ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Prajwal Revanna: ಪೆನ್ ಡ್ರೈವ್ ಪ್ರಜ್ವಲ್ ಅರೆಸ್ಟ್, ಮಧ್ಯರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಆದ ಸಂಸದ !

Prajwal Revanna: ಪ್ರಜ್ವಲ್ ನನ್ನು ತಡರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮರು ಕ್ಷಣವೇ ಎಸ್‌ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.
07:57 AM May 31, 2024 IST | ಸುದರ್ಶನ್
UpdateAt: 07:58 AM May 31, 2024 IST
Advertisement

Prajwal Revanna: ದೇಶದಲ್ಲಿ ತೀವ್ರ ಆಕ್ರೋಶ ಸೃಷ್ಟಿಸಿದ್ದ ಹಾಸನ ಸರಣಿ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ, ಹಾಸನದ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಕಡೆಗೂ ಪೊಲೀಸ್ ಪಾಲಾಗಿದ್ದಾರೆ. ಕಳೆದ ತಿಂಗಳು 26ನೇ ತಾರೀಕಿನಂದು ಲೋಕಸಭಾ ಚುನಾವಣೆ ನಡೆದ ನಂತರ ಭಾರತ ತೊರೆದು ವಿದೇಶದಲ್ಲಿ ಭೂಗತರಾಗಿದ್ದ ಪ್ರಜ್ವಲ್ ರೇವಣ್ಣ ಇದೀಗ ಬೆಂಗಳೂರಿಗೆ ಬಂದಿಳಿದಿದ್ದಾರೆ. ಪ್ರಜ್ವಲ್ ನನ್ನು ನಿನ್ನೆ ಗುರುವಾರ ತಡರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮರು ಕ್ಷಣವೇ ಎಸ್‌ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.

Advertisement

ಇದನ್ನೂ ಓದಿ: Mumbai: ಅಂಡರ್ ವರ್ಲ್ಡ್ ಡಾನ್ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

2900 ಪ್ಲಾಸ್ ಲೈಂಗಿಕ ದೌರ್ಜನ್ಯದ ಅಶ್ಲೀಲ ವಿಡಿಯೊಗಳು ಬಹಿರಂಗವಾಗಿವೆ ಎನ್ನುವ ಆಪಾದನೆಯ ಬೆನ್ನಲ್ಲೇ ಏ.26 ರಂದು ರಾತ್ರೋರಾತ್ರಿ ಜರ್ಮನಿಗೆ ಪಲಾಯನ ಮಾಡಿದ್ದರು ಪ್ರಜ್ವಲ್ ರೇವಣ್ಣ. ತದನಂತರ ಕಳೆದ 35 ದಿನಗಳಿಂದ ಅವರು ಭೂಗತರಾಗಿದ್ದು, ಹಲೋ, ದೇಶಗಳನ್ನು ಕ್ರಮಿಸಿದ್ದರು. ಮೊದಲು ದುಬೈ, ನಂತರ ಲಂಡನ್ ಅಲ್ಲಿಂದ ಜರ್ಮನಿಗೆ ಕ್ರೇನ್ ಮೂಲಕ ಪ್ರಯಾಣ ಹೀಗೆ ತಮ್ಮ ಇರುವು ಗುರುತಿಸಿ ಕೊಳ್ಳದಂತೆ ವಾಸ್ತವ್ಯ ಬದಲಿಸಿದ್ದ ಆತ ಮೊನ್ನೆ ಮೊನ್ನೆ, ಅಂದರೆ ಮೇ 27ರಂದು ವಿದೇಶದಿಂದಲೇ ಒಂದು ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಆತ ಶುಕ್ರವಾರ (ಮೇ 31) ರಾಜ್ಯಕ್ಕೆ ಮರಳಿ ಎಸ್‌ಐಟಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದರು. ಇದೀಗ ಹೇಳಿದಂತೆಯೇ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ರೇವಣ್ಣ ಇಳಿದಾಗಿದೆ. ತಕ್ಷಣ ಅವರನ್ನು ಎಸ್ಐಟಿ ಪೊಲೀಸರು ಸುತ್ತುವರಿದಿದ್ದಾರೆ.

Advertisement

ಇದನ್ನೂ ಓದಿ: Job Alert: ಭಾರತೀಯ ಸೇನೆಯಲ್ಲಿ ಉದ್ಯೋಗವಿದೆ! ಉತ್ತಮ ಸಂಬಳ ಕೂಡ

ಪ್ರಜ್ವಲ್ ರೇವಣ್ಣ ಶುಕ್ರವಾರ ರಾತ್ರಿ ಬರುವ ಸೂಚನೆ ಕೊಟ್ಟಂತೆ ಜರ್ಮನಿಯ ಮ್ಯೂನಿಚ್‌ನಿಂದ ಗುರುವಾರ ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ಲುಫ್ತಾನ್ನಾ ಏರ್‌ಲೈನ್ಸ್ ವಿಮಾನದಲ್ಲಿನ ಬ್ಯುಸಿನೆಸ್ ಕ್ಲಾಸ್ ನಲ್ಲಿ ಆತ ಟಿಕೆಟ್ ಕಾಯ್ದಿರಿಸಿದ್ದರು. ನಿನ್ನೆ ಸಂಜೆ ಭಾರತೀಯ ಕಾಲಮಾನದ ಪ್ರಕಾರ ಸಂಜೆ 4.05ಕ್ಕೆ ಮ್ಯೂನಿಚ್‌ನಿಂದ ಪ್ರಜ್ವಲ್ ರೇವಣ್ಣರನ್ನು ಹೊತ್ತ ವಿಮಾನ ತಡರಾತ್ರಿ 12.50 ಕ್ಕೆ ಬೆಂಗಳೂರಿಗೆ ಬಂದಿತ್ತು.

ಪ್ರಜ್ವಲ್‌ ರೇವಣ್ಣ ಬಂಧನದ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರಿನಲ್ಲಿ ಸಭೆ ನಡೆದಿತ್ತು. ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಅವರೊಂದಿಗೆ ಬೆಳಗ್ಗೆ ಸಭೆ ನಡೆಸಿದ್ದರು. ಯಾವುದೇ ಕಾನೂನು ಸಮಸ್ಯೆಯಾಗದಂತೆ ಭದ್ರತಾ ಕ್ರಮಗಳ ಕುರಿತು ಎಸ್‌ಐಟಿ ಅಧಿಕಾರಿಗಳ ಮನವಿಯಂತೆ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಇಂದು ಪೊಲೀಸರು ಅವರನ್ನು ತೀವ್ರ ತನಿಖೆಗೆ ಒಳಪಡಿಸುವ ಸಂಭವವಿದೆ.

Advertisement
Advertisement