ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

NEET 2024: ನೀಟ್ 2024 ರ ಕ್ವೆಶ್ಚನ್ ಪೇಪರ್ ಲೀಕ್ ? ತಳಮಳದಲ್ಲಿ ಅರ್ಹ ಅಭ್ಯರ್ಥಿಗಳು !

NEET 2024: ನೀಟ್ 2024 ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎನ್ನುವ ಬಹು ದೊಡ್ಡ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡದಾಗಿ ಎದ್ದಿದೆ. 
04:41 AM May 06, 2024 IST | ಸುದರ್ಶನ್
UpdateAt: 10:33 AM May 06, 2024 IST

NEET 2024: ಇಂದು ದೇಶದಾದ್ಯಂತ ನೀಟ್ (Neet 2024) ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟು 24 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಎಂಬಿಬಿಎಸ್ ಬಿಡಿಎಸ್ ಮತ್ತು ಇತರ ಮೆಡಿಕಲ್ ಸಂಬಂಧಿ ಕೋರ್ಸ್ ಗಳಿಗೆ ಸೀಟು ಪಡೆಯಲು ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದಿದ್ದಾರೆ. ದೇಶದ ಒಟ್ಟು 571 ಪಟ್ಟಣಗಳಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪರೀಕ್ಷೆ ನಡೆಸಿದೆ. ಅಷ್ಟೇ ಅಲ್ಲದೆ 14 ವಿದೇಶಗಳ ಪಟ್ಟಣಗಳಲ್ಲಿ ಕೂಡ ನೀಟ್ ಪರೀಕ್ಷೆ ಬರೆಸಲಾಗಿದೆ. ಈ ಸಂದರ್ಭ ನೀಟ್ 2024 ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎನ್ನುವ ಬಹು ದೊಡ್ಡ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡದಾಗಿ ಎದ್ದಿದೆ.

Advertisement

ಇದನ್ನೂ ಓದಿ: Health Tips: ತೂಕ ಇಳಿಸಿಕೊಳ್ಳಲು ರಾತ್ರಿಯ ಊಟವನ್ನು ಬಿಡುತ್ತಿದ್ದೀರಾ? : ಈ ರೀತಿ ಮಾಡುವುದು ದೇಹಕ್ಕೆ ಅಪಾಯಕಾರಿ : ಹೇಗೆ ಗೊತ್ತಾ

ಹೌದು, ಇವತ್ತು ದೇಶದಾದ್ಯಂತ ವಿದ್ಯಾರ್ಥಿಗಳು ತಮ್ಮ ಕನಸಿನ ಡಿಗ್ರಿ ಪಡೆಯಲು ಬೇಕಾದ ಅರ್ಹತಾ ಪರೀಕ್ಷೆಯನ್ನು ಬರೆದಿದ್ದಾರೆ. ನೀಟ್ 2024 ಪರೀಕ್ಷೆ ಮುಗಿದು ಹೋಗಿದೆ. ಕಳೆದ ಸಲಕ್ಕೆ ಹೋಲಿಸಿದರೆ ಈ ಸಲ ವಿಭಿನ್ನ ರೀತಿಯಲ್ಲಿ ಟ್ವಿಸ್ಟ್ ಮಾಡಿ ಪ್ರಶ್ನೆಗಳನ್ನು ಕೇಳಲಾಗಿದೆ. ನೀಟ್ ಪರೀಕ್ಷೆಯು 720 ಮಾರ್ಕುಗಳಿಗೆ ನಡೆಯುತ್ತಿದ್ದು ಅವುಗಳಲ್ಲಿ 180 ಮಾರ್ಕಿನ ಭೌತಶಾಸ್ತ್ರದ ಪ್ರಶ್ನೆಗಳು, 180 ಮಾರ್ಕಿನ ರಸಾಯನ ಶಾಸ್ತ್ರದ ಪ್ರಶ್ನೆಗಳು ಮತ್ತು 360 ಮಾರ್ಕಿನ ಜೀವಶಾಸ್ತ್ರದ ಸಂಬಂಧಿ ಪ್ರಶ್ನೆಗಳು ಇರುತ್ತವೆ. ಒಟ್ಟು ಮಾರ್ಕುಗಳು 720.

