ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Ayodhya Ram mandir priest: ಅಯೋಧ್ಯೆಯ ಶ್ರೀ ರಾಮನ ಪೂಜೆಗೆ ಅರ್ಚಕನಾಗಿ ವಿದ್ಯಾರ್ಥಿ ನೇಮಕ - 3,000 ಪುರೋಹಿತರನ್ನು ಮೀರಿಸಿ ಈತ ಆಯ್ಕೆಯಾಗಿದ್ದೇ ರೋಚಕ !!

06:50 AM Dec 12, 2023 IST | ಹೊಸ ಕನ್ನಡ
UpdateAt: 06:50 AM Dec 12, 2023 IST
Advertisement

Ayodhya Ram mandir priest : ಜನವರಿ 22ರಂದು ಕೋಟ್ಯಾಂತರ ಹಿಂದೂಗಳ ಹತ್ತಾರು ವರ್ಷಗಳ ಕನಸು ನನಸಾಗಲಿದ್ದು ರಾಮನ ಭವ್ಯ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ಈ ವೇಳೆ ಶ್ರೀರಾಮನಿಗೆ ಮಹಾಹಸ್ತಾಕಾಭಿಷೇಕ ನೆರವೇರಲಿದ್ದು ಅಯೋಧ್ಯೆಯಲ್ಲಿ ಈಗಿಂದಲೇ ಭರದ ಸಿದ್ದತೆಗಳು ನಡೆಯುತ್ತಿವೆ. ರಾಮನ ಪ್ರತಿಷ್ಠೆ ಆದ ಬಳಿಕ ನಿತ್ಯವೂ ಪೂಜೆ, ಪುನಸ್ಕಾರಗಳು ನೆರವೇರಲಿದ್ದು ಇದಕ್ಕಾಗಿ ರಾಮಮಂದಿರದ ಅರ್ಚಕರನ್ನೂ ಆಯ್ಕೆ ಮಾಡಲಾಗಿದೆ. ಆದರೆ ಈ ಅರ್ಚಕರ ಆಯ್ಕೆಯೇ ವಿಶೇಷವಾಗಿದ್ದು, ರಾಮಮಂದಿರದ ಅರ್ಚಕನಾಗಿ(Rama mandir worshiper) ರಾಮನ ಆರಾಧಕನಾಗಿ ವಿದ್ಯಾರ್ಥಿಯೊಬ್ಬನ ಆಯ್ಕೆಯಾಗಿದೆ.

Advertisement

ಹೌದು, ಗಾಜಿಯಾಬಾದ್ ವಿದ್ಯಾರ್ಥಿ ಮೋಹಿತ್ ಪಾಂಡೆ(Mohith panday) ಅಯೋಧ್ಯೆ ರಾಮ ಮಂದಿರದ ಅರ್ಚಕರಾಗಿ (Ayodhya Ram mandir priest )ಆಯ್ಕೆಯಾಗಿದ್ದು ಭಾರೀ ಅಚ್ಚರಿ ಮೂಡಿಸಿದ್ದಾರೆ. ಯಾಕೆಂದರೆ ರಾಮನ ಅರ್ಚಕನಾಗಲು ಸುಮಾರು 3000 ಅರ್ಚಕರು, ಪುರೋಹಿತರಿಂದ ಅರ್ಜಿಗಳು ಬಂದಿದ್ದವು. ಬಳಿಕ ಅವರನ್ಶು ಸಂದರ್ಶಿಸಿ 50 ಮಂದಿಯನ್ನು ಆರಿಸಲಾಯಿತು. ನಂತರ ಅವರಲ್ಲಿ ಗಾಜಿಯಾಬಾದ್‌ನ ದೂಧೇಶ್ವರ ವೇದ ವಿದ್ಯಾಪೀಠದ ವಿದ್ಯಾರ್ಥಿ ಮೋಹಿತ್ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ 3000 ಘಟಾನುಘಟಿ ಪುರೋಹಿತರ ನಡುವೆ ಈ ವಿದ್ಯಾರ್ಥಿ ಆಯ್ಕೆಯಾಗಿದ್ದೇ ಒಂದು ರೋಚಕವಾಗಿದೆ.

