ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Oyo Booking ನಲ್ಲಿ ದಾಖಲೆ ಮಟ್ಟದಲ್ಲಿ ಒಂದೇ ದಿನಕ್ಕೆ ಸೇಲ್ ಆದ ಕಾಂಡೋಮ್ !!ಹೊಸ ವರ್ಷಕ್ಕೆ ಕಾಂಡೋಮ್ ಸೇಲ್ ಆಗಿದೆಷ್ಟು??

10:37 AM Jan 03, 2024 IST | ಅಶ್ವಿನಿ ಹೆಬ್ಬಾರ್
UpdateAt: 10:42 AM Jan 03, 2024 IST
Advertisement

Oyo Booking: ಹೊಸ ವರ್ಷದ ಸಂಭ್ರಮ (New year 2024)ಎಲ್ಲೆಡೆ ರಂಗೇರಿದ್ದು, ಹೊಸ ವರ್ಷ ಆರಂಭವಾಗಿ ಈಗಾಗಲೇ ಎರಡು ದಿನಗಳು ಕಳೆದಿವೆ. ಹೊಸ ವರ್ಷದ ಸಂಭ್ರಮಕ್ಕೆ ಕುಡಿದು ತೂರಾಡುವವರ ಸಂಖ್ಯೆ ಹೆಚ್ಚಾಗಿತ್ತು. ಅದರಲ್ಲಿಯೂ ಹೋಟೆಲ್, ಲಾಡ್ಜ್ ತುಂಬಿ ತುಳುಕುವ ದೃಶ್ಯ ಸಾಮಾನ್ಯವಾಗಿತ್ತು. ಈ ನಡುವೆ,ಬೆಂಗಳೂರಿನಲ್ಲಿ ಓಯೋ ಬುಕ್ಕಿಂಗ್ ನಲ್ಲಿ (Oyo Booking)ಕೂಡ ದಾಖಲೆ ಮಟ್ಟದಲ್ಲಿ ಸೇಲ್ ಆಗಿದೆ ಎನ್ನಲಾಗಿದೆ.

Advertisement

ಫುಡ್ ಡೆಲಿವರಿ ಕಂಪನಿ ಝೊಮೆಟೋದಲ್ಲಿಯೂ(Zomato)ಕೂಡ ಡಿಸೆಂಬರ್ 31, 2023 ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಆರ್ಡರ್‌ಗಳನ್ನು(Food Order)ಮಾಡಿದ್ದಾರೆ ಎಂದು ತಿಳಿದುಬಂದಿದೆ.ಅದೇ ರೀತಿ, ಒಯೋ ರೂಮ್‌ಗಳನ್ನು(Oyo Room Booking)ಅತೀ ಹೆಚ್ಚಾಗಿ ಬುಕ್‌ ಮಾಡಲಾಗಿದೆಯಂತೆ. ಇನ್ನು ಜೊಮ್ಯಾಟೊ ಐದು ವರ್ಷದ ದಾಖಲೆಯನ್ನು 2024ರ ಹೊಸ ವರ್ಷದ ಹಿಂದಿನ ದಿನವೇ ಮಾಡಿದೆ. ಅದರಲ್ಲಿಯೂ 3.2 ಲಕ್ಷಕ್ಕೂ ಹೆಚ್ಚು ವಿತರಣಾ ಪಾಲುದಾರರು ಆರ್ಡರ್‌ಗಳನ್ನು ಸ್ವೀಕರಿಸಿ ವಿತರಿಸಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಆರ್ಡರ್‌ಗಳನ್ನು ಮಹಾರಾಷ್ಟ್ರದಿಂದ ಮಾಡಲಾಗಿದೆ ಎಂದು ತಿಳಿದುಬಂದಿದೆ.

