For the best experience, open
https://m.hosakannada.com
on your mobile browser.
Advertisement

Murder: ಏಳು ಪೊಲೀಸರನ್ನೇ ‌ಹತ್ಯೆ ಮಾಡಿದ್ದ ನಕ್ಸಲ್‌ ಚಂದ್ರ ಮುತ್ಯಾಲು ಬಂಧನ!

Murder: ನಕ್ಸಲ್‌ ಚಂದ್ರ ಮುತ್ಯಾಲು ಅಲಿಯಾಸ್ ಬಂದೆಲ ಮುತ್ಯಾಲು ಎಂಬಾತನನ್ನು  ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
09:49 AM Jul 04, 2024 IST | ಕಾವ್ಯ ವಾಣಿ
UpdateAt: 09:49 AM Jul 04, 2024 IST
murder  ಏಳು ಪೊಲೀಸರನ್ನೇ ‌ಹತ್ಯೆ ಮಾಡಿದ್ದ ನಕ್ಸಲ್‌ ಚಂದ್ರ ಮುತ್ಯಾಲು ಬಂಧನ
Advertisement

Murder: ಪಾವಗಡ ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರೋಬ್ಬರಿ ಏಳು ಪೊಲೀಸರನ್ನು ‌ಹತ್ಯೆ (Murder) ಮಾಡಿದ್ದ ನಕ್ಸಲ್‌ ಚಂದ್ರ ಮುತ್ಯಾಲು ಅಲಿಯಾಸ್ ಬಂದೆಲ ಮುತ್ಯಾಲು ಎಂಬಾತನನ್ನು  ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

Dakshina Kannada: ನಿರಂತರ ಮಳೆಯ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರವಾಸಿ ತಾಣಗಳಿಗೆ ನಿರ್ಬಂಧ

ಹೌದು, ಚಂದ್ರ ಮುತ್ಯಾಲು ಅಲಿಯಾಸ್ ಬಂದೆಲ ಮುತ್ಯಾಲು ಎಂಬಾತ 2005ರ ಫೆಬ್ರವರಿ 10ರಂದು ಪಾವಗಡ ತಾಲೂಕಿನ ತಿರುಮಣಿ ಪೊಲೀಸ್ ಠಾಣೆಯ ವ್ಯಾಪ್ತಿಯ ವೆಂಕಟಮ್ಮನಹಳ್ಳಿಯ ಶಾಲೆಯಲ್ಲಿ ಭದ್ರತೆಗೆ ನೇಮಕವಾಗಿದ್ದ 9 ಜನ ಪೊಲೀಸರ ಪೈಕಿ 7 ಜನ ಪೊಲೀಸರು ಮತ್ತು ಒಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ. ಅಷ್ಟೇ ಅಲ್ಲದೇ ಪೊಲೀಸರ ಹತ್ಯೆಯ ನಂತರ ಪೊಲೀಸ್ ಇಲಾಖೆಗೆ ಸೇರಿದ ಬಂದೂಕು, ಮದ್ದು ಗುಂಡುಗಳನ್ನು ದೋಚಿಕೊಂಡು ಪರಾರಿಯಾಗಿದ್ದನು.

Advertisement

ಮಾಹಿತಿ ಪ್ರಕಾರ, ಮಾಜಿ ನಕ್ಸಲೈಟ್ ಚಂದ್ರು ಮುತ್ಯಾಲ ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ಸಿಂಗಲಮಲ್ಲ ತಾಲೂಕಿನ ಗಾರಲದಿನ್ನೆ ಮಂಡಲದ ಕೇಶವಪುರಂ ಗ್ರಾಮದವನಾಗಿದ್ದು, ಪೊಲೀಸರ ಹತ್ಯೆಯ ನಂತರ ತಲೆ ಮರೆಸಿಕೊಂಡು ಬೆಂಗಳೂರಿನ ಬಿಬಿಎಂಪಿ ಲಾರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ತೀವ್ರ ಕಾರ್ಯಾಚರಣೆ ನಂತರ ಇವನನ್ನು ಪತ್ತೆ ಹಚ್ಚಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮರಿಯಪ್ಪ, ಅಬ್ದುಲ್ ಖಾದರ್ ಮಾರ್ಗದರ್ಶನ ಮತ್ತು ಮಧುಗಿರಿ ಪೊಲೀಸ್ ಉಪಾಧೀಕ್ಷಕ ರಾಮಚಂದ್ರಪ್ಪ ನೇತೃತ್ವದಲ್ಲಿ ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಸದ್ಯ ಆಂಧ್ರಪ್ರದೇಶದ ಮಾಜಿ ನಕ್ಸಲ್  ಚಂದ್ರ ಮುತ್ಯಾಲು ಅಲಿಯಾಸ್ ಬಂದೆಲ ಮುತ್ಯಾಲುನನ್ನು ಪಾವಗಡ ಗ್ರಾಮಾಂತರ ವೃತ್ತದ ಸಿ ಗಿರೀಶ್, ಎಎಸ್ಐ ಗೋವಿಂದರಾಜು ಮತ್ತು ಸಿಬ್ಬಂದಿಗಳಾದ ಧರ್ಮಪಾಲನಾಯ್ಕ, ಪುಂಡಲೀಕ ಲಮಾಣಿ ಆರೋಪಿಯನ್ನು ದಸ್ತೆಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ.ಕೆ.ವಿ. ತಿಳಿಸಿದ್ದಾರೆ.

Andhra Pradesh: ತಾವೇ ಮುಂದೆ ನಿಂತು ಗಂಡನಿಗೆ 3ನೇ ಮದುವೆ ಮಾಡಿದ ಇಬ್ಬರು ಹೆಂಡತಿಯರು !!

Advertisement
Advertisement
Advertisement