಲ್‌ ಮಾಡಬೇಕು. ಸತ್ತೋದರೆ ನಾವು ಹೊಣೆಯಲ್ಲ ಎಂದು ನಮ್ಮ ಬಳಿ ಸಹಿ ಮಾಡಿಸಿಕೊಂಡರು. ಸರ್ಜರಿ ವೇಳೆ ಏನೇ ಹೆಚ್ಚು ಕಡಿಮೆ ಆದರೂ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಅಗ್ರಿಮೆಂಟ್‌ನಲ್ಲಿ ಬರೆಸಿ ಸಹಿ ಮಾಡುವಾಗ ಕಣ್ಣಲ್ಲಿ ಸಂತೋಷದ ಕಣ್ಣೀರು ಬಂದಿತ್ತು.

ಆದ್ರೆ ಹೆಣ್ಣಾಗಲು 10 ಲಕ್ಷ ಖರ್ಚಾಯ್ತು, ಅಲ್ಲಿಂದ "ಬಂದ ತಕ್ಷಣ ಮಲಗಿರುತ್ತೇವೆ. ಅದೇನೋ ಒಂದು ನಿರಾಳತೆ ಮೂಡಿರುತ್ತೆ. ಇದು ಐದು ಗಂಟೆಯ ಸರ್ಜರಿ. ಇದಕ್ಕೆ ಸಿಗ್ಮಾ ಸರ್ಜರಿ ಅಂತಾರೆ. ದಿನಕ್ಕೆ ಒಂದೇ ಸರ್ಜರಿ ಆಗುತ್ತೆ. ತುಂಬ ಅಡ್ವಾನ್ಸ್‌ ಟೆಕ್ನಾಲಜಿ ಇದೆ. ಅನೇಸ್ತೆಷಿಯಾ ಕಡಿಮೆ ಆದಂಗೆ ನೋವು ಜಾಸ್ತಿ ಆಗುತ್ತ ಹೋಗುತ್ತದೆ. ಡಾಕ್ಟರ್‌ ಬಂದು ಆಪರೇಷನ್‌ ಆದ ಭಾಗಕ್ಕೆ ಡ್ರೆಸ್ಸಿಂಗ್‌ ಮಾಡುವಾಗ ಜೀವ ಹೋದ ಹಾಗೆ ಆಗುತ್ತೆ. ಆದರೂ ಆ ನೋವಲ್ಲೂ ಒಂದು ಖುಷಿ ಸಿಗುತ್ತಿರುತ್ತದೆ. ಎಲ್ಲ ಟಾನ್ಸ್‌ಗಳಿಗೂ ಇದೇ ಫೀಲ್‌ ಆಗುತ್ತದೆ. ಒಂದು ರೀತಿ ನಮಗಿದು ಮರುಹುಟ್ಟು ಇದ್ದಂತೆ. ನಾವಾಗಿಯೇ ಪಡೆದುಕೊಂಡ ಜನ್ಮ ಇದು" ಎಂದಿದ್ದಾರೆ.

"ಸರ್ಜರಿ ಯಾವಾಗ ಪಾಸ್‌ ಆಯ್ತೋ ಆ ಕ್ಷಣವೇ ನಾನು ಗೆದ್ದೆ. ಟ್ರಾನ್ಸ್‌ಜೆಂಡರ್‌ಗೆ ಸಮಾಜದಲ್ಲಿ ಬೇರೆ ಅರ್ಥವಿದೆ. ಆದರೆ ನನಗೆ ನಾನು ಚಾಲೆಂಜ್ ಹಾಕಿ ನನ್ನದೇ ಆದ ಉದ್ಯಮ ಶುರು ಮಾಡಿದ್ದೇನೆ. ಅದರಲ್ಲಿಯೇ ಖುಷಿ ಕಾಣುತ್ತಿದ್ದೇನೆ" ಎಂದಿದ್ದಾರೆ ನೀತು ವನಜಾಕ್ಷಿ.

ಒಟ್ಟಿನಲ್ಲಿ ತೃತೀಯ ಲಿಂಗಿಯಾಗಿ ಬದಲಾಗಿ, 2019ರಲ್ಲಿ ಸೂಪರ್‌ ಕ್ವೀನ್‌ ಮಿಸ್‌ ಟ್ರಾನ್ಸ್‌ಕ್ವೀನ್‌ ಪಟ್ಟವನ್ನೂ ಪಡೆದಿದ್ದರು. 2020ರಲ್ಲಿ ಮಿಸ್‌ ಇಂಟರ್‌ನ್ಯಾಶನಲ್‌ ಕ್ವೀನ್‌ ಕಿರೀಟ ಮುಡಿಗೇರಿಸಿಕೊಂಡು, ಭಾರತದ ಮೊದಲ ಟ್ರಾನ್ಸ್‌ ಟ್ಯಾಟೂ ಆರ್ಟಿಸ್ಟ್‌ ಆಗಿಯೂ ಗುರುತಿಸಿಕೊಂಡು, ಮೊದಲ ಸಲ ಬಿಗ್‌ಬಾಸ್‌ನಲ್ಲೂ ಸ್ಪರ್ಧಿಯಾಗಿದ್ದರು.

ಇದನ್ನೂ ಓದಿ: Tulasi Plant: ತುಳಸಿಯನ್ನು ದಿನದ ಈ ಸಮಯದಲ್ಲಿ ಯಾವ ಕಾರಣಕ್ಕೂ ಮುಟ್ಟದಿರಿ!

Advertisement
Advertisement