Indian Railway: ರೈಲ್ವೆ ಪ್ರಯಾಣಿಕರಿಗೆ ಬಂತು ಹೊಸ ರೂಲ್ಸ್ - ಇನ್ಮುಂದೆ ವೈಟಿಂಗ್ ಟಿಕೆಟ್ ಮೂಲಕ ಟ್ರಾವೆಲಿಂಗ್ ಸಾಧ್ಯವಿಲ್ಲ
Indian Railway: ರೈಲಿನಲ್ಲಿ ವೈಟಿಂಗ್ ಟಿಕೆಟ್ ಹೊಂದಿರುವವರು ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುತ್ತಾರೆ ಎಂಬ ದೂರುಗಳು ಪದೇ ಪದೇ ಬರುತ್ತಿವೆ. ಇದರಿಂದಾಗಿ ಇತರ ಪ್ರಯಾಣಿಕರು ತೊಂದರೆ ಅನುಭವಿಸುತ್ತಾರೆ. ಕೆಲ ಪ್ರಕರಣಗಳಲ್ಲಿ ದೂರು ನೀಡಿದರೂ ತಕ್ಷಣ ಪರಿಹಾರ ಸಿಗುತ್ತಿಲ್ಲ ಎಂದು ರೈಲ್ವೇ ಮಂಡಳಿ ಮನಗಂಡು ಇದಕ್ಕಾಗಿ ಹೊಸ ಚಿಂತನೆ ನಡೆಸಿದ್ದಾರೆ.
ಸಾಮಾನ್ಯವಾಗಿ, ರೈಲು (Indian Railway) ಪ್ರಯಾಣದಲ್ಲಿ ಹೆಚ್ಚಿನ ಸಮಯದಲ್ಲಿ ಕಾಡುವ ಸಮಸ್ಯೆಯೆಂದರೆ ರಿಸರ್ವ್ ಬೋಗಿಯಲ್ಲಿ ವೈಟಿಂಗ್ ಲಿಸ್ಟ್ ಪ್ರಯಾಣಿಕರು ಬಂದು ಸೇರಿಕೊಳ್ಳುವುದು. ಹೌದು, ಇ-ಟಿಕೆಟ್ ವೈಟಿಂಗ್ ಲಿಸ್ಟ್ ನಲ್ಲಿದ್ದರೆ ಅದು ಆಟೋಮ್ಯಾಟಿಕ್ ಆಗಿ ರದ್ದಾಗುತ್ತದೆ. ಆದರೆ, ಕೌಂಟರ್‌ನಿಂದ ಟಿಕೆಟ್ ಮಾಡಿಸಿದರೆ ಅದು ರದ್ದಾಗುವುದಿಲ್ಲ. ಈ ಕಾರಣದಿಂದಲೇ ವೈಟಿಂಗ್ ಲಿಸ್ಟ್ ಟಿಕೆಟ್ ಹಿಡಿದು ಕೊಂಡು ಜನರು ರಿಸರ್ವ್ ಡ್ ಬೋಗಿಯಲ್ಲಿ ಪ್ರಯಾಣಿಸಲು ಆರಂಭಿಸುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಮಾಡುವುದು ಸಾಧ್ಯವಾಗುವುದಿಲ್ಲ.
ಹೌದು, ರಿಸರ್ವ್ದ್ ಬೋಗಿಯಲ್ಲಿ ವೈಟಿಂಗ್ ಟಿಕೆಟ್ ಹಿಡಿದುಕೊಂಡು ಯಾರಾದರೂ ಪ್ರಯಾಣಿಸುತ್ತಿದ್ದರೆ, ಆ ಪ್ರಯಾಣಿಕರ ಬಗ್ಗೆ ಇದೀಗ ದೂರು ಸಲ್ಲಿಸಬಹುದಾಗಿದೆ. ಇದಕ್ಕಾಗಿ ಹೊಸ ಆಪ್ಲಿಕೆಶನ್ ತಯಾರಾಗುತ್ತಿದೆ. ಪ್ರಸ್ತುತ, ಈ ಅಪ್ಲಿಕೇಶನ್‌ನಲ್ಲಿ ಟೆಸ್ಟಿಂಗ್ ನಡೆಯುತ್ತಿದೆ. ಯಶಸ್ವಿ ಪ್ರಯೋಗದ ನಂತರ, ಪ್ರಯಾಣಿಕರು ಅದನ್ನು Google ಮತ್ತು Apple Play ಅಪ್ಲಿಕೇಶನ್ ಮೂಲಕ ಇಲ್ಲಿ ದೂರನ್ನು ದಾಖಲಿಸಬಹುದು.
