Visa-Free Entry: ಈ ದೇಶಕ್ಕೆ ತೆರಳಲು ಡಿಸೆಂಬರ್ ನಿಂದ ಭಾರತೀಯರಿಗೆ ವೀಸಾ ಬೇಕಿಲ್ಲಾ - ಏನಿದು ಸ್ಪೆಶಲ್ ಆಫರ್
Visa-Free Entry: ಭಾರತ ಬಿಟ್ಟು ಬೇರೆ ಯಾವುದೇ ಹೊರದೇಶಕ್ಕೆ ಪ್ರಯಾಣಿಸಬೇಕಾದರೆ ವೀಸಾ ಅತ್ಯಗತ್ಯ. ವೀಸಾ ಇಲ್ಲದೇ ಇದ್ದರೆ ಆ ದೇಶಕ್ಕೆ ಪ್ರಯಾಣಿಸುವಂತಿಲ್ಲ ಆದರೆ ಭಾರತೀಯ ನಾಗರಿಕರು ಡಿಸೆಂಬರ್ 1 ರಿಂದ ಮಲೇಷ್ಯಾದಲ್ಲಿ ವೀಸಾ ಮುಕ್ತ ಪ್ರವೇಶವನ್ನು (Visa-Free Entry) ಪಡೆಯಬಹುದಾಗಿದೆ.
ಹೌದು, ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ನೇತೃತ್ವದ ಮಲೇಷ್ಯಾ (Malaysia) ಸರ್ಕಾರವು ಚೀನಾ (China) ಮತ್ತು ಭಾರತೀಯ (Indians) ನಾಗರಿಕರಿಗೆ ಪ್ರವೇಶ ವೀಸಾಗಳಿಗೆ ಸಂಬಂಧಿಸಿದಂತೆ ಮಹತ್ವದ ನೀತಿ ಬದಲಾವಣೆಯನ್ನು ಘೋಷಿಸಿದೆ. ಮಲೇಷ್ಯಾ ಸರ್ಕಾರ ಡಿಸೆಂಬರ್ 1ರಿಂದ 30 ದಿನಗಳವರೆಗೆ ವಾಸ್ತವ್ಯ ಹೂಡಲು ಚೀನಾ ಮತ್ತು ಭಾರತದ ನಾಗರಿಕರಿಗೆ ವೀಸಾಮುಕ್ತ ಪ್ರವೇಶವನ್ನು ಘೋಷಿಸಿದೆ.
ಇದನ್ನು ಓದಿ: Winter Dry skin: ಚಳಿಗಾಲದ ಶುಷ್ಕತೆಗೆ ದೇಹದಲ್ಲಿ ತುರಿಕೆ ತೊಂದರೆಯೇ? ಈ ಪರಿಹಾರ ಪ್ರಯತ್ನಿಸಿ!
ಈ ಮಾಹಿತಿಯ ಪ್ರಕಾರ, ಭಾರತ ಮತ್ತು ಚೀನಾದ ನಾಗರಿಕರು ಮಲೇಷ್ಯಾದಲ್ಲಿ 30 ದಿನಗಳವರೆಗೆ ವೀಸಾ ಮುಕ್ತವಾಗಿರಬಹುದು. ಈ ಹಿಂದೆ ಶ್ರೀಲಂಕಾ ಮತ್ತು ಥೈಲ್ಯಾಂಡ್ ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣವನ್ನು ಅನುಮತಿಸಿತ್ತು ಆದರೆ ಇದೀಗ ಅದರ ಸಾಲಿಗೆ ಮಲೇಷ್ಯಾ ಸೇರಿಕೊಂಡಿದ್ದು ಇದರೊಂದಿಗೆ ಭಾರತೀಯ ನಾಗರಿಕರಿಗೆ ವೀಸಾ-ಮುಕ್ತ ಪ್ರಯಾಣವನ್ನು ಕಲ್ಪಿಸಿದ ಮೂರನೇ ದೇಶವಾಗಿದೆ.
ಇದನ್ನೂ ಓದಿ: Police Constable: 454 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ಭರ್ತಿ- ಲಿಖಿತ ಪರೀಕ್ಷೆ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್ !!