Narendra Modi: ಮೋದಿ ತಂಗಿದ್ದ ಮೈಸೂರು ಹೋಟೆಲ್ ಬಿಲ್ 80 ಲಕ್ಷ ಬಾಕಿ
Narendra Modi: ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದ ಸಂದರ್ಭದಲ್ಲಿ ವಾಸ್ತವ್ಯ ಹೂಡಿದ್ದ ಹೋಟೆಲ್‌ನ ಕೊಠಡಿಯ ಬಿಲ್ ಪಾವತಿಸದ ಅರಣ್ಯ ಇಲಾಖೆ ವಿರುದ್ಧ ಹೋಟೆಲ್ ವ್ಯವಸ್ಥಾಪಕರು ಸಿಟ್ಟುಗೊಂಡಿದ್ದಾರೆ.
ಜೂನ್ 1ರ ಒಳಗೆ 80 ಲಕ್ಷ ಬಿಲ್ ಕಟ್ಟದೇ ಹೋದರೆ ಕಾನೂನಾತ್ಮಕವಾಗಿ ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗೆ ಹೋಟೆಲ್ ವ್ಯವಸ್ಥಾಪಕರು ಮೇ.21 ರಂದು ಪತ್ರ ಬರೆದಿದ್ದಾರೆ. ಇದರಲ್ಲಿ 18% ಬಡ್ಡಿ ಸಮೇತ 80 ಲಕ್ಷ ಹಣ ಪಾವತಿ ಮಾಡಲು ಹೇಳಿದ್ದಾರೆ. ಜೂನ್ 1 ರ ಒಳಗೆ ಬಿಲ್ ಕಟ್ಟದೇ ಹೋದರೆ ಕಾನೂನಾತ್ಮಕ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಕಳೆದ ವರ್ಷ ಪ್ರಧಾನಿ ಮೋದಿಯವರು ಬಂಡೀಪುರ ಹುಲಿ ಸುರಕ್ಷಿತ ಅರಣ್ಯದ 50ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದ ಸಂದರ್ಭದಲ್ಲಿ ಮೈಸೂರಿನ ಪಂಚತಾರ ಹೋಟೆಲ್‌ನಲ್ಲಿ ತಂಗಿದ್ದರು. ಈ ಕಾರ್ಯಕ್ರಮದ ಒಟ್ಟು ವೆಚ್ಚವೇ ಆರು ಕೋಟಿ ಆಗಿತ್ತು. ಆದರೆ ಮೂರು ಕೋಟಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಆದರೆ ವರ್ಷ ಕಳೆದರೂ ಹೋಟೆಲ್ ಬಿಲ್ ಇನ್ನೂ ಪಾವತಿಯಾಗಿಲ್ಲ.
ಇದನ್ನೂ ಓದಿ: Cleaning Tips: ಮನೆಯೊಳಗೆ ಇರುವೆ ಕಾಟ ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!