For the best experience, open
https://m.hosakannada.com
on your mobile browser.
Advertisement

Mysuru Dog Astrology: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ- ಭವಿಷ್ಯ ನುಡಿದ ಕಾಲಭೈರವೇಶ್ವರನ ವಿಶೇಷ ಶ್ವಾನ

Mysuru Dog Astrology: ಮೋದಿಯವರು (Narendra Modi) ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಮೈಸೂರಿನ ಶ್ವಾನವೊಂದು ಭವಿಷ್ಯ ನುಡಿದಿದೆ.
06:42 PM Jun 02, 2024 IST | ಸುದರ್ಶನ್
UpdateAt: 06:47 PM Jun 02, 2024 IST
mysuru dog astrology  ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ  ಭವಿಷ್ಯ ನುಡಿದ ಕಾಲಭೈರವೇಶ್ವರನ ವಿಶೇಷ ಶ್ವಾನ

Mysuru Dog Astrology: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಮೈಸೂರಿನ ಶ್ವಾನವೊಂದು ಭವಿಷ್ಯ ನುಡಿದಿದೆ. ಮೈಸೂರಿನಲ್ಲಿ ಈ ವಿಶೇಷವಾದ ದೇವರ ನಾಯಿ ಮೋದಿ ಮತ್ತೊಂದು ಬಾರಿ ಪ್ರಧಾನಿಯಾಗುತ್ತಾರೆ ಎಂದಿದೆ.

Advertisement

ಇದನ್ನೂ ಓದಿ: CET Seat Allotment: ನೀಟ್ ಪರೀಕ್ಷೆಯ ನಂತರವಷ್ಟೇ ರಾಜ್ಯದಲ್ಲಿ ಇಂಜಿನಿಯರಿಂಗ್ ಸೀಟು ಹಂಚಿಕೆ, KEA ಸ್ಪಷ್ಟನೆ !

ಮೋದಿ ಹಾಗೂ ರಾಹುಲ್ ಗಾಂಧಿ (Rahul Gandhi) ಫೋಟೋವನ್ನ ಕಾಲಭೈರವೇಶ್ವರ ದೇವರ ಮುಂದೆ ದೇವಾಲಯದ ಅರ್ಚಕ ಇಟ್ಟಿದ್ದಾರೆ. ಈ ಬಾರಿ ಯಾರು ಪ್ರಧಾನಿಯಾಗುತ್ತಾರೆ ಎಂಬುದನ್ನ ನಮ್ಮ ಭೈರವ ತಿಳಿಸ್ತಾನೆ ಎಂದು ಹೇಳಿ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ನಂತರ ಅಲ್ಲಿದ್ದ ಫೋಟೊವನ್ನು ಅದಲು ಬದಲು ಮಾಡಿಟ್ಟಿದ್ದಾರೆ. ತಕ್ಷಣ ಭೈರವೇಶ್ವರ ಶ್ವಾನವು ಮೋದಿ ಫೋಟೋವನ್ನು ಹುಡುಕಿ ತೆಗೆದು ಬಾಯಿಯಿಂದ ಕಚ್ಚಿಕೊಂಡು ಬಂದಿದೆ. ಆ ಮೂಲಕ ಶ್ವಾನ ಮೋದಿ ಪ್ರಧಾನಿಯಾಗುತ್ತಾರೆ ಎಂದಿದೆ ಎಂದು ಕಾಲಭೈರವೇಶ್ವರನ ಅರ್ಚಕರು ತಿಳಿಸಿದ್ದಾರೆ. ಈ ಸಂಬಂಧಿ ಇನ್ಸ್ಟಾಗ್ರಾಮ್ ಪೋಸ್ಟ್ ಇದೀಗ ವೈರಲ್ ಆಗಿದೆ.

Advertisement

ಇದೇ ಸಂದರ್ಭದಲ್ಲಿ ಮೈಸೂರಿನ ರಾಜ ಮನೆತನದ ಯದುವೀರ್ ಫೋಟೋ ಸೆಲೆಕ್ಟ್ ಮಾಡಿರುವ ಭೈರವೇಶ್ವರ ಶ್ವಾನವು ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಗೆಲ್ಲುತ್ತಾರೆಂದು ಕೂಡ ಭವಿಷ್ಯ ಹೇಳಿದೆ. ಭೈರವೇಶ್ವರ ಶ್ವಾನ ಭವಿಷ್ಯ ನುಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ: Fridge ಖರೀದಿಸುವವರಿಗೆ ಗುಡ್ ನ್ಯೂಸ್!ಈ ಸೂಪರ್ ಆಫರ್ ಅನ್ನು ಮಿಸ್ ಮಾಡಿಕೊಳ್ಳಬೇಡಿ

Advertisement
Advertisement
Advertisement