ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Shrinvas Prasad: ಮೋದಿ ಆಗಮನದ ಬೆನ್ನಲ್ಲೇ ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಸಂಸದ ಶ್ರೀನಿವಾಸ್ ಪ್ರಸಾದ್!!

Shrinvas Prasad: ಈ ಬೆನ್ನಲ್ಲೇ ಬಿಜೆಪಿಗೆ ಶಾಕ್ ಕೊಟ್ಟ ಶ್ರೀನಿವಾಸ್ ಪ್ರಸಾದ್ ಚಾಮರಾಜನಗರದಲ್ಲಿ ಕಾಂಗ್ರೆಸ್ ಪರ ವಾತಾವರಣವಿದೆ ಎಂದಿದ್ದಾರೆ.
11:01 PM Apr 13, 2024 IST | ಸುದರ್ಶನ್
UpdateAt: 11:12 PM Apr 13, 2024 IST
Advertisement

Shrinivas Prasad: ಪ್ರಧಾನಿ ಮೋದಿ (Narendra Modi) ಮೈಸೂರಿಗೆ ಆಗಮಿಸುತ್ತಿರುವ ಹೊತ್ತಲ್ಲೇ ಮೈಸೂರಿನಲ್ಲಿ(Mysuru) ಅಚ್ಚರಿಯ ರಾಜಕೀಯ ಬೆಳವಣಿಗೆಯಾಗಿದೆ. ಆಪರೇಷನ್ ಹಸ್ತದಲ್ಲಿ ತೊಡಗಿರುವ ಸಿಎಂ ಸಿದ್ದರಾಮಯ್ಯನವರು ಆರು ವರ್ಷಗಳ ಬಳಿಕ ವೈರತ್ವ ಮರೆತು ತಮ್ಮ ಹಳೆಯ ಮಿತ್ರ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ (Srinivasa Prasad) ನಿವಾಸಕ್ಕೆ ಭೇಟಿ ಕೊಟ್ಟು ಚರ್ಚೆ ನಡೆಸಿದ್ದಾರೆ.

Advertisement

ಇದನ್ನೂ ಓದಿ: Soujanya Case: ಸೌಜನ್ಯಾಳಿಗೆ ನ್ಯಾಯ ದೊರೆಯಬೇಕೆಂದಾದರೆ ಈ ಬಾರಿ NOTA ಕ್ಕೆ ಮತ ಚಲಾಯಿಸಿ : ಮಹೇಶ್ ಶೆಟ್ಟಿ ತಿಮರೋಡಿ

Advertisement

ಹೌದು, ಮುಂಬರುವ ಚುನಾವಣೆಯಲ್ಲಿ ಚಾಮರಾಜನಗರ(Chamaraja Nagar) ಹಾಗೂ ಮೈಸೂರು- ಕೊಡಗು(Mysore- Kodagu) ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಪಣತೊಟ್ಟಿರುವ ಸಿದ್ದರಾಮಯ್ಯನವರು ಆಪರೇಷನ್ ಹಸ್ತದ ಕಾರ್ಯದಲ್ಲಿ ತೊಡಗಿದ್ದಾರೆ. ಈ ಹಿನ್ನಲೆಯಲ್ಲಿ ತಮ್ಮ ಹಳೆಯ ಮನಿಸನ್ನೂ ಕೂಡ ಮರೆತು ಚಾಮರಾಜನಗರದ ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿಕೊಟ್ಪು ಮಾತುಕತೆ ನಡೆಸಿದ್ದಾರೆ. ಈ ಬೆನ್ನಲ್ಲೇ ಬಿಜೆಪಿಗೆ ಶಾಕ್ ಕೊಟ್ಟ ಶ್ರೀನಿವಾಸ್ ಪ್ರಸಾದ್ ಚಾಮರಾಜನಗರದಲ್ಲಿ ಕಾಂಗ್ರೆಸ್ ಪರ ವಾತಾವರಣವಿದೆ ಎಂದಿದ್ದಾರೆ.

ಇದನ್ನೂ ಓದಿ: Rishabh Pant: ರಿಷಬ್ ಪಂತ್‌ ಗೆ ಭಾರೀ ದಂಡ ವಿಧಿಸಬೇಕು : ದಿಗ್ಗಜ ಕ್ರಿಕೆಟಿಗನ ಆಗ್ರಹ

ಇಷ್ಟೇ ಅಲ್ಲದೆ ಮೋದಿ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಇಲ್ಲ. ಅದಕ್ಕಾಗಿ ಮೋದಿ ಸಮಾವೇಶದಿಂದ ದೂರ ಉಳಿಯುತ್ತೇನೆ ಎಂದು ಶ್ರೀನಿವಾಸ್ ಪ್ರಸಾದ್ ಕಡ್ಡಿ ಮುರಿದಂತೆ ಹೇಳಿದ್ದಾರೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ, ಮುನಿಸು ಮರೆತು ಪ್ರಸಾದ್ ಅವರನ್ನು ಭೇಟಿಯಾಗಿರುವುದು ಚರ್ಚೆಗೆ ಕಾರಣವಾಗಿದೆ. ಉಭಯ ನಾಯಕರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ ಎನ್ನಲಾಗಿದೆ.

ಭೇಟಿ ಬಗ್ಗೆ ಟ್ವೀಟ್ ಮಾಡಿದ ಸಿದ್ದರಾಮಯ್ಯ(CM Siddaramaiah) ಅವರು ”ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಪರಸ್ಪರ ಎದುರಾಳಿಗಳಾಗಿದ್ದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಮತ್ತು ನಾನು ಇಂದು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದೆವು. ಶ್ರೀನಿವಾಸ ಪ್ರಸಾದ್ ಅವರ ಹೋರಾಟದ ಬದುಕು ಮತ್ತು ಜನಪರ ಕಾಳಜಿಯ ಬಗ್ಗೆ ನಾನು ಸದಾ ಗೌರವ ಇಟ್ಟುಕೊಂಡವನು. “ಸ್ನೇಹ ಶಾಶ್ವತ, ಮುನಿಸು ಕ್ಷಣಿಕ’’ ಎಂದು ನಂಬಿರುವ ನನಗೆ ಇಂದು ಅದರ ಪ್ರತ್ಯಕ್ಷ ಅನುಭವವಾಯಿತು. ರಾಜಕೀಯದಿಂದ ನಿವೃತ್ತರಾದರೂ ಶ್ರೀನಿವಾಸ ಪ್ರಸಾದ್ ಅವರು ಹೊಸ ತಲೆಮಾರಿಗೆ ಮಾರ್ಗದರ್ಶಕರಾಗಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿರಬೇಕು. ಇದಕ್ಕೆ ಬೇಕಾದ ಆರೋಗ್ಯ ಮತ್ತು ಆಯುಷ್ಯ ಅವರಿಗೆ ಒದಗಿ ಬರಲಿ ಎಂದು ಹಾರೈಸುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನು ಈ ಇಬ್ಬರ ನಾಯಕರ ಭೇಟಿಯಿಂದ ಎಚ್ಚೆತ್ತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಭಾನುವಾರ ಶ್ರೀನಿವಾಸ್ ಪ್ರಸಾದ್‌ರನ್ನು ಭೇಟಿ ಮಾಡುತ್ತೇನೆ. ಅವರು ಮೋದಿ ಕಾರ್ಯಕ್ರಮಕ್ಕೆ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement
Advertisement