For the best experience, open
https://m.hosakannada.com
on your mobile browser.
Advertisement

Mudhola : ಯಪ್ಪಾ ಏನಿದು ಭೀಕರ ಕೃತ್ಯ.. !! ನೋವು ವಾಸಿ ಮಾಡೋದಾಗಿ ಹೇಳಿ ಕೊಡಲಿಯಲ್ಲಿ ಹೊಡೆಯುತ್ತಾನೆ ಈ ಡೋಂಗಿ ಬಾಬಾ !!

Mudhola: ಇಲ್ಲೊಬ್ಬ ಬಾಬ ದುಡ್ಡು ಪೀಕುವುದರೊಂದಿಗೆ ಬಂದ ಭಕ್ತರಿಗೆ ಏಟನ್ನೂ ಕೊಡುತ್ತಾನೆ. ಅದು ಕೂಡ ಕೊಡಲಿ ಏಟು!!
10:25 AM Jul 15, 2024 IST | ಸುದರ್ಶನ್
UpdateAt: 10:28 AM Jul 15, 2024 IST
mudhola   ಯಪ್ಪಾ ಏನಿದು ಭೀಕರ ಕೃತ್ಯ      ನೋವು ವಾಸಿ ಮಾಡೋದಾಗಿ ಹೇಳಿ ಕೊಡಲಿಯಲ್ಲಿ ಹೊಡೆಯುತ್ತಾನೆ ಈ ಡೋಂಗಿ ಬಾಬಾ
Advertisement

Mudhola: ಕಾಲ ಬದಲಾದರೂ ಕೂಡ ಇಂದು ಜನ ಮರುಳೋ ಜಾತ್ರೆ ಮರುಳೋ ಎಂದು ಗೊತ್ತಾಗುವುದಿಲ್ಲ. ಯಾಕೆಂದರೆ ಇಂದಿಗೂ ಜನರ ಅಸಹಾಯಕತೆಯನ್ನ ಲಾಭ ಮಾಡಿಕೊಂಡು ಪೂಜೆ-ಪುನಸ್ಕಾರ ಅಂತೆಲ್ಲಾ ಹೇಳಿ, ಪೂಜೆಗಳನ್ನ (Worship) ಮಾಡಿಸಿದರೆ ಒಳ್ಳೆಯದಾಗುತ್ತೇ, ನಿಮ್ಮ ಕಷ್ಟಗಳು ಪರಿಹಾರ ಸಿಗಲಿವೆ ಎಂದೆಲ್ಲಾ ಹೇಳುತ್ತಾ ಮೋಸ ಮಾಡುವ, ದುಡ್ಡು ಪೀಕುವ ಬಾಬಾಗಳು, ಪವಾಡ ಪುರುಷರು, ದೇವ ಮಾನವರ ಬಗ್ಗೆ ನಾವು ಕೇಳಿರುತ್ತೇವೆ. ಅಂತೆಯೇ ಇಲ್ಲೊಬ್ಬ ಬಾಬ ದುಡ್ಡು ಪೀಕುವುದರೊಂದಿಗೆ ಬಂದ ಭಕ್ತರಿಗೆ ಏಟನ್ನೂ ಕೊಡುತ್ತಾನೆ. ಅದು ಕೂಡ ಕೊಡಲಿ ಏಟು!!

Advertisement

ಹೌದು, ಬಾಗಲಕೋಟೆಯಲ್ಲಿ ಮೂಡನಂಬಿಕೆಯಿಂದ (Superstition) ನಡೆದಿರುವ ಘಟನೆ ಕೇಳಿದರೆ ಬೆಚ್ಚಿ ಬೀಳುತ್ತೀರಾ. ಪೂಜಾರಿಯೊಬ್ಬ (Priest) ದೇಹದ ಭಾಗಗಗಳು ನೋವು ಎಂದು ಬಂದವರಿಗೆ ಕೊಡಲಿಯಿಂದ ಏಟು ಕೊಡುವ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ವಿಡಿಯೋ ನೋಡಿದವರಿಗೆ ಮೈ ನಡುಗೋದಂತು ಗ್ಯಾರಂಟಿ.

