For the best experience, open
https://m.hosakannada.com
on your mobile browser.
Advertisement

NEET 2024 Re exam: ದೇಶವ್ಯಾಪಿ ಮರುಪರೀಕ್ಷೆ ನಡೆಸಿ, ತಪ್ಪಿದರೆ 2024 ಬ್ಯಾಚಿನ ವೈದ್ಯರನ್ನು ಜನ 'ಕಳ್ಳ' ರೆಂದು ಕರೆದಾರು - ಪ್ರತಿಭಾವಂತ ವಿದ್ಯಾರ್ಥಿಗಳ ಆಗ್ರಹ !

NEET 2024 Re exam: ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿಯ ಮೋಸದ ಜಾಲ ಇದೀಗ ಬಯಲಾಗಿದ್ದು ದೇಶದಾದ್ಯಂತ ವಿದ್ಯಾರ್ಥಿಗಳು ಶಿಕ್ಷಣ ತಜ್ಞರು ನೀಟ್ 2024 ಹಗರಣದ ವಿರುದ್ಧ ತಿರುಗಿ ಬಿದ್ದಿದ್ದಾರೆ.
02:41 PM Jun 13, 2024 IST | ಸುದರ್ಶನ್
UpdateAt: 02:46 PM Jun 13, 2024 IST
neet 2024 re exam  ದೇಶವ್ಯಾಪಿ ಮರುಪರೀಕ್ಷೆ ನಡೆಸಿ  ತಪ್ಪಿದರೆ 2024 ಬ್ಯಾಚಿನ ವೈದ್ಯರನ್ನು ಜನ  ಕಳ್ಳ  ರೆಂದು ಕರೆದಾರು   ಪ್ರತಿಭಾವಂತ ವಿದ್ಯಾರ್ಥಿಗಳ ಆಗ್ರಹ
Image source: crosshosting.com.ar
Advertisement

NEET 2024 Re exam: ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿಯ ಮೋಸದ ಜಾಲ ಇದೀಗ ಬಯಲಾಗಿದ್ದು ದೇಶದಾದ್ಯಂತ ವಿದ್ಯಾರ್ಥಿಗಳು ಶಿಕ್ಷಣ ತಜ್ಞರು ನೀಟ್ 2024 ಹಗರಣದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಲವು ಮಂದಿ ಆರ್ಥಿಕವಾಗಿ ಸದೃಢರಾಗಿರುವ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟಿನ ಕದ ತಟ್ಟಿದ್ದಾರೆ. ಇದೀಗ ವಿದ್ಯಾರ್ಥಿಗಳ ಒಂದು ಬೇಡಿಕೆ ಈಡೇರಿದೆ- 1563 ವಿದ್ಯಾರ್ಥಿಗಳಿಗೆ ನೀಡಿರುವ ಗ್ರೇಸ್ ಮಾರ್ಕ್ ಅನ್ನು ತೆಗೆದುಹಾಕುವುದಾಗಿ ಏನ್‌ಟಿಎ ಸುಪ್ರೀಂ ಕೋರ್ಟಿನಲ್ಲಿ ಹೇಳಿದೆ. ಇದು ಒಳ್ಳೆಯ ಬೆಳವಣಿಗೆಯೇ.

Advertisement

NEET 2024: ಒತ್ತಡಕ್ಕೆ ಮಣಿದ NTA, 1563 ವಿದ್ಯಾರ್ಥಿಗಳ ಗ್ರೇಸ್ ಮಾರ್ಕ್ ರದ್ದು – ಮರುಪರೀಕ್ಷೆ ಖಚಿತ !

