For the best experience, open
https://m.hosakannada.com
on your mobile browser.
Advertisement

Mansoon Session: ಇಂದಿನಿಂದ ಮುಂಗಾರು ಅಧಿವೇಶನ ಶುರು - ಮಂಡನೆಯಾಗಲಿದೆ ಈ 6 ಮಸೂದೆಗಳು !!

Mansoon Session: ಇಂದಿನಿಂದ (22 ಸೋಮವಾರ) ಲೋಕಸಭೆ ಮುಂಗಾರು ಅಧಿವೇಶನ (Monsoon Session 2024) ಆರಂಭವಾಗಲಿದ್ದು, ಆಗಸ್ಟ್ 12ರ ವರೆಗೂ ನಡೆಯಲಿದೆ.
09:13 AM Jul 22, 2024 IST | ಸುದರ್ಶನ್
UpdateAt: 09:13 AM Jul 22, 2024 IST
mansoon session  ಇಂದಿನಿಂದ ಮುಂಗಾರು ಅಧಿವೇಶನ ಶುರು   ಮಂಡನೆಯಾಗಲಿದೆ ಈ 6 ಮಸೂದೆಗಳು
Advertisement

Mansoon Session: ಇಂದಿನಿಂದ (22 ಸೋಮವಾರ) ಲೋಕಸಭೆ ಮುಂಗಾರು ಅಧಿವೇಶನ (Monsoon Session 2024) ಆರಂಭವಾಗಲಿದ್ದು, ಆಗಸ್ಟ್ 12ರ ವರೆಗೂ ನಡೆಯಲಿದೆ. ಅಲ್ಲದೆ ಇದೇ ಅಧಿವೇಶನದಲ್ಲಿ ನೂತನ ಸರ್ಕಾರದ ಬಜೆಟ್ ಮಂಡನೆಯಾಗಲಿದ್ದು, ಜೊತೆಗೆ ಈ 6 ಮಸೂದೆಗಳು ಕೂಡ ಮಂಡನೆಯಾಗಳಿದೆ.

Advertisement

Krishi Honda: ಜಮೀನಿನಲ್ಲಿ ಕೃಷಿ ಹೊಂಡ ಹೊಂದಿರುವ ರೈತರಿಗೆಲ್ಲಾ ಬಂತು ಹೊಸ ರೂಲ್ಸ್ – ಸರ್ಕಾರದ ಖಡಕ್ ಆದೇಶ !!

ಹೌದು, ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ (PM Modi) ನೇತೃತ್ವದ ಸರ್ಕಾರದ 3ನೇ ಅವಧಿಯ ಮೊದಲ ಬಜೆಟ್ ಮಂಡನೆಯಾಗಲಿದ್ದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ (Nirmala Sitharaman) ಅವರು ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಮುಂಗಾರು ಅಧಿವೇಶನದಲ್ಲಿ
90 ವರ್ಷ ಹಳೆಯ ವೈಮಾನಿಕ ಕಾಯ್ದೆಗೆ ಬದಲು ಜಾರಿಗೆ ತರುವ 'ಭಾರತೀಯ ವಾಯುಯಾನ ಮಸೂದೆ’ ಸೇರಿ 6 ಮಸೂದೆಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ.

Advertisement

ಯಾವೆಲ್ಲಾ ಮಸೂದೆಗಳು ಮಂಡನೆಯಾಗಲಿದೆ?
ಲೋಕಸಭೆಯ ಸೆಕ್ರೆಟರಿಯೇಟ್ ಮಾಹಿತಿ ಪ್ರಕಾರ ಹಣಕಾಸು ಮಸೂದೆ, ವಿಪತ್ತು ನಿರ್ವಹಣಾ ಮಸೂದೆ, ಬಾಯ್ಲರ್‌ಗಳ ಮಸೂದೆ, ಭಾರತೀಯ ವಾಯುಯಾನ ವಿಧೇಯಕ ಮಸೂದೆ, ಕಾಫಿ (ಪ್ರಚಾರ ಮತ್ತು ಅಭಿವೃದ್ಧಿ) ಮಸೂದೆ, ರಬ್ಬರ್ (ಪ್ರಚಾರ ಮತ್ತು ಅಭಿವೃದ್ಧಿ) ಮಸೂದೆ ಮಂಡನೆಯಾಗಲಿದೆ.

Budget Halwa Ceremony: ಬಜೆಟ್ ಮಂಡನೆಗೂ ಮುನ್ನ ಹಲ್ವಾ ತಿನ್ನಿಸೋ ಸಮಾರಂಭ ನಡೆಯುವುದೇಕೆ? ಏನಿದು ಕೇಂದ್ರದ ಸಂಪ್ರದಾಯ!!

Advertisement
Advertisement
Advertisement