2023ರ ಹೊಸ ವರ್ಷದ ಮುನ್ನಾದಿನ OYO ರೂಮ್‌ಗಳ ಬುಕಿಂಗ್‌ಗಳು ಶೇಕಡಾ 37 ರಿಂದ 6.2 ಲಕ್ಷಕ್ಕೆ ಏರಿಕೆ ಕಂಡಿದೆ.ಇದರ ಜೊತೆಗೆ ಡಿಸೆಂಬರ್ 30 ಮತ್ತು 31ರ ನಡುವೆ ಕೊನೆಯ ನಿಮಿಷದಲ್ಲಿ 2.3 ಲಕ್ಷ ಬುಕ್ಕಿಂಗ್‌ಗಳು ಆಗಿ ದಾಖಲೆ ಬರೆದಿದೆ. ಅದರಲ್ಲೂ ದೇಶದ ಕೆಲವು ಯಾತ್ರಾ ಸ್ಥಳಗಳಲ್ಲಿ ಹೆಚ್ಚು ಹೋಟೆಲ್‌ ರೂಂ ಬುಕಿಂಗ್‌ (Hotel Room Booking)ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಯೋಧ್ಯೆಯಲ್ಲಿ ಬುಕಿಂಗ್‌ನಲ್ಲಿ ಶೇಕಡಾ 70ರಷ್ಟು ಏರಿಕೆ ಕಂಡಿದೆಯಂತೆ. ಗೋವಾದಲ್ಲಿ ಶೇಕಡಾ 50ರಷ್ಟು ಮತ್ತು ನೈನಿತಾಲ್‌ನಲ್ಲಿ ಶೇಕಡಾ 60ರಷ್ಟು ಹೆಚ್ಚಳವಾಗಿದೆ.ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪ್ರತಿ ಗಂಟೆಗೆ 1,722 ಯೂನಿಟ್ ಕಾಂಡೋಮ್‌ಗಳನ್ನು ಆರ್ಡರ್ ಮಾಡಲಾಗಿದೆ.

Advertisement

ಇದನ್ನು ಓದಿ: ಭಿಕ್ಷೆ ಬೇಡುವ ಅಪ್ರಾಪ್ತ ಬಾಲಕಿಯನ್ನು ಬಿಡದ ಕಾಮುಕರು: ಕಾರಿನೊಳಗೆ ಅಪಹರಿಸಿ ಗಡಿ ದಾಟಿದ ಮೇಲೆ ನಡೆದಿದ್ದೇ ರೋಚಕ!!

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಎರಡು ಲಕ್ಷ ಕಿಲೋ ಈರುಳ್ಳಿ ಮತ್ತು 1.80 ಲಕ್ಷ ಕಿಲೋ ಆಲೂಗಡ್ಡೆ ಆರ್ಡರ್ ಮಾಡಿದ್ದಾರಂತೆ. ಇದನ್ನು ಹೊರತುಪಡಿಸಿ, ಮಿಕ್ಸರ್‌ಗಳು ಮತ್ತು ಗ್ಲಾಸ್‌ಗಳು ಸೇರಿದಂತೆ ಇನ್ನಿತರ ಐಟಂಗಳ ಹುಡುಕಾಟ ಹತ್ತು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. 1.04 ಲಕ್ಷ ಜನರು ಇತರರಿಗೆ ಆಹಾರವನ್ನು ಆರ್ಡರ್ ಮಾಡಿದ್ದಾರೆ ಎನ್ನಲಾಗಿದೆ.ಅಂಕಿಅಂಶಗಳನ್ನು ಗಮನಿಸಿದರೆ, 125 ಐಟಂಗಳನ್ನು ಲಭ್ಯವಿದ್ದು, ಹೊಸ ವರ್ಷದ ಮುನ್ನಾದಿನ ಕೋಲ್ಕತ್ತಾದಲ್ಲಿ ಜನರು ಜೊಮ್ಯಾಟೊ ಒಟ್ಟು 97 ಲಕ್ಷ ರೂಪಾಯಿ ಮೊತ್ತದ ಐಟಂಗಳನ್ನು ಖರೀದಿ ಮಾಡಿದ್ದಾರಂತೆ. ಅದರಲ್ಲಿ 1.47 ಲಕ್ಷ ಚಿಪ್ಸ್ ಪ್ಯಾಕೆಟ್‌ಗಳು, 68,231 ಸೋಡಾ ಬಾಟಲಿಗಳು, 2,412 ಪ್ಯಾಕೆಟ್ ಐಸ್ ಕ್ಯೂಬ್‌ಗಳು ಮತ್ತು 356 ಲೈಟರ್‌ಗಳನ್ನು ಆರ್ಡರ್ ಮಾಡಿದ್ದಾರೆ.

Advertisement
Advertisement