For the best experience, open
https://m.hosakannada.com
on your mobile browser.
Advertisement

NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್‌, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!

NEET 2024: ನೀಟ್ ಪೇಪರ್ ಸೋರಿಕೆ ಆರೋಪಗಳ ಜತೆಗೆ ಸಮಯದ ನಷ್ಟಕ್ಕಾಗಿ ಗ್ರೇಸ್ ಅಂಕ ಕೊಟ್ಟದ್ದನ್ನು ಇದೀಗ ಪ್ರಶ್ನೆ ಮಾಡಲಾಗುತ್ತಿದೆ.
07:45 AM Jun 06, 2024 IST | ಸುದರ್ಶನ್
UpdateAt: 07:45 AM Jun 06, 2024 IST
neet 2024 ಮರು ಪರೀಕ್ಷೆಗೆ ಒತ್ತಾಯ  ಪೇಪರ್ ಲೀಕ್  ಮೋಸದ ಗ್ರೇಸ್ ಮಾರ್ಕ್‌  ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್
Advertisement

NEET 2024: ಒಟ್ಟು 67 ಅಭ್ಯರ್ಥಿಗಳು 99.997129 ಶೇಕಡಾವಾರು ಅಂಕಗಳೊಂದಿಗೆ ಅಖಿಲ ಭಾರತ ಶ್ರೇಣಿ (AIR) 1 ಅನ್ನು ಪಡೆದಿದ್ದು, ಗ್ರೇಸ್ ಮಾರ್ಕ್ಸ್‌ನಿಂದಾಗಿ ಇಬ್ಬರು ವಿದ್ಯಾರ್ಥಿಗಳು 718, 719 ಪಡೆದಿದ್ದಾರೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ. ಈಗ ನೀಟ್ ಪರೀಕ್ಷೆಯ ವಿರುದ್ಧ, ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿಯ ಈ ನಡೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಷ್ಟು ಕಠಿಣ ಪರಿಕ್ಷೆಗೆ ನಿಯತ್ತಾಗಿ ಓದಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮೋಸವಾಗಿದೆ.

Advertisement

ಇದೀಗ ನೀಟ್ ವೈದ್ಯಕೀಯ ಆಕಾಂಕ್ಷಿಗಳ ದೊಡ್ಡ ಗುಂಪು 2024 ರ NEET ಮರು-ಪರೀಕ್ಷೆಗೆ ಬೇಡಿಕೆಯಿಡಲು ಪ್ರಾರಂಭಿಸಿದ್ದಾರೆ. ನೀಟ್ ಪೇಪರ್ ಸೋರಿಕೆ ಆರೋಪಗಳ ಜತೆಗೆ ಸಮಯದ ನಷ್ಟಕ್ಕಾಗಿ ಗ್ರೇಸ್ ಅಂಕ ಕೊಟ್ಟದ್ದನ್ನು ಇದೀಗ ಪ್ರಶ್ನೆ ಮಾಡಲಾಗುತ್ತಿದೆ. ಪರೀಕ್ಷೆಯ ಸಮಯದ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿದ್ಯಾರ್ಥಿಗಳಿಗೆ NEET ಗ್ರೇಸ್ ಅಂಕಗಳನ್ನು ನೀಡಲಾಯಿತು. ಆದರೆ, ವಿದ್ಯಾರ್ಥಿಗಳು ಅತೃಪ್ತಿ ವ್ಯಕ್ತಪಡಿಸಿದ್ದಾರೆ ಮತ್ತು ಎನ್‌ಟಿಎ ಹೇಳಿಕೆಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ.

NTA ಅಧಿಕೃತ ವೆಬ್‌ಸೈಟ್ exams.nta.ac.in ನಲ್ಲಿ ಜೂನ್ 4 ರಂದು 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ NEET UG ಫಲಿತಾಂಶ 2024 ಅನ್ನು ಘೋಷಿಸಿತ್ತು. ಫಲಿತಾಂಶದ ದಿನಾಂಕಕ್ಕೆ 10 ದಿನಗಳ ಮೊದಲೆ NEET UG ಫಲಿತಾಂಶದ ದಿಡೀರ್ ಘೋಷಣೆಯಾಗಿದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ NTA ಈ ನಡೆ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಎಂದು ವಿದ್ಯಾರ್ಥಿಗಳು ವಾದಿಸುತ್ತಿದ್ದಾರೆ.

