For the best experience, open
https://m.hosakannada.com
on your mobile browser.
Advertisement

Rajya sabha: ಮುಸ್ಲಿಂಮರಿಗೆ ಬಿಗ್ ಶಾಕ್- ಈ ಸವಲತ್ತನ್ನು ರದ್ದುಗೊಳಿಸಿದ ಉಪರಾಷ್ಟ್ರಪತಿ !!

01:10 PM Dec 11, 2023 IST | ಹೊಸ ಕನ್ನಡ
UpdateAt: 01:10 PM Dec 11, 2023 IST
rajya sabha  ಮುಸ್ಲಿಂಮರಿಗೆ ಬಿಗ್ ಶಾಕ್  ಈ ಸವಲತ್ತನ್ನು ರದ್ದುಗೊಳಿಸಿದ ಉಪರಾಷ್ಟ್ರಪತಿ
Advertisement

Rajya sabya: ರಾಜ್ಯಸಭೆಯಲ್ಲಿ ಮುಸ್ಲಿಂ ಸದಸ್ಯರಿಗೆ ಶುಕ್ರವಾರದಂದು ನಮಾಜ್ ಮಾಡಲು ನೀಡಲಾಗುತ್ತಿದ್ದ ವಿಶೇಷ 30 ನಿಮಿಷದ ಬ್ರೇಕ್ ಅನ್ನು ಸಭಾಧ್ಯಕ್ಷರಾದ ಉಪ ರಾಷ್ಟ್ರಪತಿ ಜಗಧೀಪ್ ಧನ್‌ಕರ್‌(Jagadeep Dhankar) ಅವರು ರದ್ಧುಪಡಿಸಿದ್ದಾರೆ.

Advertisement

ಹೌದು, ಸಾಮಾನ್ಯವಾಗಿ ಶುಕ್ರವಾರ ರಾಜ್ಯಸಭೆಯಲ್ಲಿ(Rajya Sabha) ಕಲಾಪ 2.30ಕ್ಕೆ ಆರಂಭವಾಗುತ್ತಿತ್ತು. ಯಾಕೆಂದರೆ ಮುಸ್ಲಿಂ ರಾಜ್ಯಸಭಾ ಸದಸ್ಯರು ನಮಾಜ್ ಮಾಡಲು ಅನುವು ಮಾಡಿಕೊಡಲು ಶುಕ್ರವಾರದಂದು 30 ನಿಮಿಷಗಳ ಹೆಚ್ಚುವರಿ ಭೋಜನ ವಿರಾಮವನ್ನು ನೀಡಲಾಗುತ್ತದೆ. ಇದರಿಂದಾಗಿ ವಾರದಲ್ಲಿ ಒಂದು ದಿನ ಸದನದ ಸಮಯ ವ್ಯತ್ಯಯವಾಗುತ್ತಿತ್ತು. ಹೀಗಾಗಿ ಈ ವಿಚಾರವನ್ನು ಡಿಎಂಕೆ(DMK) ಸಂಸದ ಶುಕ್ರವಾರದ ರಾಜ್ಯಸಭೆಯ ಶೂನ್ಯವೇಳೆಯ ವೇಳೆ ಪ್ರಶ್ನೆ ಮಾಡಿದ್ದರು.

ಈ ಬಗ್ಗೆ ಬಂದ ಪ್ರಶ್ನೆಗೆ ಇದಕ್ಕೆ ಉತ್ತರ ನೀಡಿದ ಧನ್‌ಕರ್,‌ ಇದು ಈ ಶುಕ್ರವಾರ ಪ್ರಾರಂಭವಾಗಿಲ್ಲ, ಮತ್ತು ಇದು ಕೆಲವು ಸಮಯದಿಂದ ಆಚರಣೆಯಲ್ಲಿದೆ. "ಗೌರವಾನ್ವಿತ. ಸದಸ್ಯರೇ, ಇಂದಿನಿಂದ ಇದನ್ನು ಮಾಡುತ್ತಿಲ್ಲ. ಇದನ್ನು ನಾನು ಮೊದಲೇ ಮಾಡಿದ್ದೇನೆ ಮತ್ತು ಕಾರಣವನ್ನು ನೀಡಲಾಗಿದೆ, "ಎಂದು ಅವರು ಹೇಳಿದರು. ಇದಕ್ಕೆ ಕೆಲವು ಸಂಸದರು ಆಕ್ಷೇಪ ವ್ಯಕ್ತಪಡಿಸಿದಾಗ ಈ ಸಮಯ ಬದಲಾವಣೆಯನ್ನು ಕಳೆದ ಅಧಿವೇಶನದಲ್ಲಿ ಜಾರಿಗೆ ತರಲಾಗಿದ್ದು, ಈಗಾಗಲೇ ಸದಸ್ಯರಿಗೆ ವಿವರಿಸಲಾಗಿದೆ ಎಂದು ಸಭಾಪತಿ ಪುನರುಚ್ಚರಿಸಿದ ನಂತರ, ಸದಸ್ಯರಿಂದ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.

Advertisement

ಇದನ್ನೂ ಓದಿ : Dr Bro: ಖ್ಯಾತ ಯೂಟ್ಯೂಬರ್ ಡಾ. ಬ್ರೋ ನಾಪತ್ತೆ ?

Advertisement
Advertisement
Advertisement