ಆದರೆ, ಈ ಸಲದ ನೀಟ್ 2024ರ ಪರೀಕ್ಷ ಹಗರಣ ಇನ್ನೂ ಹಲವು ಗುರುತರವಾದ ಸಮಸ್ಯೆಗಳಿಗೆ ದಾರಿಯಾಗಿದೆ. ಉತ್ತರ ಭಾರತದ ವ್ಯಕ್ತಿಗಳು ನಡೆಸುವ ಈ ಪರೀಕ್ಷೆಗಳ ಪವಿತ್ರತೆಯ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದೆ. ಮತ್ತು ಸುಪ್ರೀಂ ಕೋರ್ಟ್ ಕೂಡ ಅದನ್ನು ಇತ್ತೀಚೆಗೆ ಒತ್ತಿ ಹೇಳಿದೆ. ಉತ್ತರ ಭಾರತೀಯರು ಮತ್ತು ದಕ್ಷಿಣ ಭಾರತದ ಮಧ್ಯೆ ಮತ್ತೊಮ್ಮೆ ಕಂದಕ ನಿರ್ಮಾಣ ಮಾಡಿದೆ ನೀಟ್ 2024ರ ಪರೀಕ್ಷಾ ಹಗರಣ. ಈಗಾಗಲೇ ಉತ್ತರ ಭಾರತೀಯರು ಮತ್ತು ದಕ್ಷಿಣ ಭಾರತೀಯರ ಬಗ್ಗೆ ಭಾಷಣ ಸಂಘರ್ಷ ನಡೆದೇ ಇದೆ. ಉತ್ತರ ಭಾರತೀಯರ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾದಂತೆ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಿಂದಿನ ದಿನವೇ ಲೀಕ್ ಆಗಿದ್ದು ಅದರಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು ಈ ಸಲ ಹೆಚ್ಚು ಮಾರ್ಕ್ ಪಡೆಯುವಂತಾಗಿದೆ ಎನ್ನುವ ವ್ಯಾಪಕ ಕೂಗು ದೇಶದೆಲ್ಲೆಡೆ ಕೇಳಿ ಬರುತ್ತಿದೆ. "ನಮಗೆ ನ್ಯಾಷನಲ್ ಇಂಟರೆಸ್ಟಿಂಗ್ ಏಜೆನ್ಸಿ ಮಾಡುವ ನೀಟ್ ಬೇಡವೇ ಬೇಡ ನಾವು ನಮ್ಮದೇ ಕಾಲೇಜುಗಳಿಗೆ ಸೀಟು ಹಂಚಿಕೆ ಮಾಡುವಂತ ವ್ಯವಸ್ಥೆ ನಡೆಸುತ್ತೇವೆ' ಎಂದು ತಮಿಳುನಾಡು ಸರ್ಕಾರ ದನಿ ಏರಿಸಿ ಕೇಳಿದೆ.

Advertisement

ಅಷ್ಟೇ ಅಲ್ಲ, ಈ ಸಲದ ನೀಟ್ ಪರೀಕ್ಷೆಯ ಹಗರಣದಲ್ಲಿ ಕರ್ನಾಟಕ ಸಹಿತ ದಕ್ಷಿಣದ ರಾಜ್ಯಗಳ ವಿದ್ಯಾರ್ಥಿಗಳಿಗೆ ದೊಡ್ಡ ಪ್ರಮಾಣದಲ್ಲಿ ಮೋಸವಾಗಿದೆ. ಒಂದು ಕಡೆ ಬರೋಬ್ಬರಿ 67 ವಿದ್ಯಾರ್ಥಿಗಳು 720ಕ್ಕೆ 720 ಅನ್ನುವ ಅಸಾಧ್ಯವಾದ ಪರ್ಫೆಕ್ಟ್ ನಂಬರ್ ಅನ್ನು ಪಡೆದಿದ್ದಾರೆ. ಮತ್ತೊಂದು ಕಡೆ ಅತ್ಯಂತ ಪ್ರತಿಭಾಶಾಲಿ ವಿದ್ಯಾರ್ಥಿಗಳು ಕೂಡ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಪಡೆಯದ ಸ್ಥಿತಿ ನಿರ್ಮಾಣವಾಗಿದೆ. ಇದನ್ನೇ ಸುಪ್ರೀಂ ಕೋರ್ಟ್ ಪರೀಕ್ಷೆಯ ಪಾವಿತ್ರ್ಯ ಹಾಳಾಗಿದೆ ಎಂದಿದ್ದು ! ಇದಕ್ಕೆಲ್ಲ ಕಾರಣ NTA ಯ ಉತ್ತರ ಭಾರತೀಯ ಪ್ರೀತಿ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಜೊತೆಗೆ ಹಲವು ಸರ್ಕಾರಗಳು ಅಕ್ರೋಶ ವ್ಯಕ್ತಪಡಿಸಿವೆ.