Advertisement

ಮರು ಪರೀಕ್ಷೆ ಮಾಡಬೇಕಿರುವ ವಿದ್ಯಾರ್ಥಿಗಳ ವಾದ ಏನು ?

ವಾದ -1: NEET ಫಲಿತಾಂಶಗಳು 2024 ರ ಪ್ರಕಾರ, ಒಟ್ಟು 67 ಅಭ್ಯರ್ಥಿಗಳು 99.997129 ಶೇಕಡಾವಾರು ಅಂಕಗಳೊಂದಿಗೆ ಅಖಿಲ ಭಾರತ ಶ್ರೇಣಿ (AIR) 1 ಅನ್ನು ಪಡೆಡಿದ್ದಾರೆ. ಆ ಮೂಲಕ ಈ ವರ್ಷ ಎಲ್ಲಾ ವಿಭಾಗಗಳಿಗೆ NEET ಕಟ್-ಆಫ್‌ಗಳು ಸಹ ಹೆಚ್ಚಿವೆ. ಹೆಚ್ಚೆಂದರೆ ಆರು ಏಳು ಸಂಖ್ಯೆಯ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದ ಮಾರ್ಕನ್ನು ಪಡೆಯುತ್ತಿದ್ದರು. ಆದರೆ ಈ ಸಲ ಬರೋಬ್ಬರಿ 67 ಮಂದಿ 720 ಮಾರ್ಕ್ ಪಡೆದು ಆಲ್ ಇಂಡಿಯಾ ರಾಂಕ್ ಹಂಚಿಕೊಂಡಿದ್ದಾರೆ. ಅದು ಹೇಗೆ ಸಾಧ್ಯ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.

ವಾದ-2: ಎನ್‌ಟಿಎ NEET ಪೇಪರ್ ಸೋರಿಕೆ ಹಕ್ಕುಗಳನ್ನು ತಳ್ಳಿಹಾಕಿದೆ. ಆದರೆ ಪರೀಕ್ಷೆಯನ್ನು ನಡೆಸುವ ಮೊದಲೇ ಬಿಗ್ ಬ್ಲಂಡರ್ ಹೊರ ಬಂದಿದೆ. ನೀಟ್ ಯುಜಿ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ಘಟಕ ಒಟ್ಟು 13 ಜನರನ್ನು ಬಂಧಿಸಿತ್ತು. ನಂತರ, ಪರೀಕ್ಷಾ ಏಜೆನ್ಸಿಯು ರಾಜಸ್ಥಾನ ಪರೀಕ್ಷಾ ಕೇಂದ್ರದಲ್ಲಿ ವಿಭಿನ್ನ ಪ್ರಶ್ನೆ ಪತ್ರಿಕೆಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮರು ಪರೀಕ್ಷೆಯನ್ನು ಕೂಡಾ ನಡೆಸಿತು. ಆ ಮೂಲಕ ಪ್ರಶ್ನೆ ಪತ್ರಿಕೆಯಲ್ಲಿ ಆಗಿದೆ ಎನ್ನುವುದನ್ನು ಅನಿವಾರ್ಯವಾಗಿ ಒಪ್ಪಿಕೊಂಡಂತೆ ಆಗಿದೆ.

