For the best experience, open
https://m.hosakannada.com
on your mobile browser.
Advertisement

Narendra Modi: ಮೋದಿ ತಂಗಿದ್ದ ಮೈಸೂರು ಹೋಟೆಲ್‌ ಬಿಲ್‌ 80 ಲಕ್ಷ ಬಾಕಿ

Narendra Modi: ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದ ಸಂದರ್ಭದಲ್ಲಿ ವಾಸ್ತವ್ಯ ಹೂಡಿದ್ದ ಹೋಟೆಲ್‌ನ ಕೊಠಡಿಯ ಬಿಲ್‌ ಪಾವತಿಸದ ಅರಣ್ಯ ಇಲಾಖೆ ವಿರುದ್ಧ ಹೋಟೆಲ್‌ ವ್ಯವಸ್ಥಾಪಕರು ಸಿಟ್ಟುಗೊಂಡಿದ್ದಾರೆ.
02:51 PM May 26, 2024 IST | ಸುದರ್ಶನ್
UpdateAt: 02:51 PM May 26, 2024 IST
narendra modi  ಮೋದಿ ತಂಗಿದ್ದ ಮೈಸೂರು ಹೋಟೆಲ್‌ ಬಿಲ್‌ 80 ಲಕ್ಷ ಬಾಕಿ
Advertisement

Narendra Modi: ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದ ಸಂದರ್ಭದಲ್ಲಿ ವಾಸ್ತವ್ಯ ಹೂಡಿದ್ದ ಹೋಟೆಲ್‌ನ ಕೊಠಡಿಯ ಬಿಲ್‌ ಪಾವತಿಸದ ಅರಣ್ಯ ಇಲಾಖೆ ವಿರುದ್ಧ ಹೋಟೆಲ್‌ ವ್ಯವಸ್ಥಾಪಕರು ಸಿಟ್ಟುಗೊಂಡಿದ್ದಾರೆ.

Advertisement

ಇದನ್ನೂ ಓದಿ: ರಾಜ್‌ಕೋಟ್‌ ಗೇಮಿಂಗ್‌ ಝೋನ್‌ನಲ್ಲಿ ಭೀಕರ ಬೆಂಕಿ ಅವಘಡ; ಸಾವಿನ ಸಂಖ್ಯೆ 35ಕ್ಕೆ ಏರಿಕೆ; ಸುಮೋಟೋ ಕೇಸು ದಾಖಲು

ಜೂನ್‌ 1ರ ಒಳಗೆ 80 ಲಕ್ಷ ಬಿಲ್‌ ಕಟ್ಟದೇ ಹೋದರೆ ಕಾನೂನಾತ್ಮಕವಾಗಿ ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗೆ ಹೋಟೆಲ್‌ ವ್ಯವಸ್ಥಾಪಕರು ಮೇ.21 ರಂದು ಪತ್ರ ಬರೆದಿದ್ದಾರೆ. ಇದರಲ್ಲಿ 18% ಬಡ್ಡಿ ಸಮೇತ 80 ಲಕ್ಷ ಹಣ ಪಾವತಿ ಮಾಡಲು ಹೇಳಿದ್ದಾರೆ. ಜೂನ್‌ 1 ರ ಒಳಗೆ ಬಿಲ್‌ ಕಟ್ಟದೇ ಹೋದರೆ ಕಾನೂನಾತ್ಮಕ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Advertisement

ಕಳೆದ ವರ್ಷ ಪ್ರಧಾನಿ ಮೋದಿಯವರು ಬಂಡೀಪುರ ಹುಲಿ ಸುರಕ್ಷಿತ ಅರಣ್ಯದ 50ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದ ಸಂದರ್ಭದಲ್ಲಿ ಮೈಸೂರಿನ ಪಂಚತಾರ ಹೋಟೆಲ್‌ನಲ್ಲಿ ತಂಗಿದ್ದರು. ಈ ಕಾರ್ಯಕ್ರಮದ ಒಟ್ಟು ವೆಚ್ಚವೇ ಆರು ಕೋಟಿ ಆಗಿತ್ತು. ಆದರೆ ಮೂರು ಕೋಟಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಆದರೆ ವರ್ಷ ಕಳೆದರೂ ಹೋಟೆಲ್‌ ಬಿಲ್‌ ಇನ್ನೂ ಪಾವತಿಯಾಗಿಲ್ಲ.

ಇದನ್ನೂ ಓದಿ: Cleaning Tips: ಮನೆಯೊಳಗೆ ಇರುವೆ ಕಾಟ ತಪ್ಪಿಸಲು ಈ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು!

Advertisement
Advertisement
Advertisement