National politics: ಮಾಜಿ ಸಿಎಂ, ಕಾಂಗ್ರೆಸ್ ನೇತಾರ ಬಿಜೆಪಿ ಸೇರ್ಪಡೆ ?!
National politics: ಪ್ರಭಾವಿ ಕಾಂಗ್ರೆಸ್ ನಾಯಕ, ಕಾಂಗ್ರೆಸ್ ಮಾಛಿ ಸಿಎಂ ಕಮಲ್ ನಾಥನ್ ಅವರು ಬಿಜೆಪಿ(BJP) ಸೇರ್ಪಡೆ ಆಗುತ್ತಿದ್ದಾರೆ ಎಂಬ ವಿಚಾರ ಭಾರೀ ಸದ್ದು ಮಾಡುತ್ತಿದೆ.
ಹೌದು, ಮಧ್ಯಪ್ರದೇಶದ(Madhyapradesh) ಕಾಂಗ್ರೆಸ್ ನಾಯಕ, ಮಾಜಿ ಸಿಎಂ, ಕಳೆದ 45 ವರ್ಷ ಗಳಿಂದ ಕಾಂಗ್ರೆಸ್‌ನ ಕಟ್ಟಾಳುವಾಗಿದ್ದ ಕಮಲ್ ನಾಥ್(Kamalnath) ಬಿಜೆಪಿಯನ್ನು ಸೇರಬಹುದು ಎಂಬ ಗುಲ್ಲು ಹರಡಿದೆ.
ಇದನ್ನೂ ಓದಿ: Dr G parameshwar: ಮುಸ್ಲಿಂಮರಿಗೆ ಹೆಚ್ಚು ಅವಕಾಶ ನೀಡುವುದೇ ನಮ್ಮ ಕಾಂಗ್ರೆಸ್ ನೀತಿ - ಗೃಹ ಸಚಿವ ಡಾ ಪರಮೇಶ್ವರ್!!
ಅಂದಹಾಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ(Loksabha) 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲೇಬೇಕೆಂದು ಅಬ್ ಕಿ ಬಾರ್.. ಚಾರ್ ಸೌ ಫಾರ್ ಎಂದು ಘೋಷಣೆ ಮೊಳಗಿಸುತ್ತಿದೆ. ಅದರ ಭಾಗವಾಗಿ ದೆಹಲಿಯ(Delhi) ಭಾರತ್ ಮಂಟಪಂನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ(BJP National Executive meeting) ಹಮ್ಮಿಕೊಂಡಿದೆ. ಇದರಲ್ಲಿ ಕಮಲ್ ನಾಥ್ ಅವರು ಭಾಗವಹಿಸುತ್ತಾರೆ ಎಂಬ ಸುದ್ದಿ ಹರಡಿದೆ.
ಅಲ್ಲದೆ ಕಮಲ್‌ಗೆ ಬಿಜೆಪಿ ರಾಜ್ಯಸಭಾ ಸ್ಥಾನ ನೀಡಬಹುದು. ಪುತ್ರ ನಕುಲ್ ನಾಥ್‌ಗೆ ಛಂದ್ವಾಡಾ ಲೋಕಸಭೆ ಕ್ಷೇತ್ರದ ಟಿಕೆಟ್ ನೀಡಬಹುದು ಎಂಬ ವಿಚಾರ ಕೇಳಿಬರುತ್ತಿದೆ. ಈ ಸುದ್ದಿ ನಿಜವಾದರೆ ಕಮಲ್ ನಾಥ್ ರಾಜಕೀಯ ಜೀವನ ಬಹುದೊಡ್ಡ ತಿರುವು ಪಡೆದಂತಾಗಲಿದೆ.