ಯಾರು ಈ ಮೋಹಿತ್ ಪಾಂಡೆ?
ಮೋಹಿತ್ ಪಾಂಡೆ ವೆಂಕಟೇಶ್ವರ ವೈದಿಕ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ತಮ್ಮ ಆಚಾರ್ಯ ಪದವಿಯನ್ನು ಗಳಿಸಿದ ನಂತರ, ಮೋಹಿತ್ ಪಾಂಡೆ ತಮ್ಮ ಪಿಎಚ್‌ಡಿಗೆ ಸಿದ್ಧರಾಗುತ್ತಿದ್ದಾರೆ.
ಮೋಹಿತ್ ಅವರು ದೂಧೇಶ್ವರ ವೇದ ವಿದ್ಯಾಪೀಠದಲ್ಲಿ ಏಳು ವರ್ಷಗಳ ಅಧ್ಯಯನದ ನಂತರ, ಹೆಚ್ಚಿನ ಅಧ್ಯಯನಕ್ಕಾಗಿ ತಿರುಪತಿಗೆ ಹೋಗಿದ್ದಾರೆ. ಬಳಿಕ ನೇಮಕಾತಿಗೆ ಮುನ್ನ ಅವರು ಆರು ತಿಂಗಳ ತರಬೇತಿಗೆ ಒಳಗಾಗಬೇಕಾಗುತ್ತದೆ. ಇನ್ನು ಮೋಹಿತ್ ಅವರು ಅಧ್ಯಯನ ನಡೆಸಿದ ದೂಧೇಶ್ವರನಾಥ ಮಠವು ಉತ್ತರ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಪ್ರಪಂಚದೆಲ್ಲೆಡೆಯಿಂದ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ವೇದಾಧ್ಯಯನ ಪೀಠದಲ್ಲಿ ಸುಮಾರು 70 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ದೇಶದ ಮಾತ್ರವಲ್ಲದೇ ವಿದೇಶಗಳಲ್ಲಿರುವ ಹಿಂದೂ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಾರೆ ಎಂಬುದು ಇಲ್ಲಿನ ವಿಶೇಷ.

Advertisement

ಸಂಸ್ಥೆಯಲ್ಲಿ ಆಚಾರ್ಯರಾಗಿ ಕಾರ್ಯನಿರ್ವಹಿಸುತ್ತಿರುವ ನಿತ್ಯಾನಂದ ಅವರು ಮಾತನಾಡಿ ʼಮೋಹಿತ್‌ ಪಾಂಡೆ ಅವರು ದೂದೇಶ್ವರ ವೇದ ವಿದ್ಯಾಪೀಠದಲ್ಲಿ ಏಳು ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರ ತಿರುಪತಿಯ ವೆಂಕಟೇಶ್ವರ ವೇದಿಕ್‌ ವಿಶ್ವವಿದ್ಯಾಲಯಕ್ಕೆ ತೆರಳಿದರು. ವಿದ್ಯಾರ್ಥಿಗಳಿಗೆ ಧರ್ಮ, ಸಂಸ್ಕಾರಗಳ ಬಗ್ಗೆ ತಿಳುವಳಿಕೆ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆʼ ಎಂದಿದ್ದಾರೆ.

ಇದನ್ನೂ ಓದಿ: Dr Bro : ನಾಪತ್ತೆ ನ್ಯೂಸ್ ಬೆನ್ನಲ್ಲೇ ಡಾ ಬ್ರೋ ಅವರ ಅಪಾಯಕಾರಿ ವಿಡಿಯೋ ವೈರಲ್ !!

Related News

Advertisement
Advertisement