ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Soumya Vishwanathan: ಪತ್ರಕರ್ತೆ ಸೌಮ್ಯಾ ವಿಶ್ವನಾಥ್ ಕೊಂದವರಿಗೆ ಜೀವಾವಧಿ ಶಿಕ್ಷೆ- ಕೆಲವೇ ಸಮಯದಲ್ಲಿ ಕೊನೆಯುಸಿರೆಳೆದ ತಂದೆ !! ಇದಕ್ಕಾಗೇ ಇಲ್ಲಿವರೆಗೂ ಇತ್ತಾ ಜೀವ ?

12:55 PM Dec 10, 2023 IST | ಕಾವ್ಯ ವಾಣಿ
UpdateAt: 12:55 PM Dec 10, 2023 IST
Advertisement

Soumya Vishwanathan: ಖ್ಯಾತ
ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ (Soumya Vishwanathan) ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೆಲವೇ ದಿನಗಳಲ್ಲಿ ಅವರ ತಂದೆ ಎಂ.ಕೆ.ವಿಶ್ವನಾಥನ್ (82) ಶನಿವಾರ ನಿಧನ ಹೊಂದಿದ್ದಾರೆ. ಹೌದು, ಹೆಡ್‌ಲೈನ್ಸ್ ಟುಡೆಯ 25 ವರ್ಷದ ಪತ್ರಕರ್ತೆ ಸೌಮ್ಯಾ ಅವರು 2008ರ ಸೆಪ್ಟೆಂಬರ್ 30 ರಂದು ದೆಹಲಿಯ ವಸಂತ ವಿಹಾರ್‌ನಲ್ಲಿ ಕೆಲಸದಿಂದ ಹಿಂತಿರುಗುತ್ತಿದ್ದಾಗ ಹತ್ಯೆಗೀಡಾಗಿದ್ದರು. ಕಾರಿನಲ್ಲಿ ಆಕೆಯ ಶವ ಪತ್ತೆಯಾಗಿತ್ತು ಮತ್ತು ತಲೆಗೆ ತೀವ್ರ ಗಾಯವಾಗಿತ್ತು. ಈ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಈಗ ಕೊಲೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆಯಾಗಿದೆ.

Advertisement

ಸೌಮ್ಯ ಹಂತಕರಿಗೆ ನವೆಂಬರ್ 25ರಂದು ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ಸೌಮ್ಯ ಅವರ 82 ವರ್ಷದ ತಂದೆ ಹೃದಯಾಘಾತಕ್ಕೆ ಒಳಗಾದ ಕಾರಣ ತೀರ್ಪು ಪ್ರಕಟಗೊಳ್ಳುವ ಎರಡು ದಿನಗಳ ಮೊದಲು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರು ನಿಧನ ಹೊಂದಿದ್ದಾರೆ.

ಐವರು ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಅವಧಿಯ ಕೋರ್ಟ್​ ಕಲಾಪಗಳನ್ನು ವೀಕ್ಷಿಸಲು ಎಂ.ಕೆ.ವಿಶ್ವನಾಥನ್ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಿಂದ (ಐಸಿಯು) ಅವಕಾಶ ಮಾಡಿಕೊಡಲಾಗಿತ್ತು. ಅವರ ಕುಟುಂಬ ಸದಸ್ಯರೊಬ್ಬರು ಆಸ್ಪತ್ರೆಯಿಂದ ಲೈವ್ ತೋರಿಸಿದ್ದರು. ಮಗಳನ್ನು ಕೊಂದವರಿಗೆ ಶಿಕ್ಷೆಯಾದ ತಕ್ಷಣ ಅವರಿಗೆ ಸಮಾಧಾನವಾಗಿತ್ತು.

Advertisement

2008ರಲ್ಲಿ 26 ವರ್ಷದ ಸೌಮ್ಯ ವಿಶ್ವನಾಥನ್ ಕೊಲೆಯಾದ ಬಳಿಕ ಆಕೆಯ ಪೋಷಕರಾದ ಎಂ.ಕೆ.ವಿಶ್ವನಾಥನ್ ಮತ್ತು ಮಾಧವಿ ವಿಶ್ವನಾಥನ್ ತಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡಲು ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು. 14 ವರ್ಷಗಳ ವಿಚಾರಣೆಯುದ್ದಕ್ಕೂ, ಪೋಷಕರು ಇಬ್ಬರೂ ನ್ಯಾಯಾಲಯಗಳಿಗೆ ಅಲೆದಾಡಿದ್ದರು. ಪ್ರತಿ ವಿಚಾರಣೆಗೆ ಹಾಜರಾಗುತ್ತಿದ್ದರು ಮತ್ತು ವಿಚಾರಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.

