ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Nitin Gadkari: ಡೀಸೆಲ್ ವಾಹನ ಹೊಂದಿರೋರಿಗೆ ಸಂತಸದ ಸುದ್ದಿ- ನಿತಿನ್ ಗಡ್ಕರಿ ಹೊಸ ಘೋಷಣೆ

09:54 AM Dec 09, 2023 IST | ಅಶ್ವಿನಿ ಹೆಬ್ಬಾರ್
UpdateAt: 02:42 PM Dec 09, 2023 IST
Image source: Vistara news
Advertisement

Nitin Gadkari: ನಿತಿನ್ ಗಡ್ಕರಿ (Nitin Gadkari)ಅವರು ಭವಿಷ್ಯದಲ್ಲಿ ವಾಹನಗಳು ಪರಿಸರ ಸ್ನೇಹಿ ಇಂಧನಗಳಿಗೆ ಪರಿವರ್ತನೆಯಾಗದೆ ಇದ್ದಲ್ಲಿ ಡೀಸೆಲ್ ವಾಹನಗಳ(Vechicles)ಮೇಲೆ ಹೆಚ್ಚುವರಿ 10 ಪ್ರತಿಶತ ತೆರಿಗೆಯನ್ನು ವಿಧಿಸಲು ಹಣಕಾಸು ಸಚಿವರಿಗೆ ಮನವಿ ಮಾಡುವ ಕುರಿತು ಈ ಹಿಂದೆ ದೇಶೀಯ ಮತ್ತು ವಿದೇಶಿ ವಾಹನ ತಯಾರಕರ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಹೊಸ ತೆರಿಗೆ ಪ್ರಸ್ತಾಪದ ಕುರಿತು ಕೇಂದ್ರ ಸಚಿವರು ಮಹತ್ವದ ಮಾಹಿತಿ ನೀಡಿದ್ದಾರೆ.

Advertisement

ಸಾಂಪ್ರದಾಯಿಕ ಇಂಧನಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿ ಮಾಲಿನ್ಯ ತಡೆಗಾಗಿ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಮಾಲಿನ್ಯ ಉತ್ಪಾದನೆಯಲ್ಲಿ ದೊಡ್ಡ ಪಾಲು ಹೊಂದಿರುವ ಡೀಸೆಲ್ ವಾಹನಗಳನ್ನು ಬಳಕೆಯನ್ನು ನಿಯಂತ್ರಿಸಲು ಹೆಚ್ಚುವರಿ ತೆರಿಗೆ ಪ್ರಸ್ತಾಪ ಮಾಡಲಾಗಿತ್ತು. ಕೇಂದ್ರ ಸರ್ಕಾರದ(Central Government)ಹೊಸ ತೆರಿಗೆ ಪ್ರಸ್ತಾಪದ ಬಳಿಕ ವಾಹನ ತಯಾರಕರು ಮತ್ತು ಸಾರ್ವಜನಿಕರ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಡೀಸೆಲ್ ವಾಹನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಯಾವುದೇ ಯೋಜನೆ ಇಲ್ಲ ಎಂದು ನಿತಿನ್ ಗಡ್ಕರಿ ಅವರು ಖಾತ್ರಿ ಪಡಿಸಿದ್ದಾರೆ. ಸಂಸತ್ ಅಧಿವೇಶದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಕೇಂದ್ರ ಸಾರಿಗೆ ಇಲಾಲೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲಿಖಿತ ಉತ್ತರದ ಮೂಲಕ ಸ್ಪಷ್ಟಪಡಿಸಿದ್ದು, ಡೀಸೆಲ್ ವಾಹನಗಳ ಮೇಲೆ ಯಾವುದೇ ಹೆಚ್ಚುವರಿ ತೆರಿಗೆ ವಿಧಿಸುವ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Vartur santosh: ಮತ್ತೊಂದು ವಿವಾವದಕ್ಕೆ ಸಿಲುಕಿದ ವರ್ತೂರು ಸಂತೋಷ್ - 'ಹಳ್ಳಿಕಾರ್' ಒಡೆಯನ ಮೇಲೆ ಸಿಡಿದೆದ್ದ ರೈತರು !!

Advertisement

Related News

Advertisement
Advertisement