For the best experience, open
https://m.hosakannada.com
on your mobile browser.
Advertisement

NEET UG 2024 ಮರು ಪರೀಕ್ಷೆಗೆ ಕಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಕ್, ತನಿಖೆ ನಡೆಯುತ್ತಿದ್ದಾಗ ಕೌನ್ಸಿಲಿಂಗ್ ಗೆ ಅನುಮತಿ ಕೊಟ್ಟ ಕೋರ್ಟ್ ನಡೆಯೇ ಪ್ರಶ್ನಾರ್ಹ !!

NEET UG 2024: ರಾಂಕುಗಳನ್ನು ಮತ್ತೊಮ್ಮೆ ಪಡೆಯಬಹುದು ಎಂದು ಕಾತುರದಿಂದ ಕಾಯುತ್ತಿರುವ ಪ್ರತಿಭಾ ವಿದ್ಯಾರ್ಥಿಗಳಿಗೆ ನಿರಾಸೆಯಾಗುವ ಸುದ್ದಿ ಇದು.
04:19 PM Jun 27, 2024 IST | ಸುದರ್ಶನ್
UpdateAt: 09:03 AM Jun 28, 2024 IST
neet ug 2024 ಮರು ಪರೀಕ್ಷೆಗೆ ಕಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಕ್  ತನಿಖೆ ನಡೆಯುತ್ತಿದ್ದಾಗ ಕೌನ್ಸಿಲಿಂಗ್ ಗೆ ಅನುಮತಿ ಕೊಟ್ಟ ಕೋರ್ಟ್ ನಡೆಯೇ ಪ್ರಶ್ನಾರ್ಹ
Advertisement

NEET UG 2024: ನೀಟ್ UG 2024 ಪರೀಕ್ಷೆ ನಡೆದರೆ ಕಳೆದುಕೊಂಡ ರಾಂಕುಗಳನ್ನು ಮತ್ತೊಮ್ಮೆ ಪಡೆಯಬಹುದು ಎಂದು ಕಾತುರದಿಂದ ಕಾಯುತ್ತಿರುವ ಪ್ರತಿಭಾ ವಿದ್ಯಾರ್ಥಿಗಳಿಗೆ ನಿರಾಸೆಯಾಗುವ ಸುದ್ದಿ ಇದು.

Advertisement

ಪ್ರತಿಭಾವಂತ ವಿದ್ಯಾರ್ಥಿಗಳು ಎಷ್ಟೇ ಪರೀಕ್ಷೆ ಬರಲಿ ತಾವು ಪ್ರತಿಸಲ ಕೂಡ ಉತ್ತರ ಬರೆದು ಒಳ್ಳೆಯ ಮಾರ್ಕೂಗಳನ್ನು ಮತ್ತು ರ್‍ಯಾಂಕಗಳನ್ನು ಪಡೆಯಬಲ್ಲೆವು ಎನ್ನುವ ಕ್ವಾಲ್ಫಿಡೆನ್ಸ್ ನಲ್ಲಿ ಇರುವವರು. ನೀಟ್ ಎಂಬ ಅತ್ಯಂತ ಕಠಿಣ ಪರೀಕ್ಷೆಯಲ್ಲಿ 650 ಕ್ಕಿಂತ ಹೆಚ್ಚು ಮಾರ್ಕು ಬಂದರೆ ಅದು ಅದ್ಭುತ ಅನ್ನುವ ಸಾಧನೆ. ಆದರೆ ಈ ಬಾರಿ 690 ರಿಂದ 700 ಅಂಕಗಳನ್ನು ಪಡೆದರೂ ದೇಶದ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಿಗೆ ಪ್ರವೇಶ ಸಿಗದ ಪರಿಸ್ಥಿತಿ ಉದ್ಭವವಾಗಿದೆ. ಅದಕ್ಕೆ ಕಾರಣವಾದದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ! ಅದು ಹೇಗೆ ಅಂತೀರಾ ಈ ಲೇಖನ ಪೂರ್ತಿ ಓದಿ.