ಆರೋಗ್ಯ ಸಮಸ್ಯೆಗಳು ಉದ್ಭವಿಸಿದರೂ, ವಿಶ್ವನಾಥನ್ ಕೈಯಲ್ಲಿ ವಾಕಿಂಗ್ ಸ್ಟಿಕ್ ಹಿಡಿದು ನ್ಯಾಯಾಲಯಕ್ಕೆ ಹೋಗುತ್ತಿದ್ದರು. ತಮ್ಮ ಮಗಳಿಗೆ ನ್ಯಾಯ ಸಿಗಲಿ ಎಂದು ಆಶಿಸಿದರು. ಐವರು ಆರೋಪಿಗಳಿಗೆ ಶಿಕ್ಷೆಯಾದ ದಿನ, ನಿರಾಳರಾಗಿ ಕಂಡಿದ್ದ ಎಂ.ಕೆ.ವಿಶ್ವನಾಥನ್ ಅವರು ಈ ವಿಷಯವು “ತಾರ್ಕಿಕ ಅಂತ್ಯಕ್ಕೆ ಬರಬೇಕು” ಎಂದು ಹೇಳಿಕೆ ಕೊಟ್ಟಿದ್ದರು.

ಪೊಲೀಸರು ಪ್ರಕರಣವನ್ನು ಭೇದಿಸಿದ್ದು ರೋಚಕವಾಗಿದ್ದು,
ಒಂದು ಟ್ಯಾಟೂ ಇಡೀ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. “ಐಟಿ ಉದ್ಯೋಗಿ ಜಿಗಿಶಾ ಜೋಶ್‌ ಅವರನ್ನು 2009ರಲ್ಲಿ ಕೊಲೆ ಮಾಡಿದ್ದು, ಇವರ ಕೊಲೆ ಪ್ರಕರಣದ ತನಿಖೆ ನಡೆಸುವಾಗ ನಮಗೆ ಸೌಮ್ಯಾ ವಿಶ್ವನಾಥನ್‌ ಅವರ ಕೊಲೆ ಪ್ರಕರಣವನ್ನೂ ಭೇದಿಸಲು ಸಾಧ್ಯವಾಯಿತು. ಜಿಗಿಶಾ ಅವರ ಶವವು ಫರೀದಾಬಾದ್‌ನ ಸೂರಜ್‌ ಕುಂಡ್‌ ಪ್ರದೇಶದಲ್ಲಿ ಸಿಕ್ಕ ಮೂರು ದಿನಗಳ ಬಳಿಕ ಪ್ರಕರಣವನ್ನು ಭೇದಿಸಲಾಯಿತು. ಸಿಸಿಟಿವಿ ದೃಶ್ಯ ಒಂದು ಸಿಕ್ಕಿದ್ದು, ಅದರಲ್ಲಿ ಒಬ್ಬ ಆರೋಪಿಯು ತನ್ನ ಕೈ ಮೇಲೆ ತನ್ನ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದು, ಮತ್ತೊಬ್ಬನು ಪೊಲೀಸರಿಂದ ಕದ್ದ ವೈರ್‌ಲೆಸ್‌ ಸೆಟ್‌ ಹಿಡಿದುಕೊಂಡಿದ್ದ. ಒಬ್ಬ ಆರೋಪಿಯು ಟ್ಯಾಟೂ ಹಾಕಿಸಿಕೊಂಡು, ಜಿಗಿಶಾ ಡೆಬಿಟ್‌ ಕಾರ್ಡ್‌ ಬಳಸುತ್ತಿದ್ದ ದೃಶ್ಯದ ಆಧಾರದ ಮೇಲೆ ತನಿಖೆ ನಡೆಸಿದಾಗ ಸೌಮ್ಯಾ ವಿಶ್ವನಾಥನ್‌ ಕೊಲೆಯನ್ನೂ ಇವರೇ ಮಾಡಿದ್ದು ಎಂಬುದು ಗೊತ್ತಾಯಿತು” ಎಂದು ತನಿಖಾಧಿಕಾರಿ ಅತುಲ್‌ ಕುಮಾರ್‌ ವರ್ಮಾ ತಿಳಿಸಿದ್ದಾರೆ.

ಬಲ್ಜಿತ್ ಮಲ್ಲಿಕ್ ತನ್ನ ಹೆಸರನ್ನು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ. ಕೂಡಲೇ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸೌಮ್ಯಾ ವಿಶ್ವನಾಥನ್‌ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ. ಇದಾದ ಬಳಿಕ ಮತ್ತೊಂದು ಪೊಲೀಸ್‌ ತಂಡವನ್ನು ತನಿಖೆಗೆ ರಚಿಸಲಾಯಿತು. ಐವರೂ ದೋಷಿಗಳು ಸೌಮ್ಯಾ ವಿಶ್ವನಾಥನ್‌ ಅವರ ಕಾರನ್ನು ಹಿಂಬಾಲಿಸಿ, ಕೊಲೆ ಮಾಡಿದ್ದರು. ಈ ಕುರಿತು ಫೊರೆನ್ಸಿಕ್‌ ಸಾಕ್ಷ್ಯಗಳನ್ನು ಪತ್ತೆಹಚ್ಚುವುದು ನಮಗೆ ನಿಜವಾಗಿಯೂ ಸವಾಲಾಯಿತು. ಆದರೂ ಪ್ರಕರಣವನ್ನು ಭೇದಿಸಿದೆವು” ಎಂದಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಮದುವೆಯ 'ಅರಿಶಿನ' ಸಂಭ್ರಮ - ಗೋಡೆ ಕುಸಿದು 8 ಮಂದಿ ಸ್ಥಳದಲ್ಲೇ ಧುರ್ಮರಣ

Related News

Advertisement
Advertisement