NEET PG 2024: ನೀಟ್ ಪಿಜಿ ಪರೀಕ್ಷೆ ಮುಂದೂಡಿಕೆ; ಯಾವಾಗ ಪರೀಕ್ಷೆ? ಇಲ್ಲಿದೆ ಮಾಹಿತಿ!
NEET PG 2024: NEET PG ಪರೀಕ್ಷೆಯ ವೇಳಾಪಟ್ಟಿಯನ್ನು ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಬಿಡುಗಡೆ ಮಾಡಿದೆ. ಈ ಮೊದಲು ಮಾರ್ಚ್ 3 ರಂದು ಪರೀಕ್ಷೆ ನಿಗದಿಯಾಗಿತ್ತು. ಆದರೆ ಈಗ ಅದರ ದಿನಾಂಕ ಬದಲಾಗಿದೆ. ಜುಲೈ 7ರಂದು ಪರೀಕ್ಷೆ ನಡೆಯಲಿದೆ.
ಅಭ್ಯರ್ಥಿಗಳು ಅಧಿಕೃತ ಸೈಟ್‌ಗಳಾದ nbe.edu.in ಮತ್ತು natboard.edu.in ಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬಹುದು.
ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, NEET PG 2024 ಪರೀಕ್ಷೆಯನ್ನು 07 ಜುಲೈ 2024 ರಂದು ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುವ ಅಭ್ಯರ್ಥಿಗಳಿಗೆ ಕಟ್-ಆಫ್ ದಿನಾಂಕ 15ನೇ ಆಗಸ್ಟ್ 2024 ಆಗಿರುತ್ತದೆ. ವೈದ್ಯಕೀಯ ಪ್ರವೇಶ ಪರೀಕ್ಷೆಗೆ ನೋಂದಾಯಿಸುವಾಗ, ಅಭ್ಯರ್ಥಿಗಳಿಗೆ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ.
ಸಂಗೀತ ಚಕ್ರವರ್ತಿ ಉಸ್ತಾದ್ ರಶೀದ್ ಖಾನ್ ನಿಧನ!!
ನೋಂದಣಿ ನಂತರ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಸಾಧ್ಯ. ಇದಕ್ಕೆ ಅಗತ್ಯ ದಾಖಲೆಗಳನ್ನು ಅಪಲೋಡ್ ಮಾಡಬೇಕು. ಅರ್ಜಿ ಶುಲ್ಕ ಪಾವತಿಸಬೇಕು.
ನೋಟಿಫೀಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ನೀಟ್ ಅಷ್ಟೇ ಅಲ್ಲ, ನ್ಯಾಷನಲ್ ಎಕ್ಸಿಟ್ ಟೆಸ್ಟ್‌ಅನ್ನು (National Exit Test) ಕೂಡ ಎನ್‌ಬಿಇಎಂಎಸ್ ಮುಂದೂಡಿಕೆ ಮಾಡಿದೆ. 2023ರಲ್ಲಿ ನೆಕ್ಸ್ಟ್ ನಡೆಯಬೇಕಿತ್ತು. ಅದನ್ನು 2024ಕ್ಕೆ ಮುಂದೂಡಲಾಗಿತ್ತು. ಈಗ ಪರೀಕ್ಷೆಯನ್ನು 2025ಕ್ಕೆ ಮುಂದೂಡಲಾಗಿದೆ ಎಂದು ಎನ್‌ಬಿಇಎಂಎಸ್ ತಿಳಿಸಿದೆ.