For the best experience, open
https://m.hosakannada.com
on your mobile browser.
Advertisement

Rajya Sabha: ಮೋದಿ ಸರ್ಕಾರಕ್ಕೆ ಬಿಗ್ ಶಾಕ್, ರಾಜ್ಯಸಭೆಯಲ್ಲಿ NDA ಬಲ ಕುಸಿತ - ಇನ್ಮುಂದೆ ಸುಲಭವಲ್ಲ ಬಿಲ್ ಪಾಸ್ !!

06:43 PM Jul 15, 2024 IST | ಸುದರ್ಶನ್
UpdateAt: 06:43 PM Jul 15, 2024 IST
rajya sabha  ಮೋದಿ ಸರ್ಕಾರಕ್ಕೆ ಬಿಗ್ ಶಾಕ್  ರಾಜ್ಯಸಭೆಯಲ್ಲಿ nda ಬಲ ಕುಸಿತ   ಇನ್ಮುಂದೆ ಸುಲಭವಲ್ಲ ಬಿಲ್ ಪಾಸ್
Advertisement

Advertisement

Rajya Sabha: ಕಳೆದು ಲೋಕಸಭಾ ಚುನಾವಣೆಯಲ್ಲಿ(Parliament Election) ಬಹುಮತ ಪಡೆಯದೆ ಬಿಜೆಪಿಗೆ ಭಾರೀ ಮುಖಭಂಗವಾಗಿತ್ತು. ಆದರೂ ಹೇಗೋ ಕಸರತ್ತು ನಡೆಸಿ NDA ಮೈತ್ರಿ ಕೂಟದ ಮೂಲಕ ಸರ್ಕಾರ ರಚಿಸಿತ್ತು. ಆದರೆ ಇದೀಗ ಮತ್ತೆ ಬಿಜೆಪಿಗೆ ದೊಡ್ಡ ಆಘಾತ ಅಗಿದ್ದು ರಾಜ್ಯಸಭೆಯಲ್ಲಿ(Rajyasabha) ಕೂಡ NDA ಬಲ ಕುಸಿತಕಂಡಿದೆ. ಹೀಗಾಗಿ ಇನ್ಮಂದೆ ಬಿಲ್ ಪಾಸ್ ಮಾಡುವುದು ಅಷ್ಟು ಸುಲಭವಾಗಿರುವುದಿಲ್ಲ ಎನ್ನಲಾಗುತ್ತಿದೆ.

Advertisement

ಹೌದು, ನಾಲ್ವರು ಬಿಜೆಪಿ(BJP)ಯ ನಾಮನಿರ್ದೇಶಿತ ಸದಸ್ಯರಾದ ರಾಕೇಶ್ ಸಿನ್ಹಾ, ರಾಮ್ ಶಕಲ್, ಸೋನಲ್ ಮಾನ್‌ಸಿಂಗ್ ಹಾಗೂ ಮಹೇಶ್ ಜೇಠ್ಮಲಾನಿ ಅವರ ಅವಧಿ ಶನಿವಾರಕ್ಕೆ ಕೊನೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆಯಲ್ಲಿ ಇಳಿಕೆ ಆಗಿದ್ದು ರಾಜ್ಯಸಭೆಯಲ್ಲಿ ಬಿಜೆಪಿಯ ಬಲ 86ಕ್ಕೆ ಕುಸಿದಿದೆ. ಹಾಗೆಯೇ 250 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (National Democratic Alliance)ಸಂಖ್ಯೆ 101 ಇದ್ದು, ಇದು ಪ್ರಸ್ತುತ ಬಹುಮತಕ್ಕೆ ಬೇಕಿರುವ 113 ಸದಸ್ಯ ಬಲಕ್ಕಿಂತ ಕಡಿಮೆ ಇದೆ.

