For the best experience, open
https://m.hosakannada.com
on your mobile browser.
Advertisement

Lalu Prasad Yadav: ಆಗಸ್ಟ್ ವೇಳೆಗೆ ಮೋದಿ ಸರ್ಕಾರ ಪತನ, ಯಾವಾಗ ಬೇಕಾದರೂ ನಡೆಯಬಹುದು ಚುನಾವಣೆ- ಏನಿದು ಶಾಕಿಂಗ್ ನ್ಯೂಸ್ !!

11:43 PM Jul 05, 2024 IST | ಸುದರ್ಶನ್
UpdateAt: 11:46 PM Jul 05, 2024 IST
lalu prasad yadav  ಆಗಸ್ಟ್ ವೇಳೆಗೆ ಮೋದಿ ಸರ್ಕಾರ ಪತನ  ಯಾವಾಗ ಬೇಕಾದರೂ ನಡೆಯಬಹುದು ಚುನಾವಣೆ  ಏನಿದು ಶಾಕಿಂಗ್ ನ್ಯೂಸ್
Advertisement

Lalu Prasad Yadav: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಮೈತ್ರಿ ಸರ್ಕಾರವು ಆಗಸ್ಟ್ ವೇಳೆಗೆ ಪತನವಾಗುತ್ತದೆ ಎಂದು ಲಾಲು ಪ್ರಸಾದ್ ಯಾದವ್ ಅವರು ಸ್ಫೋಟಕ ಭವಿಷ್ಯವನ್ನು ನೋಡಿದಿದ್ದಾರೆ.

Advertisement

ಹೌದು, ಬಿಹಾರದ ಮಾಜಿ ಮುಖ್ಯಮಂತ್ರಿ(Bihar Formar CM )ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್(Lalu Prasad Yadav) ಅವರು ಕಳೆದ ತಿಂಗಳು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಆಗಸ್ಟ್‌ ವೇಳೆಗೆ ಪತನವಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ(Parliament Election) 300 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ಬಿಜೆಪಿ(BJP) 240 ಸ್ಥಾನಗಳಿಗೆ ಸೀಮಿತವಾಯಿತು. ಹೀಗಾಗಿ ಸಮ್ಮಿಶ್ರ ಸರ್ಕಾರ ರಚಿಸಲು ಮೈತ್ರಿ ಪಾಲುದಾರರನ್ನು ಅವಲಂಬಿಸಬೇಕಾಯಿತು. ಆದರೆ ಈ ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ಒಂದು ತಿಂಗಳೊಳಗೆ ಅತ್ಯಂತ ದುರ್ಬಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Advertisement

ಅಲ್ಲದೆ ದೇವದ ಎಲ್ಲಾ ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಿ, ಈ ಬಗ್ಗೆ ನಾನು ಮನವಿ ಮಾಡುತ್ತೇನೆ, ಏಕೆಂದರೆ ಯಾವುದೇ ಸಮಯದಲ್ಲಿ ಬೇಕಾದರೂ ಚುನಾವಣೆ ನಡೆಯಬಹುದು. ದೆಹಲಿಯಲ್ಲಿ ಮೋದಿ ಸರ್ಕಾರವು ತುಂಬಾ ದುರ್ಬಲವಾಗಿದೆ ಮತ್ತು ಆಗಸ್ಟ್ ವೇಳೆಗೆ ಅದು ಬೀಳಬಹುದು ಎಂದು ಅಚ್ಚರಿ ಭವಿಷ್ಯ ನುಡಿದ್ದಾರೆ.

Advertisement
Advertisement
Advertisement