ಈಗ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಎನ್‌ಟಿಎ 1563 ವಿದ್ಯಾರ್ಥಿಗಳಿಗೆ ನೀಡಿದ ಗ್ರೇಸ್ ಮಾರ್ಕುಗಳನ್ನು ಕ್ಯಾನ್ಸಲ್ ಮಾಡಲು ಒಪ್ಪಿಕೊಂಡಿದೆ. ಇದು ಒಳ್ಳೆಯ ಬೆಳವಣಿಗೆ. ಅದಕ್ಕಾಗಿ ವಿದ್ಯಾರ್ಥಿಗಳು ಸುಪ್ರೀಂಕೋರ್ಟಿನ ಮೆಟ್ಟಲು ಏರಬೇಕಾಗಿ ಬಂದದ್ದು ಮಾತ್ರ ದುರಂತ.

Neet 2024 ದೇಶವ್ಯಾಪಿ ಮರು ಪರೀಕ್ಷೆ ನಡೆಯಬೇಕಾ ?

1563 ವಿದ್ಯಾರ್ಥಿಗಳಿಗೆ ನೀಡಿದ ಗ್ರೇಸ್ ಮಾರ್ಕ್ ರದ್ದು ಮಾಡಿದ ಕೂಡಲೇ ಸಮಸ್ಯೆ ಪರಿಹಾರವಾಗುವುದಿಲ್ಲ. ಒಟ್ಟಾರೆ ಪ್ರಶ್ನೆ ಪತ್ರಿಕೆಯಲ್ಲಿ ಕಾಗಿದ್ದು ಅದೇ ಕಾರಣಕ್ಕಾಗಿ ದೇಶದಾದ್ಯಂತ ಹೆಚ್ಚಿನ ವಿದ್ಯಾರ್ಥಿಗಳು ಒಳ್ಳೆಯ ಮಾರ್ಕು ಪಡೆದಿದ್ದಾರೆ. ಪರೀಕ್ಷೆಯ ಪವಿತ್ರತೆ ಹಾಳಾಗಿ ಹೋಗಿದೆ. "ಇದು ಭಾವಿ ವೈದ್ಯರನ್ನು ತಯಾರು ಮಾಡುವ ಪರೀಕ್ಷೆ. ಒಬ್ಬ ಅಸಮರ್ಥ ವ್ಯಕ್ತಿ ವೈದ್ಯನಾಗಿ ಬಂದರೆ ರೋಗಿಗಳ ಗತಿ ಏನಾಗಬೇಡ ? ಇದು ರೋಗಿಗಳ ಜೀವದ ಜೊತೆ, ಜನರ ಪ್ರಾಣದ ಜತೆ ಆಡಿದ ಸರಸ. ಹಾಗಾಗಿ ಭವಿಷ್ಯದ ವೈದ್ಯರನ್ನು ನಿರ್ಮಿಸುವ ನೀಟ್ 2024ರ ಎಲ್ಲಾ ಪರೀಕ್ಷೆಗಳನ್ನು ರದ್ದು ಮಾಡಿ ಮರು ಪರೀಕ್ಷೆ ನಡೆಸಬೇಕು.

