For the best experience, open
https://m.hosakannada.com
on your mobile browser.
Advertisement

Mujaffarpur: 'ಬಾಬಾ' ಕರೆದನೆಂದು ಮನೆ ಬಿಟ್ಟ 3 ಹುಡುಗಿಯರು ಮಥುರಾದಲ್ಲಿ ಹೆಣವಾಗಿ ಪತ್ತೆ !!

Mujaffarpur: ಇದೀಗ ಮನಮಿಡಿಯುವ ನಿದರ್ಶನವೊಂದು ಬೆಳಕಿಗೆ ಬಂದಿದ್ದು, ಮೂರು ಬಾಲಕಿಯರು ಸಾವನ್ನಪ್ಪಿರುವ ಮನಮಿಡಿಯುವ ಪ್ರಕರಣ ಬಯಲಾಗಿದೆ.
10:43 AM May 31, 2024 IST | ಸುದರ್ಶನ್
UpdateAt: 10:48 AM May 31, 2024 IST
mujaffarpur    ಬಾಬಾ  ಕರೆದನೆಂದು ಮನೆ ಬಿಟ್ಟ 3 ಹುಡುಗಿಯರು ಮಥುರಾದಲ್ಲಿ ಹೆಣವಾಗಿ ಪತ್ತೆ

Mujaffarpur: ಜಗತ್ತು ಎಷ್ಟೇ ಮುಂದುವರೆದರೂ ಜನ ಮರುಳಾಗುವುದನ್ನು, ಮೋಸ ಹೋಗುವುದನ್ನು ಮಾತ್ರ ಬಿಡುವುದಿಲ್ಲ. ಇದಕ್ಕೆ ಇದೀಗ ಮನಮಿಡಿಯುವ ನಿದರ್ಶನವೊಂದು ಬೆಳಕಿಗೆ ಬಂದಿದ್ದು, ಮೂರು ಬಾಲಕಿಯರು ಸಾವನ್ನಪ್ಪಿರುವ ಮನಮಿಡಿಯುವ ಪ್ರಕರಣ ಬಯಲಾಗಿದೆ.

Advertisement

ಇದನ್ನೂ ಓದಿ: Gold: ಇನ್ಮುಂದೆ ಮನೆಯಲ್ಲಿ ಅಗತ್ಯಕ್ಕೂ ಹೆಚ್ಚು ಚಿನ್ನ ಶೇಖರಿಸಿ ಇಡುವಂತಿಲ್ಲ! ಸರ್ಕಾರದ ಹೊಸ ನಿಯಮ ಪಾಲಿಸಲು ಮರೆಯಬೇಡಿ!

ಹೌದು, ಕೆಲ ದಿನಗಳ ಹಿಂದೆ ಮುಜಫರ್‌ಪುರದಲ್ಲಿ(Mujaffarpur) ಮೂವರು ಬಾಲಕಿಯರು ಬಾಬ ಕರೆಯುತ್ತಿದ್ದಾನೆಂದು ಪತ್ರ ಬರೆದಿಟ್ಟು ಮನೆಯನ್ನೇ ತೊರೆದು ಹೋಗಿದ್ದರು. ಇದೀಗ ಈ ಮೂವರು ಬಾಲಕಿಯರು ಮನೆಯಿಂದ 960 ಕಿಮೀ ದೂರದಲ್ಲಿ, ಮಥುರಾದಲ್ಲಿ ಸಾವನ್ನಪ್ಪಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ರಹಸ್ಯವನ್ನು ಭೇದಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

Advertisement

ಇದನ್ನೂ ಓದಿ: Mumbai: ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ; ಮಗಳು ಗರ್ಭಿಣಿ

ಏನಿದು ಪ್ರಕರಣ?

ಮುಜಾಫರ್‌ಪುರದ ಯೋಗಿಮಠದ(Yogi Muth) ಗೌರಿ ಮತ್ತು ಮಾಯಾ ಹಾಗೂ ಬಾಳುಘಟ್ಟದ ಮಾಹಿ ಎಂಬ 14 ವರ್ಷದ ಮೂವರು ವಿದ್ಯಾರ್ಥಿನಿಯರು ಮೇ 13ರಂದು ದೇವಸ್ಥಾನಕ್ಕೆ ಹೋಗುವುದಾಗಿ ತಿಳಿಸಿ ಮನೆ ಬಿಟ್ಟು ಹೋಗಿದ್ದರು. ಮನೆಯವರು ಹುಡುಕಾಟ ನಡೆಸಿದಾಗ ವಿದ್ಯಾರ್ಥಿನಿಯ ಬ್ಯಾಗ್‌ನಲ್ಲಿ ಪತ್ರವೊಂದು ದೊರೆತಿತ್ತು. ಅದರಲ್ಲಿ ಬಾಬಾ ದರ್ಶನಕ್ಕೆ ಕರೆ ಇದೆ. ನಾವು ಧಾರ್ಮಿಕ ಪ್ರಯಾಣ ಕೈಗೊಳ್ಳುತ್ತಿದ್ದು, ಹಿಮಾಲಯಕ್ಕೆ ಹೋಗುತ್ತಿದ್ದೇವೆ, ಮೂರು ತಿಂಗಳು ನಮ್ಮನ್ನು ಹುಡುಕಬೇಡಿ. ನೀವು ಹುಡುಕಿದರೆ, ನಾವು ಸಾಯುತ್ತೇವೆ ಎಂದೂ ಹುಡುಗಿಯರು ಪತ್ರದಲ್ಲಿ ಬರೆದಿದ್ದರು. ಇದರಿಂದ ಆತಂಕಕ್ಕೊಳಗಾದ ಕುಟುಂಬವು ಹುಡುಕಾಟ ನಡೆಸಿ ಪೋಲೀಸರಿಗೆ ದೂರು ನೀಡಿದ್ದರು. ಆದರೆ ಪೋಲೀಸರು ಕಾಲಹರಣ ಮಾಡುತ್ತಾ 10 ದಿನಗಳ ಬಳಿಕ ಕೇಸ್ ದಾಖಲಿಸಿಕೊಂಡು ಈ ಪ್ರಮಾದಕ್ಕೆ ಒಂದು ರೀತಿಯಲ್ಲಿ ಕಾರಣೀಕರ್ತರಾಗಿದ್ದಾರೆ.

