ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Murder Case: ಮಲಯಾಳಿ ಅಬ್ದುಲ್ ರಹೀಮ್ ಮರಣದಂಡನೆ ರದ್ದು: ಸೌದಿ ಅರೇಬಿಯಾದ ರಿಯಾದ್ ಕೋರ್ಟ್ ಆದೇಶ

Murder Case: ಅಂಗವಿಕಲ ಮಗನನ್ನು ಕೊಲೆ ಮಾಡಿದ ಹಿನ್ನೆಲೆ (Murder Case) ಸೌದಿ ಅರೇಬಿಯಾದಲ್ಲಿ ಜೈಲಿನಲ್ಲಿ ವಿಧಿಸಲಾಗಿದ್ದ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ.
09:49 AM Jul 03, 2024 IST | ಕಾವ್ಯ ವಾಣಿ
UpdateAt: 09:49 AM Jul 03, 2024 IST
Advertisement

Murder Case: ಕೋಝಿಕ್ಕೋಡ್‌ನ ಕೊಟೊಂಪುಝ ನಿವಾಸಿ ಮಲಯಾಳಿ ಅಬ್ದುಲ್ ರಹೀಮ್ ಎಂಬಾತನಿಗೆ, ತನ್ನ ಪ್ರಾಯೋಜಕರ ಅಂಗವಿಕಲ ಮಗನನ್ನು ಕೊಲೆ ಮಾಡಿದ ಹಿನ್ನೆಲೆ (Murder Case) ಸೌದಿ ಅರೇಬಿಯಾದಲ್ಲಿ ಜೈಲಿನಲ್ಲಿ ವಿಧಿಸಲಾಗಿದ್ದ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ. ಹೌದು, ಈ ಸಂಬಂಧ ರಿಯಾದ್ ಕ್ರಿಮಿನಲ್ ನ್ಯಾಯಾಲಯ ಜುಲೈ 2 ರಂದು ಮರಂಣದಂಡನೆ ರದ್ದುಗೊಳಿಸಿ ಆದೇಶ ಹೊರಡಿಸಿದೆ.

Advertisement

Actor Darshan: ನಟ ದರ್ಶನ್ ಮೇಲಿನ ಅಭಿಮಾನಕ್ಕೆ ಮಗನನ್ನೇ ಕೈದಿ ಮಾಡಿದ ಗ್ರೇಟ್ ಅಪ್ಪ !

Advertisement

ರಾಯಭಾರಿ ಕಚೇರಿಯ ಅಧಿಕಾರಿಗಳು ರಹೀಮ್ ಕುಟುಂಬದ ಪರ ವಕೀಲ ಸಿದ್ದಿಕ್ ತುವ್ವೂರ್ ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯದ ವರ್ಚುವಲ್ ಸಿಸ್ಟಮ್ ಮೂಲಕ ನ್ಯಾಯಾಲಯವು ರಹೀಮ್ ಅವರನ್ನು ಭೇಟಿ ಮಾಡಿದ ನಂತರ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ನ್ಯಾಯಾಲಯವು ಮರಣದಂಡನೆಯನ್ನು ರದ್ದುಗೊಳಿಸುವ ಆದೇಶಕ್ಕೆ ಸಹಿ ಹಾಕಿತು.

ಸದ್ಯ ರಾಯಭಾರಿ ಕಚೇರಿ ಮೂಲಕ ನ್ಯಾಯಾಲಯದಲ್ಲಿ ಠೇವಣಿ ಇಟ್ಟಿದ್ದ ಒಂದೂವರೆ ಕೋಟಿ ರಿಯಾಲ್ ನ ಚೆಕ್ ನ್ನು ಕೊಲೆಯಾದ ಸೌದಿ ಬಾಲಕನ ಕುಟುಂಬದ ಪವರ್ ಆಫ್ ಅಟಾರ್ನಿಗೆ ನ್ಯಾಯಾಲಯ ಹಸ್ತಾಂತರಿಸಿದೆ.

ಇನ್ನು ಅಬ್ದುಲ್ ರಹೀಮ್ ಕೊಲೆ ಮಾಡಿದ್ದಕ್ಕಾಗಿ 18 ವರ್ಷಗಳಿಂದ ಜೈಲಿನಲ್ಲಿದ್ದು, ಈಗಾಗಲೇ ರಹೀಮ್ ಬಿಡುಗಡೆಗಾಗಿ ಸಂಗ್ರಹಿಸಿದ 47 ಕೋಟಿಗೂ ಹೆಚ್ಚು ಭಾರತೀಯ ರೂಪಾಯಿಗಳಲ್ಲಿ ಸ್ಥಳೀಯ ಟ್ರಸ್ಟ್ ಒಂದೂವರೆ ಕೋಟಿ ಸೌದಿ ರಿಯಾಲ್ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನೀಡಲಾಗಿದೆ.

ಮಾಹಿತಿ ಪ್ರಕಾರ, ಅಬ್ದುಲ್ ರಹೀಮ್ ತನ್ನ ಜೀವನೋಪಾಯಕ್ಕಾಗಿ 26 ವರ್ಷದಲ್ಲಿ ಸೌದಿ ಅರೇಬಿಯಾವನ್ನು ಸೇರಿ ಅಲ್ಲಿ ಸೌದಿ ಪ್ರಜೆಯೊಬ್ಬರಿಗೆ ಅವರ ಚಾಲಕ ಮತ್ತು ಭಾಗಶಃ ಪಾರ್ಶ್ವವಾಯುವಿಗೆ ಒಳಗಾದ ಮಗನನ್ನು ನೋಡಿಕೊಳ್ಳಲು ಪ್ರಾರಂಭಿಸಿದ್ದು, ಬಾಲಕನು ತನ್ನ ಕುತ್ತಿಗೆಗೆ ಜೋಡಿಸಲಾದ ವಿಶೇಷ ಸಾಧನದ ಮೂಲಕ ಉಸಿರಾಟ ಮತ್ತು ತಿನ್ನುತ್ತಿದ್ದನು. ಹೀಗಿರುವಾಗ ಒಂದು ದಿವಸ ರಸ್ತೆಯಲ್ಲಿ ಕೆಂಪು ಸಿಗ್ನಲ್ ಅನ್ನು ಉಲ್ಲಂಘಿಸುವಂತೆ ಒತ್ತಾಯಿಸಿ ಗಲಾಟೆ ಮಾಡುತ್ತಿದ್ದ ಹುಡುಗನನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವಾಗ ಆಕಸ್ಮಿಕವಾಗಿ ಉಪಕರಣವನ್ನು ಸ್ಥಳಾಂತರಿಸಿದ ಸಂದರ್ಭದಲ್ಲಿ ಮೂರ್ಛೆಹೋಗಿ ಸತ್ತಿರುತ್ತಾನೆ. ಇದರಿಂದಾಗಿ ಅಬ್ದುಲ್ ರಹೀಮ್ ದೀರ್ಘ ಶಿಕ್ಷೆಗೆ ಗುರಿಯಾಗಿದ್ದನು.

Annamalai: ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ?- ಲಂಡನ್‌ನಲ್ಲಿ ನೆಲಸಲಿರುವ ಅಣ್ಣಾ ಮಲೈ

Advertisement
Advertisement