For the best experience, open
https://m.hosakannada.com
on your mobile browser.
Advertisement

Pratap Simha Brother: ಪ್ರತಾಪ್‌ ಸಿಂಹ ತಮ್ಮ ವಿಕ್ರಂ ಸಿಂಹರಿಂದ ಬಿಗ್‌ ಅಪ್ಡೇಟ್‌; ಕಾಂಗ್ರೆಸ್‌ ಆರೋಪಕ್ಕೆ ಮುಟ್ಟಿ ನೋಡೋ ಹಾಗೆ ಉತ್ತರ ನೀಡಿದ ವಿಕ್ರಂ ಸಿಂಹ!!

10:15 AM Dec 26, 2023 IST | ಅಶ್ವಿನಿ ಹೆಬ್ಬಾರ್
UpdateAt: 10:15 AM Dec 26, 2023 IST
pratap simha brother  ಪ್ರತಾಪ್‌ ಸಿಂಹ ತಮ್ಮ ವಿಕ್ರಂ ಸಿಂಹರಿಂದ ಬಿಗ್‌ ಅಪ್ಡೇಟ್‌  ಕಾಂಗ್ರೆಸ್‌ ಆರೋಪಕ್ಕೆ ಮುಟ್ಟಿ ನೋಡೋ ಹಾಗೆ ಉತ್ತರ ನೀಡಿದ ವಿಕ್ರಂ ಸಿಂಹ
Image source: India today.in
Advertisement

Pratap Simha Brother: ಸಂಸತ್ ಮೇಲೆ ಸ್ಮೋಕ್ ಬಾಂಬ್ ದಾಳಿ ನಡೆಸಿದ ಪ್ರಕರಣದಲ್ಲಿ ಪ್ರತಾಪ್ ಸಿಂಹ(MP Pratap Simha )ಅವರು ನೇರ ಹೊಣೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಇದೀಗ, ಹಾಸನ ಜಿಲ್ಲೆಯ ನಂದಗೋಡನಹಳ್ಳಿ ಮರಗಳ ಮಾರಣಹೋಮ (Tree Cutting) ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ (MP Pratap Simha)ಅವರ ಸೋದರ ವಿಕ್ರಂ ಸಿಂಹ (Vikram Simha) ಅವರ ಮೇಲೆ ಕಾಂಗ್ರೆಸ್ ಆರೋಪ ಮಾಡಿತ್ತು. ಈ ಕುರಿತು ವಿಕ್ರಂ ಸಿಂಹ (Vikram Simha) ನ್ಯೂಸ್ 18 ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.

Advertisement

ಹಾಸನ ಜಿಲ್ಲೆಯಲ್ಲಿ ಮರ ಕಡಿದಿರುವುದಕ್ಕೂ ತನಗು ಯಾವುದೇ ರೀತಿಯ ಸಂಬಂಧವಿಲ್ಲ. ಅಷ್ಟೇ ಅಲ್ಲದೆ, ಪ್ರತಾಪ್ ಸಿಂಹ ಅವರ ತಮ್ಮ ಎಂಬುದನ್ನೇ ಕಾರಣವಾಗಿರಿಸಿ ತನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದು ರಾಜಕೀಯ ಪ್ರೇರಿತ ಬೆಳವಣಿಗೆ ಎಂದು ಆರೋಪ ಮಾಡಿರುವ ವಿಕ್ರಂ ಸಿಂಹ ನಾನು ಶುಂಠಿ ಬೆಳೆಯಲು ಜಾಗ ಕರಾರು ಮಾಡಿಕೊಂಡಿದ್ದ ಹಿನ್ನೆಲೆ ಜಾಗದ ಮಾಲೀಕರು ಮರಗಳನ್ನ ಕಡಿಸಿದ್ದಾರೆ. ಜನವರಿಯಿಂದ ನನ್ನ ಅಗ್ರಿಮೆಂಟ್ ಆರಂಭವಾಗುತ್ತವೆ. ಆದರೆ ಅದಕ್ಕೂ ಮೊದಲೇ ಮರಗಳನ್ನು ಕತ್ತರಿಸಲಾಗಿದೆ. ಹಾಗಾಗಿ, ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಕೆಪಿಸಿಸಿ ಸದಸ್ಯ ಯಾರೋ ನನ್ನ ಬಗ್ಗೆ ದೂರು ನೀಡಿದ್ದು, ನಾನು ಕೂಡ ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ ಎಂದು ವಿಕ್ರಂ ಸಿಂಹ ಹೇಳಿದ್ದಾರೆ.ಈ ಮೂಲಕ ಮರ ಕಡಿಸಿರುವುದಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದನ್ನೂ ವಿಕ್ರಂ ಸಿಂಹ ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಕಾಂಗ್ರೆಸ್ ನನಗೆ ಸಂಬಂಧ ಸೃಷ್ಟಿ ಮಾಡುತ್ತಿದ್ದು, ಇದ್ಯಾವೂದೂ ಪ್ರತಾಪ್ ಸಿಂಹ ಅವರ ರಾಜಕೀಯ ಜೀವನದ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಲು ಸಾಧ್ಯವಿಲ್ಲ. ನನ್ನ ವಿರುದ್ಧ ಕೆಲ ಸಮುದಾಯಗಳೂ ಕೆಲಸ ಮಾಡಿವೆ ಎಂದು ವಿಕ್ರಂ ಸಿಂಹ ಆರೋಪ ಮಾಡಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಆರೋಪ ಮಾಡಿದಂತೆ ಸಂಬಂಧವಿದ್ದಿದ್ದರೆ ಅರಣ್ಯ ಇಲಾಖೆ ಅಧಿಕಾರಿಗಳು ಎಫ್‌ಐಆರ್ ದಾಖಲಿಸುತ್ತಿದ್ದರು. ಕಾಂಗ್ರೆಸ್ ನವರು ಕೇವಲ ರಾಜಕೀಯವಾಗಿ ಈ ವಿಚಾರವನ್ನು ಬಳಸಿಕೊಂಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರುವಾಗ ನಾವು ಪ್ರಭಾವ ಬೀರಲು ಸಾಧ್ಯವೇ ಎಂದು ವಿಕ್ರಂ ಸಿಂಹ ಪ್ರಶ್ನಿಸಿದ್ದಾರೆ.

Advertisement

ಇದನ್ನು ಓದಿ: Cardomom: ಊಟದ ನಂತರ ನೀವೂ ಏಲಕ್ಕಿ ತಿನ್ನುತ್ತೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ!!!

Advertisement
Advertisement
Advertisement