ಏನಪ್ಪಾ ಇದು ವಿಚಿತ್ರ ಭಕ್ತಿ?

6 ತಿಂಗಳ ಹಿಂದೆ ಮಾಹಿಯನ್ನು ಗೌರಿ ಮತ್ತು ಮಾಯಾ ಕೋಚಿಂಗ್‌ ಸೆಂಟರ್‌ನಲ್ಲಿ ಭೇಟಿಯಾಗಿದ್ರು. ಮಾಹಿಯು ಸಿಕ್ಕಾಪಟ್ಟೆ ಪೂಜೆ ಮಾಡುತ್ತಿದ್ದಳು. ಬಸಹಳಿಕ ಮೂವರು ಸಹ ದೇವರನ್ನು ಪೂಜಿಸಲು ಪ್ರಾರಂಭಿಸಿದರು. ಮಾಂಸಾಹಾರ ಸೇವನೆಯನ್ನೂ ನಿಲ್ಲಿಸಿದರು. ಬರಬರುತ್ತಾ ಮೂವರು ತುಂಬಾ ಆತ್ಮೀಯರಾದರು. ಬಳಿಕ ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಆಧ್ಯಾತ್ಮದ ಸೆಳೆತ ಶುರು ಹಚ್ಚಿಕೊಂಡರು. ಬಳಿಕ ಬಾಬಾ ಭೇಟಿಗೆಂದು ಹೊರಟಿದ್ದಾರೆ. ಇದು ಆತ್ಮಹತ್ಯೆಯೇ ಹೊರತು ಕೊಲೆಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೂ ಪ್ರಕರಣದ ಸುತ್ತ ಸಾಕಷ್ಟು ಅನುಮಾನಗಳೆದ್ದಿವೆ.

ಶವ ಪತ್ತೆಯಾದದ್ದು ಹೇಗೆ?

ಮೂವರು ವಿದ್ಯಾರ್ಥಿನಿಯರ ಶವ ಮಥುರಾ ಆಗ್ರಾ ರೈಲು ಹಳಿ ಬಳಿ ಪತ್ತೆಯಾಗಿದೆ. ಮಥುರಾ ಪೊಲೀಸರು ಸೋಮವಾರ (ಮೇ 27) ಮೃತದೇಹಗಳ ಬಳಿ ದೊರೆತ ಸಾಕ್ಷ್ಯದ ಆಧಾರದ ಮೇಲೆ ಮುಜಫರ್‌ಪುರ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಯೋಗಿಯಮಠದ ನಿವಾಸಿಗಳಾಗಿದ್ದು, ಅವರ ಛಾಯಾಚಿತ್ರಗಳಿಂದ ಅವರ ಕುಟುಂಬದವರು ಗುರುತಿಸಿದ್ದಾರೆ. ಇದಾದ ಬಳಿಕ ಪೊಲೀಸ್ ತಂಡ ಹಾಗೂ ಕುಟುಂಬ ಸೋಮವಾರ ಮಥುರಾಗೆ ತೆರಳಿತ್ತು. ಮೂರನೇ ಮೃತ ದೇಹವು ಬಾಳುಘಟ್ಟದ ವಿದ್ಯಾರ್ಥಿನಿಯದ್ದು ಎಂದು ಶಂಕಿಸಲಾಗಿದೆ. ಎಲ್ಲ ವಿದ್ಯಾರ್ಥಿನಿಯರು ರೈಲಿನಡಿಗೆ ಸಿಲುಕಿ ಸಾವಿಗೀಡಾಗಿದ್ದಾರೆ. ವಿದ್ಯಾರ್ಥಿನಿಯೊಬ್ಬಳ ಬಟ್ಟೆಯಲ್ಲಿ ಟೈಲರ್ ಶಾಪ್ ಹೆಸರಿದ್ದಿದ್ದರಿಂದ ಪೋಲೀಸರಿಗೆ ಆಕೆಯ ಗುರುತು ಪತ್ತೆ ಹಚ್ಚುವುದು ಸಾಧ್ಯವಾಗಿದೆ.

Advertisement
Advertisement
Advertisement