ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Kerala: ಕೇರಳದ ಬೀಚ್‌ನಲ್ಲಿದ್ದ ಯುವ ಜೋಡಿಗಳನ್ನು ಪೊರಕೆ ಹಿಡಿದು ಓಡಿಸಿದ ಬಿಜೆಪಿ ಕಾರ್ಯಕರ್ತರು

04:15 PM Feb 10, 2024 IST | ಹೊಸ ಕನ್ನಡ
UpdateAt: 04:16 PM Feb 10, 2024 IST
Advertisement

Kerala Beach: ಫೆ.8 ರಂದು ಕೇರಳದ ಕೋಝಿಕೋಡ್‌ನ ವೆಸ್ಟ್‌ಹಿಲ್‌ನಲ್ಲಿ ಇರುವ ಕೊನ್ನಾಡ್‌ ಕಡಲ ಕಿನಾರೆಗೆ ಬಿಜೆಪಿ ನೇತೃತ್ವದ 30 ಮಹಿಳೆಯರ ಗುಂಪೊಂದು ಪೊರಕೆ ಹಿಡಿದು ಅಲ್ಲಿ ಕುಳಿತಿದ್ದ ಯುವ ಜೋಡಿಗಳನ್ನು ಓಡಿಸಿರುವ ಘಟನೆಯೊಂದು ನಡೆದಿದೆ. ಅನೈತಿಕ ಚಟುವಟಿಕೆಗಳ ವಿರುದ್ಧ ವೆಸ್ಟ್‌ ಹಿಲ್‌ ಬಿಜೆಪಿ ಪ್ರದೇಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಸಂತೋಷ್‌ ಅವರು ನೇತೃತ್ವದಲ್ಲಿ ಈ ಘಟನೆ ನಡೆದಿದೆ.

Advertisement

ಇದು ನೈತಿಕ ಪೊಲೀಸ್‌ ಗಿರಿ ಎಂದು ಮಾಧ್ಯಮಗಳು ಹೇಳಿದೆ. ನಾವು ಪ್ರೀತಿಸುವವರ ವಿರುದ್ಧ ಇಲ್ಲ. ಆದರೆ ಅವರು ಬೀಚಿಗೆಲ್ಲ ಬಂದಾಗ ಸಭ್ಯತೆಯಿಂದ ಕುಳಿತುಕೊಳ್ಳಬೇಕು. ಇತ್ತೀಚಿನ ಯುವ ಪೀಳಿಗೆ ಬೀಚ್‌ನಲ್ಲಿ ವರ್ತಿಸುವ ವರ್ತನೆ ಕಂಡು ಅಕ್ಕಪಕ್ಕದ ಸಣ್ಣ ಮಕ್ಕಳು ಇದನ್ನೇ ನೋಡಿ ಕಲಿಯುತ್ತಾರೆ. ಅನೇಕ ಮಕ್ಕಳು ಬೀಚ್‌ ಪ್ರದೇಶದಲ್ಲಿ ಆಟವಾಡುತ್ತಾರೆ. ನಂತರ ಮನೆಗೆ ಹೋಗಿ ಬೀಚ್‌ನಲ್ಲಿ ನೋಡಿದ್ದನ್ನು ತಮ್ಮ ಪೋಷಕರಿಗೆ ತಿಳಿಸುತ್ತಾರೆ. ಅದಕ್ಕೆ ಆ ಭಾಗದ ತಾಯಂದಿರೇ ಪೊರಕೆ ಹಿಡಿದು ಬೀಚ್‌ಗೆ ಬಂದು ಪ್ರತಿಭಟನೆ ನಡೆಸಿದ್ದಾರೆ ಎಂದು ಮಾಲಿನಿ ಹೇಳಿದ್ದಾರೆ.

ಡ್ರಗ್ಸ್‌ ಬಳಸಲು, ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬೀಚ್‌ಗೆ ಬರುತ್ತಾರೆ. ಇಂತಹ ಚಟುವಟಿಕೆಗಳನ್ನು ತಡೆಯಲು ಪೊಲೀಸರು ಏನೂ ಮಾಡುತ್ತಿಲ್ಲ ಎಂದು ಮಹಿಳೆಯರು ಮಾಧ್ಯಮಗಳಿಗೆ ಹೇಳಿದ್ದಾರೆ.

Advertisement

Related News

Advertisement
Advertisement