ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Money Making Tips: ಹೆಣ್ಣು ಮಗು ಹೆತ್ತವರಿಗೆ ಸಿಹಿ ಸುದ್ದಿ!

Money Making Tips: ಹೆಣ್ಣು ಮಗುವಿನ ಪೋಷಕರು ಪೋಸ್ಟ್ ಆಫೀಸ್ ಅಥವಾ ಆರ್‌ಬಿಐ ಅನುಮೋದಿತ ಬ್ಯಾಂಕ್‌ಗಳಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು. 
07:51 AM May 29, 2024 IST | ಕಾವ್ಯ ವಾಣಿ
UpdateAt: 09:25 AM May 29, 2024 IST
Advertisement

Money Making Tips: ಮಹಿಳೆಯರು ಸಮಾಜದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಯಾವುದೇ ರೀತಿಯಲ್ಲಿ ಹಿಂದುಳಿಯದಂತೆ ಪುರುಷರಂತೆ ಮಹಿಳೆಯರು ಸಬಲರಾಗಲು, ಸ್ವಾವಲಂಬಿಯಾಗಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಇದೀಗ 1000 ಠೇವಣಿಯೊಂದಿಗೆ ಸಲ್ಲಿಸುವ ಮೂಲಕ ಹೆಣ್ಣು ಮಗುವಿನ ಪೋಷಕರು ಪೋಸ್ಟ್ ಆಫೀಸ್ ಅಥವಾ ಆರ್‌ಬಿಐ ಅನುಮೋದಿತ ಬ್ಯಾಂಕ್‌ಗಳಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು.

Advertisement

ಇದನ್ನೂ ಓದಿ: Prajwal Revanna: 2 ಸಲ ಟಿಕೆಟ್ ಕ್ಯಾನ್ಸಲ್ ಮಾಡಿದ್ದ ಪ್ರಜ್ವಲ್ ಕೊನೆಗೂ ಮೇ 31ರಂದೇ ಭಾರತದತ್ತ ಹೊರಟಿದ್ದೇಕೆ?

ಆದರೆ ಅನೇಕ ಪೋಷಕರಿಗೆ ಈ ಹಣ ಉಳಿತಾಯ ಯೋಜನೆಯ (Money Making Tips) ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲ. ಅದಕ್ಕಾಗಿ ಇಲ್ಲಿ ಪೂರ್ಣ ಮಾಹಿತಿ ನೀಡಲಾಗಿದೆ. ಸುಕನ್ಯಾ ಸಮೃದ್ಧಿ ಖಾತೆಗೆ ಹೆಣ್ಣು ಮಕ್ಕಳು ಮಾತ್ರ ಅರ್ಹರು. ಖಾತೆ ತೆರೆಯುವ ಸಮಯದಲ್ಲಿ ಹೆಣ್ಣು ಮಗುವಿನ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇರಬೇಕು. SSY ಖಾತೆಯನ್ನು ತೆರೆಯುವಾಗ ಹೆಣ್ಣು ಮಗುವಿನ ವಯಸ್ಸಿನ ಪುರಾವೆ ಕಡ್ಡಾಯವಾಗಿದೆ.

Advertisement

ಇದನ್ನೂ ಓದಿ: Alia Assadi : ಅಂದು ಕಾಲೇಜಿಂದ ನನ್ನನ್ನು ಉಚ್ಛಾಟಿಸಿದ್ರಿ, ಇಂದು ಪಕ್ಷವೇ ನಿಮ್ಮನ್ನು ಉಚ್ಛಾಟಿಸಿದೆ - ರಘುಪತಿ ಭಟ್ಗೆ ಕರ್ಮ ರಿಟರ್ನ್ಸ್ ಎಂದ ಅಲಿಯಾ

2019 ರ ನಿಯಮಗಳ ಪ್ರಕಾರ, ಖಾತೆ ತೆರೆಯುವ ದಿನಾಂಕದಿಂದ 15 ವರ್ಷಗಳವರೆಗೆ SSY ಖಾತೆಯಲ್ಲಿ ಠೇವಣಿ ಮಾಡಬಹುದು. SSY ಖಾತೆಯನ್ನು ತೆರೆಯುವ ದಿನಾಂಕದಂದು 10 ವರ್ಷಗಳನ್ನು ಪೂರೈಸದ ಹುಡುಗಿಯರ ಹೆಸರಿನಲ್ಲಿ ಪೋಷಕರು ತೆರೆಯಬಹುದು.

ನಿಮ್ಮ ಮಗುವಿಗೆ 9 ವರ್ಷ ವಯಸ್ಸಾಗಿದ್ದಾಗ ನೀವು SSY ಖಾತೆಯನ್ನು ತೆರೆದರೆ, ನೀವು 15 ವರ್ಷಗಳವರೆಗೆ ಖಾತೆಯಲ್ಲಿ ಜಮಾ ಮಾಡಬಹುದು. ಖಾತೆಯು 21 ವರ್ಷಗಳ ನಂತರ ಪಕ್ವವಾಗುತ್ತದೆ. ಅಂದರೆ ಹೆಣ್ಣು ಮಗುವಿಗೆ 9 ವರ್ಷವಾದಾಗ ಖಾತೆಯನ್ನು ತೆರೆದರೆ 21 ವರ್ಷಗಳ ನಂತರ ಖಾತೆಯು ಪಕ್ವವಾಗುತ್ತದೆ. ಅಂದರೆ ಹುಡುಗಿಗೆ 30 ವರ್ಷ ತುಂಬಿದಾಗ ಮೆಚ್ಯೂರಿಟಿ ಮೊತ್ತವನ್ನು ಪಡೆಯಬಹುದು.

ಪ್ರಸ್ತುತ, ಐಟಿ ಕಾಯಿದೆ, 1961 ರ ಸೆಕ್ಷನ್ 80 ಸಿ ಅಡಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯಲ್ಲಿ ಠೇವಣಿ ಮಾಡಿದ ಯಾವುದೇ ಮೊತ್ತವು ಗರಿಷ್ಠ ರೂ. 1.5 ಲಕ್ಷಕ್ಕೆ ತೆರಿಗೆ ವಿನಾಯಿತಿ ಇದೆ.

ಈ ಯೋಜನೆಯು 8.2 ಶೇಕಡಾ ಬಡ್ಡಿಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ನೀವು ಕನಿಷ್ಟ ರೂ.250 ರಿಂದ ರೂ.1.5 ಲಕ್ಷ ಹೂಡಿಕೆಯೊಂದಿಗೆ ಖಾತೆಯನ್ನು ತೆರೆಯಬಹುದು.

ಖಾತೆಯನ್ನು ತೆರೆದ ದಿನಾಂಕದಿಂದ 21 ವರ್ಷಗಳು ಠೇವಣಿ ಅವಧಿಯನ್ನು ನಿಗದಿ ಮಾಡಲಾಗುತ್ತದೆ ಮತ್ತು

ಠೇವಣಿಯ ಗರಿಷ್ಠ ಅವಧಿಯಾಗಿ ಖಾತೆಯನ್ನು ತೆರೆದ ದಿನಾಂಕದಿಂದ 15 ವರ್ಷಗಳಿಗೆ ನಿಗದಿ ಮಾಡಲಾಗುತ್ತದೆ. ಹಾಗೂ ಠೇವಣಿ ಮೇಲಿನ ಬಡ್ಡಿಯ ದರವನ್ನು ಭಾರತ ಸರ್ಕಾರವು ತ್ರೈಮಾಸಿಕ ಆಧಾರದ ಮೇಲೆ ಘೋಷಿಸುತ್ತದೆ.

Related News

Advertisement
Advertisement