For the best experience, open
https://m.hosakannada.com
on your mobile browser.
Advertisement

Mysore : ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿದ್ದು ಎಚ್ ಡಿ ದೇವೇಗೌಡ- ಕಾಂಗ್ರೆಸ್ ಸಚಿವ ಆರೋಪ !!

Mysore: ಟಿಕೆಟ್ ತಪ್ಪಿದ್ಯಾಕೆ, ತಪ್ಪಿಸಿದ್ಯಾರು ಎಂಬುದೇ ಯಕ್ಷ ಪ್ರಶ್ನೆ ಆಗಿತ್ತು. ಇದೀಗ ಈ ಬಗ್ಗೆ ಕಾಂಗ್ರೆಸ್ ಸಚಿವ ವೆಂಕಟೇಶ್(Minister Venktesh) ಅವರು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ
10:51 PM Apr 03, 2024 IST | ಸುದರ್ಶನ್
UpdateAt: 10:52 PM Apr 03, 2024 IST
mysore   ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿದ್ದು ಎಚ್ ಡಿ ದೇವೇಗೌಡ  ಕಾಂಗ್ರೆಸ್ ಸಚಿವ ಆರೋಪ
Advertisement

Mysore : ಕೊಡಗು-ಮೈಸೂರು(Kodagu-Mysore) ಕ್ಷೇತ್ರದಿಂದ 2 ಅವಧಿಗೆ ಸಂಸದರಾಗಿ ಆಯ್ಕೆಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಪ್ರತಾಪ್ ಸಿಂಹ(Pratap Simha) ಅವರ ಈ ಸಲದ ಟಿಕೆಟ್ ಯದುವೀರ್ ಅವರ ಪಾಲಾಗಿದೆ. ಆದರೆ ಯುವ ನೇತಾರ, ನಾಯಕನಿಗೆ ಬಿಜೆಪಿ ಯಾಕೆ ಹೀಗೆ ಮಾಡಿತು ಎಂದು ಎಲ್ಲರೂ ಬೇಸರ ಪಟ್ಟುಕೊಂಡಿದ್ದರು. ಅಲ್ಲದೆ ಟಿಕೆಟ್ ತಪ್ಪಿದ್ಯಾಕೆ, ತಪ್ಪಿಸಿದ್ಯಾರು ಎಂಬುದೇ ಯಕ್ಷ ಪ್ರಶ್ನೆ ಆಗಿತ್ತು. ಇದೀಗ ಈ ಬಗ್ಗೆ ಕಾಂಗ್ರೆಸ್ ಸಚಿವ ವೆಂಕಟೇಶ್(Minister Venktesh) ಅವರು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

Advertisement

ಹೌದು, ಮೈಸೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್(Congress) ಸಮಾವೇಶದಲ್ಲಿ ಮಾತನಾಡಿದ ಸಚಿವ ಕೆ.ವೆಂಕಟೇಶ್, ಪ್ರತಾಪ್ ಸಿಂಹ ಒಕ್ಕಲಿಗ. ಒಕ್ಕಲಿಗರಿಗೆ ಒಕ್ಕಲಿಗರೇ ಮುಳುವಾಗಿದ್ದಾರೆ. ನಮ್ಮ ಸಮಾಜದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ತಪ್ಪಿಸಿ ಯದುವೀರ್ಗೆ ಟಿಕೆಟ್ ಕೊಟ್ಟಿದ್ದಾರೆ. ಮೊದಲು ಯದುವೀರ್ ಹೆಸರು ಇರಲೇ ಇಲ್ಲ. ಆದರೆ ದೇವೆಗೌಡರೇ ಮುಂದಾಳತ್ವ ವಹಿಸಿ, ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿ ಯದುವೀರ್ ಅವರನ್ನ ನಿಲ್ಲಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಅಲ್ಲದೆ ನಮಗ್ಯಾರಿಗೂ ಮೈಸೂರಲ್ಲಿ ಯದುವೀರ್(Yaduveer Wadiyar)ಅವರು ರಾಜಕೀಯಕ್ಕೆ ಬರುತ್ತಾರೆ ಎಂದು ಎಂದಿಗೂ ಗೊತ್ತಿರಲಿಲ್ಲ. ಕೊನೆವರೆಗೂ ತಿಳಿದಿರಲಿಲ್ಲ. ಆದರೆ ದಿಢೀರ್ ಎಂದು ಹೆಸರು ಸೇರಿತ್ತು. ಇದರ ಹಿಂದೆ ಅನೇಕ ಉದ್ದೇಶಗಳಿದ್ದು ಅವರು, ಮಂಡ್ಯ, ಹಾಸನಕ್ಕೆ ಅನುಕೂಲವಾಗುತ್ತೆ ಅಂತ ಅವರ ಸ್ವಾರ್ಥಕ್ಕಾಗಿ ಯದುವೀರ್ ಒಡೆಯರ್ ಅವರನ್ನು ನಿಲ್ಲಿಸಿದ್ದಾರೆ. ನಾನು ದೇವೇಗೌಡರ ಹತ್ತಿರ ಸಂಬಂಧಿ. ಅವರು ಸ್ವಾರ್ಥ ಎಂಬ ಕಾರಣಕ್ಕೆ ನಾನು ದೂರ ಉಳಿದೆ ಎಂದೂ ಹೇಳಿದ್ದಾರೆ.

Advertisement

Advertisement
Advertisement
Advertisement