For the best experience, open
https://m.hosakannada.com
on your mobile browser.
Advertisement

Modi Road Show Mangalore: ಮೋದಿ ರೋಡ್‌ ಶೋ ರೂಟ್‌ ಮ್ಯಾಪ್‌ ಸಿದ್ಧ; ಇಲ್ಲಿದೆ ಮಾರ್ಗಸೂಚಿ

Modi Road Show Mangalore: ಏಪ್ರಿಲ್ 14 ಸಂಜೆ 5ರಿಂದ ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಲಾಲಾಭಾಗ್-ಪಿವಿಎಸ್- ಕೆಎಸ್ ರಾವ್ ರಸ್ತೆ -ಟೌನ್‌ಹಾಲ್‌ವರೆಗೆ ರೋಡ್‌ ಶೋ
03:46 PM Apr 10, 2024 IST | ಸುದರ್ಶನ್
UpdateAt: 03:56 PM Apr 10, 2024 IST
modi road show mangalore  ಮೋದಿ ರೋಡ್‌ ಶೋ ರೂಟ್‌ ಮ್ಯಾಪ್‌ ಸಿದ್ಧ  ಇಲ್ಲಿದೆ ಮಾರ್ಗಸೂಚಿ
Image Credit:NDTV
Advertisement

Modi Road Show Mangalore: ಎ.14 ರಂದು ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋನ ರೂಟ್‌ ಮ್ಯಾಪ್‌ ಸಿದ್ಧಗೊಂಡಿದೆ. ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಹಂಪನಕಟ್ಟೆವೆರೆಗೆ ಮೆಗಾ ರೋಡ್‌ ಶೋ ನಡೆಯಲಿದೆ.

Advertisement

ಎ.14 ರಂದು ಮಂಗಳೂರಿನಲ್ಲಿ ಮೋದಿ ಹವಾ; ರೋಡ್‌ ಶೋ ಮಾಡಲು ನಿರ್ಧಾರ, ಸಮಾವೇಶ ರದ್ದು

ಎ.14 ರ ಸಂಜೆ 5ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಆರಂಭವಾಗಲಿದೆ. ಲೇಡಿಹಿಲ್ ನಾರಾಯಣ ಗುರು ಸರ್ಕಲ್‌ನಿಂದ ಮೋದಿ ರೋಡ್‌ ಶೋ ಆರಂಭವಾಗಲಿದೆ. 5 ಗಂಟೆಗೆ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅನಂತರ ರೋಡ್‌ ಶೋ ಪ್ರಾರಂಭವಾಗಲಿದೆ.

Advertisement

ಇದನ್ನೂ ಓದಿ: ಪಾಳುಬಾವಿಗೆ ಬಿದ್ದ ಬೆಕ್ಕನ್ನು ರಕ್ಷಣೆ ಮಾಡಲು ಹೋದ ಐವರು ಸಾವು

‌ಇಲ್ಲಿಂದ ನಂತರ ಲಾಲ್‌ಬಾಲ್‌ ನ ಮಂಗಳೂರು ಪಾಲಿಕೆ ಕಚೇರಿ ಮುಂದೆ ಹೋಗಲಿದೆ. ಅನಂತರ ಬಳ್ಳಾಲ್‌ ಭಾಗ್‌ ದಾಟಿ ಎಂಜಿ ರಸ್ತೆಯಲ್ಲಿ ಸಾಗಲಿರೋ ರೋಡ್‌ ಶೋ ಪಿವಿಎಸ್‌ ಸರ್ಕಲ್‌ ಬಳಿ ಬಲಕ್ಕೆ ತಿರುಗಿ ನವಭಾರತ್‌ ಸರ್ಕಲ್‌ ತಲುಪಲಿದೆ. ನಂತರ ಕೆ.ಎಸ್‌.ರಾವ್‌ ರಸ್ತೆ ಮೂಲಕ ಸಾಗಿ ಹಂಪನಕಟ್ಟೆ ಸಿಗ್ನಲ್‌ ಬಳಿ ರೋಡ್‌ ಶೋ ಸಮಾಪ್ತಿಗೊಳ್ಳಲಿದೆ. 25 ಕಿ.ಮೀ. ಪ್ರಯಾಣದ ರೋಡ್‌ ಶೋ ಇದಾಗಿದೆ.

ಇದನ್ನೂ ಓದಿ: ನಡು ರಸ್ತೆಯಲ್ಲೇ ಹೆಂಡತಿಗೆ ಕಂದಿಲಿ ಆಯುಧದಿಂದ ಮಾರಣಾಂತಿಕ ಹಲ್ಲೆ ಮಾಡಿದ ಪತಿ; ಬೆಚ್ಚಿ ಬಿದ್ದ ಸಾರ್ವಜನಿಕರು

Advertisement
Advertisement
Advertisement