Advertisement

ಇದನ್ನೂ ಓದಿ: Shubman Gill: ಟೀಂ ಇಂಡಿಯಾ ಮಹಿಳಾ ಕ್ರಿಕೆಟಿಗರಿಗೆ ಬ್ಯಾಟಿಂಗ್ ಟಿಪ್ಸ್ ನೀಡಿದ ಶುಭ್ಮನ್ ಗಿಲ್

ಈ ಸಲ ರಸಾಯನ ಶಾಸ್ತ್ರ ವಿಭಾಗದಿಂದ ಸಾಧಾರಣದಿಂದ ಒಂದಷ್ಟು ಕಠಿಣ ಪ್ರಶ್ನೆಗಳನ್ನು ಕೇಳಲಾಗಿದೆ. ಭೌತಶಾಸ್ತ್ರದಲ್ಲಿ ಪ್ರಶ್ನೆಪತ್ರಿಕೆಗಳು ಸಾಧಾರಣವಾಗಿ ಇದ್ದವು. ಆದರೆ ಈ ಸಲ ಬಯಾಲಜಿಯಲ್ಲಿ ಸುಲಭವಾದ ಪ್ರಶ್ನೆಗಳನ್ನು ಕೇಳಲಾಗಿತ್ತು. ಒಟ್ಟಾರೆ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಬಯಾಲಜಿ ಅತ್ಯಂತ ಸುಲಭ ಪ್ರಶ್ನೆಗಳನ್ನು ಕೇಳಲಾದ ವಿಷಯ. ಕೆಮಿಸ್ಟ್ರಿ ಮತ್ತು ಫಿಸಿಕ್ಸ್ ಪ್ರಶ್ನೆಗಳಿಗೆ ಉತ್ತರಿಸಲು ಕೊಂಚ ಹೆಚ್ಚಿನ ಸಮಯ ಬೇಕಾಗಿತ್ತು. ಎಲ್ಲಾ ಪತ್ರಿಕೆಗಳಲ್ಲೂ ಎನ್ ಸಿ ಇ ಆರ್ ಟಿ ಪಠ್ಯ ವಿಷಯಗಳಿಂದಲೇ ಆಯ್ದು ಕೊಡಲಾಗಿತ್ತು. ಬಯಾಲಜಿ ಸೂಲಾಬಯುಕ್ತರು ವಿಷಯಗಳ್ ಹೆಚ್ಚಿನ ಹೊಂದಿಸುವ ಪ್ರಶ್ನೆಗಳನ್ನು ನೀಡಲಾಗಿದ್ದು, ಹೆಚ್ಚಿನ ಪ್ರಶ್ನೆ ಪತ್ರಿಕೆಗಳು ಜಾಸ್ತಿ ಸಮಯವನ್ನು ಬೇಡಿವೆ.

ಇದರ ಜೊತೆಯಲ್ಲೇ ಇವತ್ತು ನೀಟ್ ಕೊಶ್ಚನ್ ಪೇಪರ್ ಗಳು ಆಗಿರುವ ಸುದ್ದಿ ಬಂದಿದೆ. ರಾಜಸ್ಥಾನದ ಕೋಟದಲ್ಲಿ ಕ್ವೆಶ್ಚನ್ ಪೇಪರ್ ಲೀಕ್ ಆಗಿದೆ. ಅಲ್ಲಿ ಹಿಂದಿ ಮಾಧ್ಯಮದಲ್ಲಿ ಬರಬೇಕಾಗಿದ್ದ ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್ ಮಾಧ್ಯಮದಲ್ಲಿ ಕೊಡಲಾಗಿತ್ತು. ಆದರೆ ಕೆಲ ವಿದ್ಯಾರ್ಥಿಗಳು 4.20 ರ ಸುಮಾರಿಗೆ ಪ್ರಶ್ನೆ ಪತ್ರಿಕೆಗಳ ಜೊತೆ ಹೊರಗೆ ಬಂದಿದ್ದಾರೆ. 2 ಗಂಟೆಗೆ ಪರೀಕ್ಷೇ ಶುರುವಾಗಿದ್ದು, ರೂಲ್ಸ್ ನ ಪ್ರಕಾರ 5.20 ರವರೆಗೆ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಇರಬೇಕು. ಆದರೆ ಪ್ರಶ್ನೆ ಪತ್ರಿಕೆಗಳ ಜೊತೆ ವಿದ್ಯಾರ್ಥಿಗಳು ಕೆಲವು ವಿದ್ಯಾರ್ಥಿಗಳು ನಾಲ್ಕು 20 ರ ಸುಮಾರಿಗೆ ಬಂದಿದ್ದಾರೆ. ಅಲ್ಲಿಂದ ಕೊಶ್ಚನ್ ಪೇಪರ್ ಗಳು ವೈರಲ್ ಆಗಿ ಹಲವಾರು ಕಡೆ ತಿರುಗಾಡಿವೆ. ಇದೀಗ ಈ ಸುದ್ದಿ ದೇಶಾದ್ಯಂತ ವೈರಲ್ ಆಗುತ್ತಿದ್ದು ಕೋಶ್ಚನ್ ಪೇಪರ್ ಒಟ್ಟಾರೆಯಾಗಿ ಲೀಕ್ ಆಗಿದೆಯಾ ಎಂಬ ಬಹು ದೊಡ್ಡ ಪ್ರಶ್ನೆಗಳನ್ನು ಎತ್ತಿವೆ. ಇಂದಿನ ಟೆಲಿಕಾಮಿನಿಟೇಶನ್ ನ ಮೂಲಕ ಪ್ರಬಲ ಸಂಪರ್ಕ ಸಾಧಿಸಿರುವ ಯುಗದಲ್ಲಿ ಕೆಲವೇ ನಿಮಿಷಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ದೇಶವಿದೇಶಗಳಲ್ಲಿ ಸರಬರಾಜು ಮಾಡಬಹುದು. ಹಾಗಾಗಿ ನೀಟ್ ಪ್ರಶ್ನೆ ಪತ್ರಿಕೆ ಯಾಕೆ ದೇಶದಾದ್ಯಂತ ಲೀಕ್ ಆಗಿರಬಾರದು ಎನ್ನುವ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಎತ್ತುತ್ತಿದ್ದಾರೆ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ತನಿಖೆ ಆಗಬೇಕಾಗಿದೆ.