ನೀಟ್ ಕ್ವೆಶ್ಚನ್ ಪೇಪರ್ ಲೀಕ್ ಆಗಿದೆ ಅನ್ನುವುದು ಇದೀಗ ಪ್ರೂವ್ ಆಗಿದೆ. ಈ ಬಗ್ಗೆ ಹತ್ತಾರು ಜನರು ಅರೆಸ್ಟ್ ಆಗಿದ್ದಾರೆ. ಪರೀಕ್ಷೆಗಿಂತ ಒಂದು ದಿನ ಮೊದಲು ಸಾಲ್ವಾರ್ ಗ್ಯಾಂಗ್ ನ ಕೈಗೆ ಪ್ರಶ್ನೆ ಪತ್ರಿಕೆ ತಲುಪಿದ್ದು ಅದು ಹಲವಾರು ವಿದ್ಯಾರ್ಥಿಗಳ ಕೈ ಸೇರಿತ್ತು. ಇದಕ್ಕೆ ಪೂರಕವೆಂಬಂತೆ ಪ್ರಶ್ನೆ ಪತ್ರಿಕೆಗಳನ್ನು ಅರೆಬರೆ ಸುಟ್ಟ ದಾಖಲೆಗಳು ಕೂಡ ಇದೀಗ ಲಭ್ಯವಾಗಿದೆ. ಆದರೂ ಮಹಾನ್ ಸರ್ಕಾರ ಮೌನವಹಿಸಿದ್ದು ಕೋಟ್ಯಂತರ ಜನರ ಮುಖ್ಯವಾಗಿ 24 ಲಕ್ಷ ಜನ ವಿದ್ಯಾರ್ಥಿಗಳ ಜೀವನದ ಜೊತೆ ಆಟವಾಡುತ್ತಿದೆ. ಭಾರತದ ಸುಪ್ರೀಂ ಕೋರ್ಟ್ ಕೂಡ ಅದಕ್ಕೆ ಪೂರಕವಾಗಿ ವರ್ತಿಸುತ್ತಿರುವುದು ಅತ್ಯಂತ ದುಃಖಕರ ವಿಷಯ.

Advertisement

ಗೆಳೆಯರೇ ಗಮನಿಸಿ: ಒಂದು ಕೇಶ್ಚನ್ ಪೇಪರ್ ಇದೀಗ ಈ ಇಂಟರ್ನೆಟ್ ಯುಗದಲ್ಲಿ ಒಂದು ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ- ಇನ್ನೊಂದು ತಂಡಕ್ಕೆ, ರವಾನೆ ಆಗಲು ಎಷ್ಟು ಸೆಕೆಂಡು ಬೇಕು ನೀವೇ ಹೇಳಿ ? ಕೇವಲ ಮಿಲಿ ಸೆಕೆಂಡುಗಳಲ್ಲಿ ಒಂದು ಮೊಬೈಲ್ ನಿಂದ ಲಕ್ಷಾಂತರ ಮೊಬೈಲ್ಗಳಿಗೆ ಮೆಸೇಜುಗಳು, ವಿಷಯಗಳು ಪಾಸ್ ಆಗುತ್ತವೆ. ಹೀಗೆಯೇ ಇದೀಗ ನೀಟ್ ಪ್ರಶ್ನೆಪತ್ರಿಕೆಗಳು ರವಾನೆ ಆಗಿವೆ. 24 ಲಕ್ಷ ವಿದ್ಯಾರ್ಥಿಗಳಲ್ಲಿ ಯಾರಿಗೆ ಹಿಂದಿನ ದಿನ ಕ್ವೇಶ್ಚನ್ ಪೇಪರ್ ಸಿಕ್ಕಿದೆ, ಎಂದು ಹುಡುಕೋದು ಅಷ್ಟು ಸುಲಭವೇ ? ಸಾವಿರಾರು ಮಂದಿಗೆ ಈ ಸಲಲ question paper ಬಟವಾಡೆ ಆಗಿರುವುದಂತೂ ಸತ್ಯ. ಈ ಹಿನ್ನೆಲೆಯಲ್ಲಿ ಈಗ ರಿ ನೀಟ್ ಮಾಡಲು ಕೂಗು ಎದ್ದಿದೆ. ಆದ್ರೆ ಕೇಂದ್ರ ಸರ್ಕಾರ ಈಗ ಮರು ಪರೀಕ್ಷೆ ಮಾಡದೆ ಇರಲು ನಿರ್ಧರಿಸಿದೆ. ಅದು ಕೇಂದ್ರದ ಮತ್ತು ಕೋರ್ಟಗಳ ಈಗಿನ ನಡೆಯಿಂದ ತೀರಾ ಸ್ಪಷ್ಟವಾಗಿದೆ.