ವಾದ -3: ಗುಜರಾತ್ ಮತ್ತು ಒಡಿಶಾದಲ್ಲೂ ನೀಟ್ ಅಕ್ರಮಗಳು ವರದಿಯಾಗಿವೆ. ಗುಜರಾತ್‌ನ ಗೋಧ್ರಾ ಜಿಲ್ಲೆಯಲ್ಲಿ ಶಾಲಾ ಶಿಕ್ಷಕಿ ಸೇರಿದಂತೆ ಮೂವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ, ಅವರು ಆರು ನೀಟ್ ಆಕಾಂಕ್ಷಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ಪರಿಹರಿಸಲು ಪ್ರತಿ ಅಭ್ಯರ್ಥಿಯಿಂದ 10 ಲಕ್ಷ ರೂಪಾಯಿಗಳಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪರೀಕ್ಷಾರ್ಥಿಯೊಬ್ಬರು ಶಿಕ್ಷಕರಿಗೆ ಮುಂಗಡವಾಗಿ ಪಾವತಿಸಿದ್ದ 7 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಾದ -4 :
NEET ಫಲಿತಾಂಶ ಘೋಷಣೆಯಾದ ಕೆಲವೇ ಗಂಟೆಗಳ ನಂತರ, NTA ಕೆಲವು ವಿದ್ಯಾರ್ಥಿಗಳು 720ರಲ್ಲಿ 718 ಮತ್ತು 719 ಅಂಕಗಳನ್ನು ಹೇಗೆ ಪಡೆದಿದ್ದಾರೆ ಎಂಬುದನ್ನು ವಿವರಿಸುವ ಹೇಳಿಕೆಯನ್ನು ನೀಡಿ, ಆ ಸಂಬಂಧಿತ ದಾಖಲೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 718 ಅಥವಾ 19 ಮಾರ್ಕ್ ಬರಲು ಸಾಧ್ಯವೇ ಇಲ್ಲ. ಒಂದು ಏಳು ಇಪ್ಪತ್ತು ಮಾರ್ಕ್ ಬರಬೇಕು ತಪ್ಪಿದರೆ 715 ಮಾರ್ಕ್ಸ್ ಬರಬೇಕು. ಹಾಗಾಗಿ ಅಕ್ರಮ ನಡೆದಿದೆ ವಿನಾಕಾರಣ ತಮಗೆ ಬೇಕಾದವರಿಗೆ ಮಾರ್ಕು ನೀಡಲಾಗಿದೆ ಇಂದು ವಿದ್ಯಾರ್ಥಿಗಳು ವಾದಿಸುತ್ತಿದ್ದಾರೆ. ಅದಕ್ಕೆ NTA uttara ನೀಡಿದ್ದು, ತನ್ನ ಸ್ಪಷ್ಟೀಕರಣದಲ್ಲಿ, ವಿದ್ಯಾರ್ಥಿಗಳಿಗೆ ಆದ ನಷ್ಟವನ್ನು ಸರಿದೂಗಿಸಲು ನ್ಯಾಯಾಲಯದ ಆದೇಶದಂತೆ ಗ್ರೇಸ್ ಅಂಕಗಳನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
“ಪರೀಕ್ಷಾ ಸಂದರ್ಭ ಸಮಯದ ನಷ್ಟವನ್ನು ಕಂಡುಹಿಡಿಯಲಾಯಿತು ಮತ್ತು ಅಂತಹ ಅಭ್ಯರ್ಥಿಗಳಿಗೆ ಗ್ರೇಸ್ ಅಂಕಗಳೊಂದಿಗೆ ಪರಿಹಾರವನ್ನು ನೀಡಲಾಯಿತು. ಆದ್ದರಿಂದ, ಅಭ್ಯರ್ಥಿಯ ಅಂಕಗಳು 718 ಅಥವಾ 719 ಆಗಿರಬಹುದು” ಎಂದು ಎನ್‌ಟಿಎ ತನ್ನ ಇತ್ತೀಚಿನ ಟ್ವೀಟ್‌ನಲ್ಲಿ ತಿಳಿಸಿದೆ. ಇದು ಅವೈಜ್ಞಾನಿಕ ಒಂದು ವೇಳೆ ಸಮಯದ ಪರೀಕ್ಷೆ ಸಂದರ್ಭದಲ್ಲಿ ಕೋಶನ್ ಪೇಪರ್ ನೀಡಲು ಸಮಯ ತೆಗೆದುಕೊಂಡಿದ್ದರೆ ಮರು ಪರೀಕ್ಷೆ ನಡೆಸಬೇಕಿತ್ತು ಎಂದಿದ್ದಾರೆ ನೀಟ್ ಬರೆದ ವಿದ್ಯಾರ್ಥಿಗಳು.

