ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Voter ID ಯನ್ನು ಆನ್ಲೈನ್ ಅಲ್ಲೇ ಹೀಗೆ ಸುಲಭವಾಗಿ ಪಡೆಯಿರಿ !!

12:46 PM Dec 05, 2023 IST | ಅಶ್ವಿನಿ ಹೆಬ್ಬಾರ್
UpdateAt: 02:21 PM Dec 05, 2023 IST
Advertisement

Voter ID: ಭಾರತದ ಸಂವಿಧಾನದ ಅಡಿಯಲ್ಲಿ, 18 ವರ್ಷ ವಯಸ್ಸಿನ ಪ್ರತಿಯೊಬ್ಬ ವ್ಯಕ್ತಿಯು ಚುನಾವಣೆಯಲ್ಲಿ(Elections)ಮತ ಚಲಾಯಿಸಲು ಅರ್ಹರಾಗಿದ್ದು, ಆದರೆ, ಇದಕ್ಕಾಗಿ ಮತದಾರರ ಗುರುತಿನ ಚೀಟಿಯನ್ನು (Voter ID)ಹೊಂದಿರುವುದು ಕಡ್ಡಾಯವಾಗಿದೆ. ಆದ್ರೆ, ಇದಕ್ಕಾಗಿ ಸರಕಾರಿ ಕಚೇರಿಗಳಿಗೆ ಅಡ್ಡಾಡುವ ಅವಶ್ಯಕತೆ ಇಲ್ಲ. ಬದಲಿಗೆ, ಆನ್ಲೈನ್ ನಲ್ಲಿ(online )ಅರ್ಜಿ ಸಲ್ಲಿಸಿ ಪೋಸ್ಟ್ ಮೂಲಕ ಹೊಸ ವೋಟರ್ ಐಡಿ ಮನೆ ಬಾಗಿಲಿಗೆ ಬರುವಂತೆ ಮಾಡಬಹುದಾಗಿದೆ.

Advertisement

ಭಾರತದ ಚುನಾವಣಾ ಆಯೋಗವು ಹೊಸ ಸೌಲಭ್ಯವನ್ನು ಒದಗಿಸಿದೆ. ಮೊದಲಿಗೆ, https://voters.eci.gov.in/ ವೆಬ್ ಸೈಟ್ ಗೆ ಭೇಟಿ ನೀಡಿ. ಮುಖಪುಟದಲ್ಲಿ ರಿಜಿಸ್ಟ್ರೇಷನ್ (registration for new voter ID) ಮಾಡಲು ಆಯ್ಕೆ ಸಿಗಲಿದೆ. ಅದನ್ನು ಕ್ಲಿಕ್ ಮಾಡಿಕೊಂಡು ಫಾರಂ ಭರ್ತಿ ಮಾಡಿ. ಇದಾದ ಬಳಿಕ ವೋಟರ್ ಐಡಿ ನಿಮ್ಮ ಮನೆ ಬಾಗಿಲಿಗೆ ಪೋಸ್ಟ್ ಮೂಲಕ ಸಿಗಲಿದೆ. ನಿಮ್ಮ ಬಳಿ ಇರುವ ವೋಟರ್ ಐಡಿ ತಿದ್ದುಪಡಿ ಮಾಡಲು ಅನುವು ಮಾಡಿಕೊಡಲಾಗಿದೆ. ನಿಮ್ಮ ಆಧಾ‌ರ್ ಸಂಖ್ಯೆ ಹಾಗೂ ಇತರ ಮಾಹಿತಿಗಳನ್ನು ನೀಡುವುದರ ಮೂಲಕ ಹೊಸ ವೋಟರ್ ಐಡಿ ಪಡೆದುಕೊಳ್ಳಬಹುದು.

