Mangaluru: ಮಂಗಳೂರಿನ ಕಂಕನಾಡಿಯಲ್ಲಿ ನಡು ರಸ್ತೆಯಲ್ಲೇ ನಮಾಜ್; ವಿಡಿಯೋ ವೈರಲ್
Mangaluru: ಹಗಲು ವೇಳೆ ವಾಹನಗಳ ಓಡಾಟದ ಸಮಯದಲ್ಲಿ ಯುವಕರು ನಡು ರಸ್ತೆಯಲ್ಲಿ ಕುಳಿತು ನಮಾಜ್ ಮಾಡಿರುವ ಘಟನೆಯೊಂದು ಮಂಗಳೂರಿನ ಕಂಕನಾಡಿ ರಸ್ತೆಯಲ್ಲಿ ನಡೆದಿದೆ.
11:26 AM May 27, 2024 IST | ಸುದರ್ಶನ್
UpdateAt: 11:33 AM May 27, 2024 IST
Advertisement
Mangaluru: ಹಗಲು ವೇಳೆ ವಾಹನಗಳ ಓಡಾಟದ ಸಮಯದಲ್ಲಿ ಯುವಕರು ನಡು ರಸ್ತೆಯಲ್ಲಿ ಕುಳಿತು ನಮಾಜ್ ಮಾಡಿರುವ ಘಟನೆಯೊಂದು ಮಂಗಳೂರಿನ ಕಂಕನಾಡಿ ರಸ್ತೆಯಲ್ಲಿ ನಡೆದಿದೆ.
Advertisement
ಇದನ್ನೂ ಓದಿ: Ghutka Pan Masala Ban: ತೆಲಂಗಾಣದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ
ಈ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಂಕನಾಡಿ ರಸ್ತೆಗೆ ಹೊಂದಿಕೊಂಡಂತಿರುವ ಮಸೀದಿ ಮುಂಭಾಗದ ರಸ್ತೆಗೆ ಕುಳಿತು ಯುವಕರು ನಮಾಜ್ ಮಾಡುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದೆ.
Advertisement
ವಾಹನ ಸವಾರರು ರಸ್ತೆಯ ಮಧ್ಯೆಯೇ ನಮಾಜ್‌ಗೆ ಕುಳಿತಿರುವುದರಿಂದ ವಾಹನ ಸವಾರರು ಮುಂದೆ ಹೋಗದೆ, ಯೂಟರ್ನ್ ತೆಗೆದು ಕೊಂಡ ದೃಶ್ಯ ಕೂಡಾ ಸೆರೆಯಾಗಿದೆ. ಈ ಘಟನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮಾಜ್ ಮಾಡಲು ಮಸೀದಿ ಇದೆ. ಅಲ್ಲಿಗೆ ಹೋಗದೆ ನಡು ರಸ್ತೆಯಲ್ಲಿ ಕುಳಿತು ನಮಾಜ್ ಮಾಡಿದರೆ ವಾಹನ ಸಂಚರಿಸುವುದು ಹೇಗೆ ಎಂಬ ಪ್ರಶ್ನೆ ಮಾಡಿದ್ದಾರೆ. ಈ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
Advertisement