ಈ ಬಗ್ಗೆ ಹೇಳಿಕೆ ನೀಡಿದ ಎನ್‌ಟಿಎ ನ್ಯಾಷನಲ್ ಟ್ರಸ್ಟಿಗೆ ಏಜೆನ್ಸಿ ನೀಟ್ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿಲ್ಲ ಎಂದಿದೆ."ಪೇಪರ್ ಸೋರಿಕೆ" ಎಂಬುದು ಸಂಪೂರ್ಣವಾಗಿ ಸುಳ್ಳು. ರಾಜಸ್ಥಾನದ ಗರ್ಲ್ಸ್ ಹೈಯರ್ ಸೆಕೆಂಡರಿ ಆದರ್ಶ ವಿದ್ಯಾ ಮಂದಿರದಲ್ಲಿ ನಡೆದ ಘಟನೆಯಲ್ಲಿ, ವಿದ್ಯಾರ್ಥಿಗಳಿಗೆ ತಪ್ಪಾಗಿ ಇಂಗ್ಲಿಷ್ ಮಾಧ್ಯಮದ ಪ್ರಶ್ನೆ ಪತ್ರಿಕೆಯನ್ನು ನೀಡಲಾಯಿತು. ಮತ್ತು ಇನ್ವಿಜಿಲೇಟರ್ ತನ್ನ ತಪ್ಪನ್ನು ಸರಿಪಡಿಸುವ ಹೊತ್ತಿಗೆ ವಿದ್ಯಾರ್ಥಿಗಳು ಬಲವಂತವಾಗಿ ಪ್ರಶ್ನೆ ಪತ್ರಿಕೆಯೊಂದಿಗೆ ಪರೀಕ್ಷಾ ಹಾಲ್‌ನಿಂದ ಹೊರಬಿದ್ದಿದ್ದಾರೆ ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ಪರೀಕ್ಷೆಯ ನಂತರ ಮಾತ್ರ ಪ್ರಶ್ನೆ ಪತ್ರಿಕೆಯೊಂದಿಗೆ ಸಭಾಂಗಣದಿಂದ ಹೊರಬರಲು ಅವಕಾಶವಿರುತ್ತದೆ. ಕೆಲವು ವಿದ್ಯಾರ್ಥಿಗಳು ಬಲವಂತವಾಗಿ ಹೊರನಡೆಡಿದ್ದಾರೆ. ನಂತರ ಸಂಜೆ 4 ಗಂಟೆಯ ಸುಮಾರಿಗೆ ಪ್ರಶ್ನೆ ಪತ್ರಿಕೆ ಇಂಟರ್ನೆಟ್‌ನಲ್ಲಿ ಪ್ರಸಾರವಾಯಿತು ಎಂದು ಆಅಧಿಕಾರಿ ಹೇಳಿದ್ದಾರೆ. ಆದರೆ ಆ ಹೊತ್ತಿಗಾಗಲೇ ಪರೀಕ್ಷೆಯು ಈಗಾಗಲೇ ಎಲ್ಲಾ ಇತರ ಕೇಂದ್ರಗಳಲ್ಲಿ ಪ್ರಾರಂಭವಾಗಿದೆ. ಆದ್ದರಿಂದ, NEET ಯುಜಿ ಪ್ರಶ್ನೆ ಪತ್ರಿಕೆಯ ಯಾವುದೇ ಸೋರಿಕೆಯಾಗಿಲ್ಲ" ಎಂದು NTA ಅಧಿಕಾರಿ ಹೇಳಿದ್ದಾರೆ.

Advertisement
Advertisement
Next Article