ನೀಟ್ ಪೇಪರ್ ಸೋರಿಕೆ 2024 ವಾದ -5:
ಏಕೈಕ ಅತಿದೊಡ್ಡ ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಕೆಲವು ದಿನಗಳ ಮೊದಲು, ಬಿಪಿಎಸ್‌ಸಿ ಟಿಆರ್‌ಇ 3 ಪರೀಕ್ಷೆಯ ಪತ್ರಿಕೆ ಸೋರಿಕೆಯ ಹಿಂದಿನ ಮಾಸ್ಟರ್‌ಮೈಂಡ್ ನೀಟ್ ಯುಜಿ ಪ್ರಶ್ನೆಗಳನ್ನು ಸೋರಿಕೆ ಮಾಡಬಹುದು ಎಂದು ಮುಸುಕುಧಾರಿ ವ್ಯಕ್ತಿಯೊಬ್ಬರು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆದಾಗ್ಯೂ, ಈ ಬಗ್ಗೆ ಎನ್‌ಟಿಎಯಿಂದ ಯಾವುದೇ ಅಧಿಕೃತ ದೃಢೀಕರಣ ಅಥವಾ ಸ್ಪಷ್ಟೀಕರಣವಿಲ್ಲ. ನಂತರ, ಪರೀಕ್ಷಾ ಸಂಸ್ಥೆ ಇದನ್ನು "ಆಧಾರರಹಿತ ಆರೋಪಗಳು" ಎಂದು ಕರೆದಿದೆ.

ಗ್ರೇಸ್ ಅಂಕಗಳನ್ನು ನೀಡುವ ಆಧಾರದ ಮೇಲೆ "13.06.2018 ದಿನಾಂಕದ ಸುಪ್ರೀಂ ಕೋರ್ಟ್ ಆದೇಶ" ಗಾಗಿ ವಿದ್ಯಾರ್ಥಿಗಳು ಒತ್ತಾಯಿಸಲು ಪ್ರಾರಂಭಿಸಿದ್ದಾರೆ.
NEET ಫಲಿತಾಂಶ 2024 ಅಧಿಸೂಚನೆಯು ಪ್ರತಿ ವಿಭಾಗದಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ವಿವರಗಳನ್ನು ಹೊಂದಿದೆ ಎಂದು ಕೆಲವು ವಿದ್ಯಾರ್ಥಿಗಳು ಹೇಳಿದ್ದಾರೆ. ಆದಾಗ್ಯೂ, ನಂತರ ಅದನ್ನು ತೆಗೆದುಹಾಕಲಾಯಿತು. ಕೊನೆಯ ಕ್ಷಣದಲ್ಲಿ ಗ್ರೇಸ್ ಅಂಕಗಳನ್ನು ನೀಡುವುದು "ಅನ್ಯಾಯ" ಎಂದು ಅವರು ವಾದಿಸಿದರು.

NEET ಟಾಪರ್ಸ್ 2024ನ ವಾದ:
NEET ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳು ಮತ್ತೊಂದು ವಾದ ಹೂಡಿದ್ದಾರೆ. ಒಟ್ಟು "8 #NEET ಅಭ್ಯರ್ಥಿಗಳು 2307010168, 333, 403, 460, 178, 037, 186, 198 ರಿಂದ ಪ್ರಾರಂಭವಾಗುವ ಅದೇ ರೋಲ್ ನಂಬರ್ ನಿಂದ, ಒಂದೇ ಪರೀಕ್ಷಾ ಕೇಂದ್ರದಿಂದ ಅಗ್ರಸ್ಥಾನದ ಮಾಡ್ಕೋ ಪಡೆದಿದ್ದಾರೆ' ಎಂದು ನೀಟ್ ಆಕಾಂಕ್ಷಿಯೊಬ್ಬರು X ನಲ್ಲಿ ಆರೋಪಿಸಿದ್ದಾರೆ.

Advertisement
Advertisement
Advertisement