ಈಗ ಈ ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತದೆ ಅಂದರೆ:
ರೈಲು ನಿಲ್ದಾಣದಿಂದ ನಿರ್ಗಮಿಸಿದ ನಂತರ, ಟಿಟಿಇ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಆಸನಗಳ ಡೇಟಾವನ್ನು ಹ್ಯಾಂಡ್ ಹೆಲ್ಡ್ ಡಿವೈಸ್ ಮೂಲಕ ಫೀಡ್ ಮಾಡುತ್ತಾರೆ.
ಪ್ರಯಾಣಿಕರು ಆ್ಯಪ್‌ನಲ್ಲಿ ರೈಲು ಸಂಖ್ಯೆ ಮತ್ತು ಕೋಚ್ ಅನ್ನು ಫೀಡ್ ಮಾಡುತ್ತಾರೆ. ಇದರ ನಂತರ, ಬೋಗಿಯ ಸೀಟ್ ಬರ್ತ್ ರಿಸರ್ವೇಶನ್ ಲೇಔಟ್ ಕಾಣಿಸುತ್ತದೆ.
ಬೋಗಿಯಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಕಾಣಿಸಿಕೊಂಡರೆ, ಪ್ರಯಾಣಿಕರು ಆ್ಯಪ್ ಮೂಲಕ ದೂರು ನೀಡಲು ಸಾಧ್ಯವಾಗುತ್ತದೆ.
ಆಪ್ ನಲ್ಲಿ ದೂರು ದಾಖಲಾದ ತಕ್ಷಣ ಸಂಪೂರ್ಣ ಮಾಹಿತಿಯು ಸ್ವಯಂಚಾಲಿತವಾಗಿ ಸೆಂಟ್ರಲೈಸ್ಡ್ ಸಿಸ್ಟಮ್ ಗೆ ಹೋಗುತ್ತದೆ. ಇಲ್ಲಿಂದ TTEಗೆ ಅಲರ್ಟ್ ಬರುತ್ತದೆ.
ದೂರನ್ನು ಸ್ವೀಕರಿಸಿದ ನಂತರ, ಟಿಟಿಇ ಟಿಕೆಟ್ ಇಲ್ಲದೆ ಪ್ರಯಾಣಿಸುವವರನ್ನು ಸಂಬಂಧಪಟ್ಟ ಕೋಚ್‌ನಲ್ಲಿರುವ ರಿಸರ್ವ್ ಕೋಚ್‌ನಿಂದ ಹೊರಗೆ ಕಳುಹಿಸುತ್ತಾರೆ. ಯಾವುದೇ ಸಮಸ್ಯೆ ಎದುರಾದರೆ ಅವರು ಆರ್‌ಪಿಎಫ್‌ನ ಸಹಾಯ ಪಡೆಯುತ್ತಾರೆ.
ಒಂದು ವೇಳೆ, ಒಂದು PNR ನಲ್ಲಿ ವೈಟಿಂಗ್ ಮತ್ತು ಕನ್ಫರ್ಮ್ ಟಿಕೆಟ್ ಇದ್ದರೆ: ಕೆಲವು ಟಿಕೆಟ್‌ಗಳು ಕನ್ಫರ್ಮ್ ಆಗಿದ್ದು, ಇನ್ನು ಕೆಲವು ಟಿಕೆಟ್ ಗಳು ಅದೆ ಪಿಎನ್ಆರ್ ನಂಬರ್ ನಲ್ಲಿ ವೈಟಿಂಗ್ ನಲ್ಲಿದ್ದರೆ, ಅಂತಹ ಪರಿಸ್ಥಿತಿಯಲ್ಲಿ, ವೈಟಿಂಗ್ ಪ್ರಯಾಣಿಕರು ಅದೇ PNR ನ ಕನ್ಫರ್ಮ್ಡ್ ಸೀಟಿನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಪ್ರಯಾಣಿಕರು ಯಾವುದೇ ತೊಂದರೆಯಾಗದಂತೆ ಪ್ರಯಾಣಿಸುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ರೈಲ್ವೆ ತಿಳಿಸಿದೆ.
ಇದನ್ನೂ ಓದಿ: ಶಿಕ್ಷಕರ ನೇಮಕಾತಿ ವಿಚಾರ- ಬೆಳ್ಳಂಬೆಳಗ್ಗೆಯೇ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಮಧು ಬಂಗಾರಪ್ಪ