ಯಾವುದೇ ಅನರ್ಹ ವಿದ್ಯಾರ್ಥಿ ಬೇರೆ ಯಾವುದೇ ಕ್ಷೇತ್ರದಲ್ಲೂ ಹೋದರು ಅಲ್ಲಿ ಆತನ ಪರ್ಫಾಮೆನ್ಸ್ ಗೆ ಕೊರತೆಯಾಗುತ್ತದೆ. ಆದರೆ ವೈದ್ಯನಾಗಿ ಹೋಗುವ ವ್ಯಕ್ತಿ ಪರಿಪೂರ್ಣವಾಗಿರಬೇಕು. ಕೊಂಚವೇ ಅನುಮಾನ ಬಂದರೂ, ಮರು ಪರೀಕ್ಷೆ ನಡೆಸಬೇಕಿತ್ತು ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ. ಅದನ್ನು ಬಿಟ್ಟು ಯಾವುದೇ ಅವ್ಯವಹಾರ ಆಗಿಲ್ಲ ಎಂದು ಸಮರ್ಥಿಸಿಕೊಂಡು ಕೂತಿದೆ.

NEET 2024: ಒತ್ತಡಕ್ಕೆ ಮಣಿದ NTA, 1563 ವಿದ್ಯಾರ್ಥಿಗಳ ಗ್ರೇಸ್ ಮಾರ್ಕ್ ರದ್ದು – ಮರುಪರೀಕ್ಷೆ ಖಚಿತ !

ಅತ್ತ ನರೇಂದ್ರ ಮೋದಿಯ ಸರ್ಕಾರ ಕಂಡು ಮುಚ್ಚಿ ಕುಳಿತಿದೆ. ಬಹುಶಃ ಅವರು 3 ನೇ ಬಾರಿಗೆ ಅಧಿಕಾರ ಅನುಭವಿಸುವ ಖುಷಿಯಲ್ಲಿದ್ದಾರೆ. 24 ಲಕ್ಷ ವಿದ್ಯಾರ್ಥಿಗಳು ಅವರ 1 ಕೋಟಿಗೂ ಹೆಚ್ಚು ಸಂಖ್ಯೆಯ ಪೋಷಕ ವರ್ಗವು ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಸಾಕ್ಷಿ ಸಮೇತ ಕೂಗು ಹಾಕಿದರೂ ಕೇಂದ್ರ ಸರಕಾರದ ಕಿವಿಗೆ ಅದು ಬೀಳುತ್ತಿಲ್ಲ. ವಿದ್ಯಾರ್ಥಿಗಳ ಜೊತೆ ಸದಾ ಸಂವಾದಕ್ಕೆ ಉತ್ಸಾಹ ತೋರುವ ನರೇಂದ್ರ ಮೋದಿ ಈ ವಿಷಯದಲ್ಲಿ ಕುರುಡರಾಗಿದ್ದಾರೆಯೇ ? ಕೇಂದ್ರ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಮರು ಪರೀಕ್ಷೆ ನಡೆಸಬೇಕು. ಭವಿಷ್ಯದ ಸಮರ್ಥ ವೈದ್ಯರನ್ನು ತಯಾರು ಮಾಡುವಲ್ಲಿ ಕೇಂದ್ರ ಗಟ್ಟಿ ಮನಸ್ಸು ಮಾಡಬೇಕು. ಇಲ್ಲದೆ ಹೋದರೆ 2024ರ ಬ್ಯಾಚಿನ ವೈದ್ಯರನ್ನು 'ಕಳ್ಳ'ರೆಂದು ನೋಡುವ ಪರಿಸ್ಥಿತಿ ಮುಂದೆ ಉದ್ಭವವಾಗಬಹುದು.

Darshan Case: ಇತಿಹಾಸದಲ್ಲೇ ಮೊದಲು; ನಟ ದರ್ಶನ್‌ ಇರುವ ಠಾಣೆಯ ಸುತ್ತ ಶಾಮಿಯಾನ ಹಾಕಿ ಗೇಟ್‌ ಕ್ಲೋಸ್‌

Advertisement
Advertisement
Advertisement