ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Moss Cleaning Tips: ಮಳೆಗಾಲದಲ್ಲಿ ಪಾಚಿ ಕಟ್ಟಿದ ಮನೆ ಅಂಗಳವನ್ನ ಸ್ವಚ್ಛಗೊಳಿಸಲು ಇಲ್ಲಿದೆ ಸುಲಭ ಉಪಾಯ!

Moss Cleaning Tips: ಪಾಚಿ ತೆಗೆಯಲು ನೀವು ತುಂಬಾ ಕಷ್ಟ ಪಡಬೇಕಿಲ್ಲ. ಅದಕ್ಕಾಗಿ ಈ ಸಲಹೆಯನ್ನು ಅನುಸರಿಸಿದರೆ ಮಳೆಗಾಲದಲ್ಲಿ ಎಲ್ಲೆಂದರರಲ್ಲಿ ಕಾಣಿಸಿಕೊಳ್ಳುವ ಪಾಚಿಯನ್ನು ಸುಲಭವಾಗಿ ತೊಡೆದು ಹಾಕಬಹುದು.
07:13 PM Jul 15, 2024 IST | ಕಾವ್ಯ ವಾಣಿ
UpdateAt: 07:13 PM Jul 15, 2024 IST
Advertisement

Moss Cleaning Tips: ಮಳೆಗಾಲದಲ್ಲಿ ಸುರಿಯುವ ಮಳೆಗೆ ಎಲ್ಲೆಂದರಲ್ಲಿ ಪಾಚಿ ಕಟ್ಟಿಕೊಳ್ಳೋದು ಸರ್ವೇ ಸಾಮಾನ್ಯ. ಹಾಗಂತ ಅದನ್ನು ಹಾಗೇ ಬಿಡುವಂತಿಲ್ಲ. ಯಾಕೆಂದರೆ ಈ ಪಾಚಿ ಎಷ್ಟು ಡೇಂಜರ್ ಅಂದರೆ ಇದರ ಮೇಲೆ ಕಾಲಿಟ್ಟು ಬೀಳುವ ಸಾಧ್ಯತೆಯೇ ಹೆಚ್ಚು. ಬಿದ್ದು ಕೈ ಕಾಲು ಮುರಿದುಕೊಳ್ಳುವ ಪ್ರಮೇಯ ಬೇಡ ಎಂದು ಇದನ್ನು ಕ್ಲೀನಿಂಗ್ ಮಾಡೋಕೆ ಕೆಲವರು ಹರ ಸಾಹಸ ಪಡುತ್ತಾರೆ. ಆದ್ರೆ ಇನ್ಮುಂದೆ ಪಾಚಿ ತೆಗೆಯಲು ನೀವು ತುಂಬಾ ಕಷ್ಟ ಪಡಬೇಕಿಲ್ಲ. ಅದಕ್ಕಾಗಿ ಈ ಸಲಹೆಯನ್ನು ಅನುಸರಿಸಿದರೆ ಮಳೆಗಾಲದಲ್ಲಿ ಎಲ್ಲೆಂದರರಲ್ಲಿ ಕಾಣಿಸಿಕೊಳ್ಳುವ ಪಾಚಿಯನ್ನು ಸುಲಭವಾಗಿ (Moss Cleaning Tips) ತೊಡೆದು ಹಾಕಬಹುದು.

Advertisement

ಪಾಚಿಗಟ್ಟಿದ ನೆಲೆವನ್ನು ಸ್ವಚ್ಛಗೊಳಿಸಲು ನೀರು ಹಾಗೂ ಬ್ಲೀಚಿಂಗ್ ಪೌಡರ್ ಅನ್ನು ಬಳಸಬಹುದು. ಈ ಬ್ಲೀಚಿಂಗ್ ಪೌಡರ್ ಅನ್ನು ಪಾಚಿ ಇರುವ ಸ್ಥಳದಲ್ಲಿ ಹಾಕಿ, ಸ್ವಲ್ಪ ಸಮಯದ ನಂತರ ನೀರು ಹಾಕಿ ಗುಡಿಸಿದರೆ ಸ್ವಚ್ಛವಾಗುತ್ತದೆ.

ಇನ್ನು ಸುಣ್ಣದ ಚಿಪ್ಪನ್ನು ಒಂದು ಕಬ್ಬಿಣದ ಬಕೆಟ್‌ನಲ್ಲಿ ಹಾಕಿ ಬಿಸಿನೀರು ಬೆರೆಸಿದರೆ ಕುದಿಯಲು ಪ್ರಾರಂಭಿಸುತ್ತದೆ. ಇದನ್ನು ಪಾಚಿ ಕಚ್ಚಿದ ಜಾಗಕ್ಕೆ ಹಾಕಿ ಹಾಗೆಯೇ ಬಿಟ್ಟರೆ  ಮಳೆ ಬಂದಾಗ ಸುಣ್ಣದ ನೀರಿನೊಂದಿಗೆ ಪಾಚಿಯು ಕೊಚ್ಚಿಕೊಂಡು ಹೋಗುತ್ತದೆ.

Advertisement

ಕಾಂಪೌಂಡ್ ಅಥವಾ ಅಂಗಳವು ಪಾಚಿಗಟ್ಟಿದ್ದರೆ  ನೀರಿನ ಜೊತೆಗೆ ವಿನೆಗರ್ ಬೆರೆಸಿ, ವಿನೆಗರ್ ನ್ನು ಪಾಚಿ ಇರುವಲ್ಲಿಗೆ ಸ್ಪ್ರೇ ಮಾಡಿ,  ಸ್ವಲ್ಪ ಸಮಯದ ಬಿಟ್ಟು ಚೆನ್ನಾಗಿ ತೊಳೆಯಿರಿ.

ಅಥವಾ ಪಾಚಿ ಗಟ್ಟಿದ ಸ್ಥಳದಲ್ಲಿ ಪ್ರೆಷರ್‌ ವಾಶರ್ ನಿಂದ ನೀರು ಬಿಡುವುದರಿಂದ ನೆಲಕ್ಕೆ ಅಂಟಿಕೊಂಡಿರುವ ಪಾಚಿ ಸೇರಿದಂತೆ ಕೊಳೆಯು ಹೋಗುತ್ತದೆ.

ಪಾಚಿಗಟ್ಟಿದ ಜಾಗಕ್ಕೆ ವಿನೆಗರ್‌, ಬೇಕಿಂಗ್‌ ಸೋಡಾ, ಪುಡಿ ಉಪ್ಪು ನಂತರ ನಿಂಬೆರಸ ಹಾಕಿ ಸ್ವಲ್ಪ ಸಮಯಗಳ ಕಾಲ ಹಾಗೆಯೇ ಬಿಡಿ. ನಂತರ ಬಿಸಿ ನೀರಿನಿಂದ ತೊಳೆದರೆ ಪಾಚಿಯು ಹೋಗಿ ನೆಲವು ಸ್ವಚ್ಛವಾಗುತ್ತದೆ.

Rajya Sabha: ಮೋದಿ ಸರ್ಕಾರಕ್ಕೆ ಬಿಗ್ ಶಾಕ್, ರಾಜ್ಯಸಭೆಯಲ್ಲಿ NDA ಬಲ ಕುಸಿತ – ಇನ್ಮುಂದೆ ಸುಲಭವಲ್ಲ ಬಿಲ್ ಪಾಸ್ !!

Advertisement
Advertisement