ಇಷ್ಟೆಲ್ಲಾ ಪ್ರಮಾಣದ ಭಾನಗಡಿ ಆಗಿರುವಾಗ ಹತ್ತಾರು ಸಂಖ್ಯೆಯಲ್ಲಿ ನೀಟ್ ಹಗರಣದಲ್ಲಿ ಜೈಲು ಪಾಲಾದಾಗ, ಯಾವುದೇ ದೇಶದ ಕೋರ್ಟ್ ಆಗಿದ್ದರೂ ಇಷ್ಟು ಹೊತ್ತಿಗೆ 1563 ವಿದ್ಯಾರ್ಥಿಗಳ ಮರು ಪರೀಕ್ಷೆ, ಕೌಸಲಿಂಗ್ ನಡೆಸಲು ತಡೆ ಕೊಡುತ್ತಿತ್ತು. ಮೊದಲು ತನಿಖೆ ನಡೆಸೋಣ ತನಿಖೆ ನಡೆದು ಅದರ ಸಾಧಕ ಬಾಧಕಗಳನ್ನು ನೋಡಿ ಆನಂತರ ಮರು ಪರೀಕ್ಷೆ ಅಥವಾ ಕೌನ್ಸಲಿಂಗ್ ಶುರುಮಾಡಿ. ಈಗ ಯಥಾ ಸ್ಥಿತಿ ಮುಂದುವರಿಸಿ ಅನ್ನಬಹುದಿತ್ತು ಕೋರ್ಟು. ಆದರೆ ಭಾರತದ ಸುಪ್ರೀಂ ಕೋರ್ಟ್ ಇತ್ತ ತನಿಖೆ ಮಾಡಲು ಮತ್ತು ಎನ್‌ಟಿಎ ಅನ್ನು ಟೀಕಿಸಲು ಶುರು ಮಾಡಿದ್ದರೆ, ಅತ್ತ ಮುಂಬರುವ ಜುಲೈ 6ರ ನಂತರ ಶುರುವಾಗುವ ಮೆಡಿಕಲ್ ಸೀಟು ಕೌನ್ಸಿಲಿಂಗ್ ಪ್ರಕ್ರಿಯೆಗೆ ತಡೆ ಕೊಡುವುದಿಲ್ಲ ಎನ್ನುವ ಇಬ್ಬಂದಿತನ ತೀರ್ಪು ನೀಡಿದೆ. ಕೋರ್ಟಿನ ಈ ನಡೆ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ತನಿಖೆ ನಡೆಸದೆ ಕೌಸಲಿಂಗ್ ನಡೆಸಲು ಹೇಗೆ ಬಿಡುತ್ತೀರಿ ? ಎಂದು ಪ್ರಜ್ಞಾವಂತರು ಕೋರ್ಟ್ ಅನ್ನೆ ಪ್ರಶ್ನಿಸುವಂತಾಗಿದೆ.

ಈ ಎಲ್ಲಾ ಬೆಳವಣಿಗಳನ್ನು ನೋಡಿದಾಗ ನೀಟ್ ಮರು ಪರೀಕ್ಷೆ ಮರೀಚಿಕೆ ಅನ್ನಿಸುತ್ತಿದೆ. ದೇಶದಾದ್ಯಂತ ನೀಟ್ ಪ್ರಶ್ನೆ ಪತ್ರಿಕೆಗಳ ಜಾಲ ಹಬ್ಬಿದರೂ ಕೇಂದ್ರ ಸರಕಾರ ಸಮರ್ಥಿಸಿಕೊಳ್ಳುತ್ತಿದೆ. ಅತ್ತ ಪ್ರತಿಭಾವಂತ ವಿದ್ಯಾರ್ಥಿಗಳ ಆಕ್ರೋಶ ಕೋರ್ಟ್ ಅರ್ಥವಾಗುತ್ತಿಲ್ಲ. ಜೊತೆಗೆ ಕೇಂದ್ರ ಸರಕಾರವು ಕೆಲವು ವಿದ್ಯಾರ್ಥಿಗಳ ಕೈಯಲ್ಲಿ ನಮಗೆ ಮರುಪರೀಕ್ಷೆ ಬೇಡ ಎನ್ನುವ ಅರ್ಜಿಯನ್ನು ಹಾಕಿಸುತ್ತಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆ ಏನಿದೆ ? ದೇಶದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸಂಬಂಧಿಸಿದಂತೆ 13 ಜನರ ಬಂಧನವಾಗಿದೆ. ಇದೀಗ ಕೆಲವೇ ಗಂಟೆಗಳ ಹಿಂದೆ ಬಿಹಾರದಲ್ಲಿ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ. ರಾಜ್ಯ ವ್ಯಾಪಿಯಾಗಿ ಸುಳ್ಳರು ಕಳ್ಳರು ಮೆಡಿಕಲ್ ಸೀಟು ಪಡೆದುಕೊಳ್ಳುತ್ತಿದ್ದಾರೆ. ಮಹಾನ್ ಭಾರತದ ಸರ್ಕಾರ ಮತ್ತು ಕೋರ್ಟುಗಳು ಕಣ್ಣು ಮುಚ್ಚಿ ಕುಳಿತಿದೆ. ಒಳ್ಳೆಯ ಬೆಳವಣಿಗೆ ಏನೆಂದರೆ ಪ್ರತಿಪಕ್ಷಗಳು ಅಲ್ಲಲ್ಲಿ ಪ್ರತಿಭಟಿಸುತ್ತಿರುವುದು.

Advertisement
Advertisement
Advertisement