ಆನ್ಸೆನ್ ನಲ್ಲಿ ಇ-ವೋಟರ್ ಐಡಿ ಪಡೆಯುವುದು ಹೇಗೆ?
* ಮೊದಲಿಗೆ ,https://voters.eci.gov.in/ ಪೋರ್ಟಲ್ ಗೆ ಎನ್ ವಿಎಸ್ ಪಿ ಗೆ ಲಾಗ್ ಇನ್ ಮಾಡಿಕೊಳ್ಳಿ.
* ಇದಾದ ಬಳಿಕ, ಮುಖಪುಟದಲ್ಲಿ 'ಇ-ಎಪಿಕ್ ಡೌನ್ಲೋಡ್' ಆಯ್ಕೆಯನ್ನು ಆರಿಸಿಕೊಳ್ಳಿ.
* ಇದಾದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ಇಲ್ಲವೇ ಇ-ಮೇಲ್ ಐಡಿ ಅಥವಾ ಎಪಿಕ್ ಸಂಖ್ಯೆಯನ್ನು ನಮೂದಿಸಿ ಕ್ಲಿಕ್ ಮಾಡಿ.
* ಇದರ ನಂತರ, 'ರಿಕ್ವೆಸ್ಟ್ ಒಟಿಪಿ' ಕ್ಲಿಕ್ ಮಾಡಿದಾಗ ನಿಮ್ಮ ಫೋನ್ ಗೆ ಒಟಿಪಿ ಬರಲಿದೆ.
* ಈ ಒಟಿಪಿಯನ್ನು ಗೊತ್ತುಪಡಿಸಿದ ಪೆಟ್ಟಿಗೆಯಲ್ಲಿ ನಮೂದಿಸಬೇಕು.

Advertisement

ಇ-ಮತದಾರರ ಗುರುತಿನ ಚೀಟಿಯನ್ನು (ಇ-ಎಪಿಕ್) ಮೊಬೈಲ್ ಅಥವಾ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಸಹಾಯದಿಂದ ಆನ್ನೈನ್ನಲ್ಲಿ ಸುಲಭವಾಗಿ ಡೌನ್ ಲೋಡ್ ಮಾಡಬಹುದು. ಈ ಹೊಸ ವ್ಯವಸ್ಥೆಯಡಿ, ಮೊಬೈಲ್ ಸಂಖ್ಯೆಯ ನೋಂದಣಿಯೊಂದಿಗೆ ಕೆಲವೇ ಸೆಕೆಂಡುಗಳಲ್ಲಿ ಇ-ಮತದಾರರ ಗುರುತಿನ ಚೀಟಿಯನ್ನು ಪಡೆಯಬಹುದು. ಡಿಜಿಟಲ್ ಮತದಾರರ ಗುರುತಿನ ಚೀಟಿ ಡೌನ್ ಲೋಡ್ ಮಾಡಲು 'ಇ-ಎಪಿಕ್ ಡೌನ್ ಲೋಡ್' ಆಯ್ಕೆಯನ್ನು ಕ್ಲಿಕ್ ಮಾಡಿ. ನೀವು ಮನೆಯಲ್ಲಿ ಕುಳಿತು ಪಿಡಿಎಫ್ ರೂಪದಲ್ಲಿ ಮತದಾರರ ಐಡಿಯನ್ನು ಸುಲಭವಾಗಿ ಪಡೆಯಲು ಅವಕಾಶವಿದೆ..ಭೌತಿಕ ಕಾರ್ಡ್ ಬಯಸುವವರು ಹತ್ತಿರದ ಮೀ-ಸೇವಾ ಅಥವಾ ಇಂಟರ್ನೆಟ್ ಕೇಂದ್ರಕ್ಕೆ ಭೇಟಿ ನೀಡಿ ವೋಟರ್ ಐಡಿಯನ್ನು ಭೌತಿಕವಾಗಿ ಪಡೆಯಬಹುದು

ಇದನ್ನೂ ಓದಿ: Vastu Tips For Prosperity: ಮನೆಯಲ್ಲಿರೋ ಈ ವಸ್ತುಗಳನ್ನು ಈಗಲೇ ತೆಗೆದುಹಾಕಿ- ಇಲ್ಲವಾದರೆ ವಾಸ್ತು ದೋಷ ಎದುರಿಸಬೇಕಾದೀತು ಹುಷಾರ್!!

Related News

Advertisement
Advertisement