ಇದೀಗ ಈ ಡೋಂಗಿ ಬಾಬನಾದ ಮುಧೋಳ(Mudhola) ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿನ ಕಾಶಿ ಲಿಂಗೇಶ್ವರ ದೇವಸ್ಥಾನದ ಪೂಜಾರಿ ಜಕ್ಕಪ್ಪ ಗಡ್ಡದ್ ನ ಭಯಾನಕ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೋಲೀಸರು ಅವನನ್ನು ಬಂಧಿಸಿ ಅಂದರ್ ಮಾಡಿದ್ದಾರೆ.

Advertisement

Actor Rakshith Shetty: ನಟ ರಕ್ಷಿತ್‌ ಶೆಟ್ಟಿ ವಿರುದ್ಧ FIR

ಅಂದಹಾಗೆ ಲೋಕಾಪುರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಮೆಟಗುಡ್ಡ ಗ್ರಾಮದಲ್ಲಿ ಕಾಶಿಲಿಂಗೇಶ್ವರ ದೇವಸ್ಥಾನದ ಅರ್ಚಕ ಜಕ್ಕಪ್ಪ ಗಡ್ಡದ್ ಅವರ ತೋಟದ ಮನೆಗೆ ಪ್ರತಿ ಭಾನುವಾರ ಹೊಟ್ಟೆ, ಬೆನ್ನು, ಕಾಲು ನೋವು ಎಂದು ಭಕ್ತರು ಬರುತ್ತಾರೆ. ಹೊಟ್ಟೆ ನೋವು ಇದ್ದಂತಹವನ್ನು ನೆಲದ ಮೇಲೆ ಮಲಗಿಸಿ ಹೊಟ್ಟೆಯ ಮೇಲೆ ಭಂಡಾರ ಎರಚಿ ಕೊಡಲಿಯಿಂದ ಹೊಡೆಯುತ್ತಾರೆ. ಬೆನ್ನು ನೋವು ಇದ್ದವರಿಗೆ ಬೆನ್ನಿನ ಮೇಲೆ ಭಂಡಾರ ಎರಚಿ ಕೊಡಲಿಯಿಂದ ಹೊಡೆಯುತ್ತಾನೆ. ಅವರು ಕೊಡಲಿಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ಈ ಕುರಿತು ಪೋಲೀಸ್ ಅಧಿಕಾರಿ ಪ್ರತಿಕ್ರಿಯಿಸಿ ಅರ್ಚಕ ತನ್ನ ಸ್ವಂತ ಲಾಭಕ್ಕಾಗಿ ಜನರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. ಈ ರೀತಿ 12 ವರ್ಷಗಳಿಂದ ಮಾಡುತ್ತಿರುವುದಾಗಿ ಪೂಜಾರಿ ಹೇಳಿದ್ದಾರೆ. ಕೊಡಲಿಯಿಂದ ಗಾಯಗೊಂಡ ಯಾರಾದರೂ ಪ್ರಕರಣ ನೀಡಿದರೆ ದಾಖಲಿಸಿಕೊಳ್ಳುತ್ತೇವೆ. ಜನರು ಇಂತಹ ಮೂಢನಂಬಿಕೆಗೆ ಮಾರು ಹೋಗಬಾರದು ಎಂದು ಎಸ್​ಪಿ ಮನವಿ ಮಾಡಿದರು.

Actor Darshan: ನಟ ದರ್ಶನ್ ಬಿಡುಗಡೆ ಬಗ್ಗೆ ದಸರೀಘಟ್ಟ ಚೌಡೇಶ್ವರಿ ದೇವಿ ಕಳಸದಲ್ಲಿ ಪ್ರಶ್ನೆ ಕೇಳಲು ಮೊರೆ ಹೋದ ಅಭಿಮಾನಿಗಳು! ಅಷ್ಟಕ್ಕೂ ದೇವಿ ಕೊಟ್ಟ ಉತ್ತರವೇನು?

Advertisement
Advertisement
Advertisement