For the best experience, open
https://m.hosakannada.com
on your mobile browser.
Advertisement

Rahul Gandhi: ರಾಹುಲ್ ಪಾದಯಾತ್ರೆ ಸಂದರ್ಭ ಮೋದಿ, ಜೈ ಶ್ರೀರಾಮ್ ಘೋಷಣೆ: ಸಿಟ್ಟಿಗೆದ್ದು ರಾಹುಲ್ ಗಾಂಧಿ ಮಾಡಿದ್ದೇನು ಗೊತ್ತೇ??

10:01 AM Jan 22, 2024 IST | ಅಶ್ವಿನಿ ಹೆಬ್ಬಾರ್
UpdateAt: 10:37 AM Jan 22, 2024 IST
rahul gandhi  ರಾಹುಲ್ ಪಾದಯಾತ್ರೆ ಸಂದರ್ಭ ಮೋದಿ  ಜೈ ಶ್ರೀರಾಮ್ ಘೋಷಣೆ  ಸಿಟ್ಟಿಗೆದ್ದು ರಾಹುಲ್ ಗಾಂಧಿ ಮಾಡಿದ್ದೇನು ಗೊತ್ತೇ
Advertisement

Rahul Gandhi: ಭಾರತ್ ಜೊಡೋ ನ್ಯಾಯ ಯಾತ್ರೆಯ(Bharat Jodo Nyaya Yatra) ಸಂದರ್ಭ ಕೆಲವು ಬಿಜೆಪಿ ಕಾರ್ಯಕರ್ತರು ಜೈಶ್ರೀರಾಮ್ ಮತ್ತು ನರೇಂದ್ರ ಮೋದಿಗೆ(Narendra Modi)ಜೈಕಾರ ಕೂಗಿದ ಘಟನೆ ಭಾನುವಾರ ನಡೆದಿದೆ.ಇದರಿಂದ ಸಿಟ್ಟಿಗೆದ್ದ ರಾಹುಲ್ ಬಸ್ ನಿಲ್ಲಿಸಲು ಹೇಳಿದ್ದು, ಇದಾದ ಬಳಿಕ ತಾವೇ ಆವೇಶದಿಂದ ಕೆಳಗಿಳಿದು ಘೋಷಣೆ ಕೂಗಿದವರತ್ತ ನುಗ್ಗಿ ಹೋಗಿದ್ದಾರೆ.

Advertisement

ಇದನ್ನೂ ಓದಿ: Mysore : ಮೈಸೂರಲ್ಲಿ ಸಂಸದ ಪ್ರತಾಪ್ ಸಿಂಹ ಮೇಲೆ ಮುತ್ತಿಗೆ - ಚಳಿಬಿಡಿಸಿದ ಮತದಾರ ಪ್ರಭುಗಳು !! ವಿಡಿಯೋ ವೈರಲ್

ಈ ಸಂದರ್ಭ ಪೊಲೀಸರು ಘೋಷಣೆ ಕೂಗಿದವರು ಮತ್ತು ರಾಹುಲ್ ನಡುವೆ ಗಲಾಟೆ ನಡೆಯದಂತೆ ಮತ್ತು ಪರಿಸ್ಥಿತಿ ಕೈ ಮೀರಿ ಹೋಗದಂತೆ ಕ್ರಮ ಕೈಗೊಂಡಿದ್ದಾರೆ. ಇದಾದ ಬಳಿಕ ಕೊಂಚ ತಣ್ಣಗಾದ ರಾಹುಲ್‌ ಬಿಜೆಪಿ ಕಾರ್ಯಕರ್ತರತ್ತ ಫ್ಲಯಿಂಗ್ ಕಿಸ್ ಕೊಟ್ಟು ಮುಂದೆ ತೆರಳಿದ್ದಾರೆ ಎನ್ನಲಾಗಿದೆ.ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿದ ರಾಹುಲ್, 'ನಾವು ಎಲ್ಲೆಡೆಯೂ ಪ್ರೀತಿ, ಸಹನೆಯ ಅಂಗಡಿ(ಪ್ರೇಮ್ ಕಿ ದುಕಾನ್) ತೆರೆದು ಶಾಂತಿ ಸೌಹಾರ್ದತೆಯನ್ನು ಪಸರಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.

Advertisement

ಸಾರ್ವಜನಿಕ ಭಾಷಣದಲ್ಲಿ ಈ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದು, 'ನಾನು ಬಸ್‌ನಿಂದ ಕೆಳಗಿಳಿದುದನ್ನು ನೋಡಿ ದೊಣ್ಣೆ ಹಿಡಿದುಕೊಂಡು ಘೋಷಣೆ ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರು ಹೆದರಿ ಪಲಾಯನ ಮಾಡಿದ್ದಾರೆ. ಈ ಘಟನೆಯಿಂದ ನಾವು ಯಾರಿಗೂ ಹೆದರುವುದಿಲ್ಲ' ಎಂದು ಟಾಂಗ್ ನೀಡಿದ್ದಾರೆ.

Advertisement
Advertisement
Advertisement