ಇದರಿಂದ ಸರ್ಕಾರದ ಬಿಲ್ ಪಾಸ್ ಆಗುವುದು ಕಷ್ಟವಾಗಿದೆ. ಇದರಿಂದ ಸರ್ಕಾರ ಬಯಸಿದ ಮಸೂದೆ ಪಾಸಾಗಬೇಕೆಂದರೆ ಆಡಳಿತರೂಢ ಎನ್‌ಡಿಎ ಮಿತ್ರಪಕ್ಷಗಳಲ್ಲದೇ ತಟಸ್ಥವಾಗಿರುವ ಪಕ್ಷಗಳ ಸಂಸದರ ಬೆಂಬಲಕ್ಕಾಗಿ ಕಾಲು ಹಿಡಿಯುವುದು ಅಗತ್ಯವಾಗಲಿದೆ. ಹೀಗಾಗಿ ರಾಜ್ಯಸಭೆಯಲ್ಲಿ ಇನ್ನೇನಾದರೂ ಮಸೂದೆ ಪಾಸು ಮಾಡುವಂತಹ ಸಂದರ್ಭ ಬಂದರೆ ತನ್ನ ಮಾಜಿ ಮಿತ್ರಪಕ್ಷವಾದ ಎಐಎಡಿಎಂಕೆ ಮತ್ತು ಜಗನ್ ಮೋಹನ್ ರೆಡ್ಡಿಯವರ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಸೇರಿದಂತೆ ಎನ್‌ಡಿಎ ಜೊತೆ ಸೇರದ ಇತರ ಪಕ್ಷಗಳನ್ನು ಅವಲಂಬಿಸಬೇಕಾದಂತಹ ಸ್ಥಿತಿ ನಿರ್ಮಾಣವಾಗಲಿದೆ.

ತಮಿಳುನಾಡಿನಲ್ಲಿ ಸಕ್ರಿಯವಾಗಿರುವ  ಎಐಎಡಿಎಂಕೆ ನಾಲ್ಕು ಸಂಸದರನ್ನು ಹೊಂದಿದ್ದರೆ, ಜಗನ್ ಅವರ ವೈಎಸ್‌ಆರ್‌ಸಿಪಿ 11 ಸದಸ್ಯರನ್ನು ಹೊಂದಿದೆ. ಒಡಿಶಾದ ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರ ಬಿಜೆಡಿ ಪಾರ್ಟಿ, ಇದು ರಾಜ್ಯಸಭೆಯಲ್ಲಿ 9 ಸದಸ್ಯರನ್ನು ಹೊಂದಿದೆ. ಈ ಮೂಲು ಪಕ್ಷಗಳು ಈ ಹಿಂದೆ ಆಡಳಿತ ಪಕ್ಷವನ್ನು ಬೆಂಬಲಿಸಿದ್ದವು. ಆದರೀಗ ಈ ಎರಡು ಪಾರ್ಟಿಗಳು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿವೆ.

ಬಿಜೆಡಿ ಯಾವಾಗಲೂ ಬಿಜೆಪಿಯನ್ನು ಬೆಂಬಲಿಸುತ್ತಿತ್ತು. ಆದರೆ ಒಡಿಶಾದಲ್ಲಿ ತಮ್ಮ ಪಕ್ಷವನ್ನು ಬಿಜೆಪಿ ಸೋಲಿಸಿದ ನಂತರ ಬಿಜೆಡಿ ನವೀನ್ ಪಟ್ನಾಯಕ್ ಅವರು ತಾನು ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಆಡಳಿತ ಪಕ್ಷ ಇಕ್ಕಟ್ಟಿಗೆ ಸಿಲುಕಿರುವುದಂತೂ ಸತ್ಯ.

ರಾಜ್ಯಸಭೆಯ ಒಟ್ಟು ಸದಸ್ಯಬಲ 250, ಅದರಲ್ಲಿ 238 ಸದಸ್ಯರನ್ನು ವೋಟು ಹಾಕಿ ಆಯ್ಕೆ ಮಾಡಲಾಗುತ್ತದೆ. ಉಳಿದ 12 ಸದಸ್ಯರನ್ನು ರಾಷ್ಟ್ರಪತಿಗಳು ನಾಮ ನಿರ್ದೇಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಸದ್ಯ ಸದಸ್ಯ ಬಲ 225, ಇದರಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ 87 ಸದಸ್ಯರನ್ನು ಹೊಂದಿದೆ. ಅದರಲ್ಲಿ 26 ಸದಸ್ಯರು ಕಾಂಗ್ರೆಸಿಗರಾದರೆ, 13 ಟಿಎಂಸಿ ಸದಸ್ಯರು ಹಾಗೂ ಎಎಪಿ, ಡಿಎಂಕೆಯ ತಲಾ 10 ಸದಸ್ಯರಿದ್ದಾರೆ.

Advertisement
Advertisement
Advertisement