For the best experience, open
https://m.hosakannada.com
on your mobile browser.
Advertisement

Mysore: ಉಳುಮೆ ಮಾಡುವಾಗ ಟ್ರಾಕ್ಟರ್ ನಿಂದ ಬಿದ್ದು ರೋಟಾ ವೆಲ್ಟರ್ ಗೆ ಸಿಲುಕಿದ ಬಾಲಕ ಮೃತ್ಯು

Mysore : ಅಜ್ಜಿ ಮನೆಗೆ ರಜೆ ಕಳೆಯಲು ಬಂದಿದ್ದ ಬಾಲಕ ಟ್ರಾಕ್ಟರ್ ಗೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
07:36 AM May 19, 2024 IST | ಸುದರ್ಶನ್ ಬೆಳಾಲು
UpdateAt: 10:21 AM May 19, 2024 IST
mysore  ಉಳುಮೆ ಮಾಡುವಾಗ ಟ್ರಾಕ್ಟರ್ ನಿಂದ ಬಿದ್ದು ರೋಟಾ ವೆಲ್ಟರ್ ಗೆ ಸಿಲುಕಿದ ಬಾಲಕ ಮೃತ್ಯು
Advertisement

Mysore : ಅಜ್ಜಿ ಮನೆಗೆ ರಜೆ ಕಳೆಯಲು ಬಂದಿದ್ದ ಬಾಲಕ ಟ್ರಾಕ್ಟರ್ ಗೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

Advertisement

ಈ ದುರ್ಘಟನೆಯು ಮೈಸೂರಿನ ನಂಜನಗೂಡು ತಾಲೂಕಿನ ದೇವರಸನಹಳ್ಳಿಯಲ್ಲಿ ನಡೆದಿದೆ. ಭವಿಷ್ ಎಂಬ 8 ವರ್ಷದ ಬಾಲಕನೇ ಟ್ರಾಕ್ಟರ್ ಗೆ ಸಿಲುಕಿ ಸಾವನ್ನಪ್ಪಿದ ಬಾಲಕ.

ಇದನ್ನೂ ಓದಿ: Rona: ರಥೋತ್ಸವ ವೇಳೆ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಭಕ್ತರ ಸಾವು; ಓರ್ವನಿಗೆ ಗಾಯ

Advertisement

ಟ್ರಾಕ್ಟರ್ ರೊಟಾವೆಲ್ಟರ್ ಗೆ ಸಿಲುಕಿದ ಬಾಲಕನ ದೇಹ ಛಿದ್ರ ಛಿದ್ರವಾಗಿದೆ. ಚಾಮರಾಜನಗರ ವಾಸಿ ತಾಯಿ ಮಮತಾ ತನ್ನ ಮಕ್ಕಳೊಂದಿಗೆ ದೇವರಸನಹಳ್ಳಿಗೆ ಬಂದಿದ್ದರು. ಮಕ್ಕಳಿಗೆ ರಜೆ ನಿಮಿತ್ತ ತನ್ನ ಮಕ್ಕಳ ಅಜ್ಜಿಮನೆಗೆ ಮಕ್ಕಳೂ ಖುಷಿಯಿಂದ ಬಂದಿದ್ದರು. ಮಕ್ಕಳಲ್ಲಿ ಭವಿಷ್ ಎಂಬ 8 ವರ್ಷದ ಹುಡುಗ ತನ್ನ ಸೋದರಮಾವನ ಜೊತೆ ಟ್ರಾಕ್ಟರ್ ಹತ್ತಿ ಜಮೀನಿಗೆ ತೆರಳಿದ್ದ.

ಅಲ್ಲಿ ಜಮೀನಿನಲ್ಲಿ ಟ್ರ್ಯಾಕ್ಟರ್ ಹತ್ತಿ ಮಾವನ ಜತೆ ಉಳುಮೆ ಮಾಡುತ್ತಿದ್ದ. ಈ ಸಂದರ್ಭ ಭವಿಷ್ ಟ್ರಾಕ್ಟರ್ ನಿಂದ ಏಕಾಏಕಿ ಕೆಳಗೆ ಬಿದ್ದಿದ್ದಾನೆ. ಆತನ ಮೇಲೆ ರೊಟಾವೆಲ್ಟರ್ ಹರಿದು ಹೋಗಿದೆ. ಘಟನೆಯಲ್ಲಿ ಆತನ ದೇಹ ಛಿದ್ರ ಛಿದ್ರ ವಾಗಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನೀವು ಪ್ರಯಾಣಿಸುವಾಗ ಮೊಬೈಲ್ ಚಾರ್ಜರ್ ಬಿಟ್ಟು ಹೋಗಿದ್ದೀರ? ಡೋಂಟ್ ವರಿ, ಈ ಹಾಕ್ಸ್ ಉಪಯೋಗಿಸಿ

Advertisement
Advertisement
Advertisement