ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mobile cleaning tips: ಮೊಬೈಲ್ ಸ್ವಚ್ಛ ಮಾಡುವಾಗ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ !!

02:34 PM Jan 10, 2024 IST | ಹೊಸ ಕನ್ನಡ
UpdateAt: 02:34 PM Jan 10, 2024 IST
Advertisement

Mobile cleaning tips: ಆಧುನಿಕ ಜಗತ್ತಿಗೆ ಹೊಂದಿಕೊಂಡಿರುವ ನಾವು ಇಂದು ಮೊಬೈಲ್ ಫೋನ್ ಬಿಟ್ಟು ಇರದ ಪರಿಸ್ಥಿತಿಗೆ ಬಂದಿದ್ದೇವೆ. ಅದನ್ನು ನಮ್ಮ ಜೀವನದ ಒಂದು ಅಂಗವಾಗೆ ಮಾಡಿಕೊಂಡಿದ್ದು, ಆ ಫೋನ್ ಗೆ ಏನಾದರೂ ಆದರೆ ನಮಗೇ ಏನೋ ಆಯಿತೆನ್ನುವಂತೆ ಒದ್ದಾಡುತ್ತೇವೆ. ಹೀಗಿರುವಾಗ ಕೆಲವೊಮ್ಮೆ ಈ ಫೋನ್ ಜೊತೆ ಜವಾಬ್ದಾರಿ ಮರೆತು ವರ್ತಿಸುತ್ತೇವೆಹ ಅಂದರೆ ಅದನ್ನು ಸ್ವಚ್ಛ ಮಾಡುವಾಗ ಒಟ್ಟಾರೆ ಮಾಡುವುದು, ಹೇಗೆ ಬೇಕು ಹಾಗೆ ಇಟ್ಟುಕೊಳ್ಳುವುದು ಮಾಡುತ್ತೇವೆ. ಆದರೆ ಇನ್ಮುಂದೆ ಮೊಬೈಲ್ ಫೋನ್ ಸ್ವಚ್ಛ ಮಾಡುವಾಗ(Mobile cleaning tips) ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ.

Advertisement

• ಯಾವ ಲಿಕ್ವಿಡ್ ಗಳಿಂದಲೂ ಫೋನ್ ಅನ್ನು ಸ್ವಚ್ಛ ಮಾಡಬೇಡಿ :

ನೀವು ಯಾವುದಾದರೂ ದ್ರವ ಅಥವಾ ಲಿಕ್ವಿಡ್ ಬಳಸಿ ಮೊಬೈಲ್ ಕ್ಲೀನ್ ಮಾಡೋದ್ರಿಂದ ನಿಮ್ಮ ಫೋನಿನ ಸ್ಪೀಕರ್ಗಳು ಮತ್ತು ಮೈಕ್ ಅನ್ನು ಹಾನಿಗೊಳಿಸಬಹುದು. ನಿಮ್ಮ ಫೋನ್ ಐಪಿ ರೇಟಿಂಗ್ ನೊಂದಿಗೆ ಬರದಿದ್ದರೆ ನಿಮ್ಮ ಫೋನ್ ಹಾನಿಗೊಳಗಾಗಬಹುದು. ಅಲ್ಲದೆ ಅದು ಮೊಬೈಲ್ ಒಳಗೆ ಹೋಗಿ ಅದರ ಎಲೆಕ್ಟ್ರಾನಿಕ್ ಭಾಗಗಳನ್ನು ಹಾನಿಗೊಳಿಸಬಹುದು.

Advertisement

• ಗಟ್ಟಿಯಾದ ವಸ್ತುಗಳಿಂದ ಕ್ಲೀನ್ ಮಾಡಬೇಡಿ:

ಸ್ಮಾರ್ಟ್ ಫೋನ್ ಪರದೆ ಅಥವಾ ಹಿಂಭಾಗದ ಕವರ್ ಅನ್ನು ಎಂದಿಗೂ ಗಟ್ಟಿಯಾದ ವಸ್ತುವಿನಿಂದ ಸ್ವಚ್ಛಗೊಳಿಸಬೇಡಿ. ಯಾಕೆಂದರೆ ಈ ವಸ್ತುಗಳು ಮೊಬೈಲ್ ನ ಕವರ್ ಅಥವಾ ಸ್ಕ್ರೀನ್ ಅನ್ನು ಗೀರಿ ಹಾಕಬಹುದು. ಅಂದರೆ ಸ್ಕ್ರಾಚ್ ಆಗಬಹುದು. ಇದರಿಂದ ನಿಮ್ಮ ಫೋನ್ ನ ಹೊಳಪನ್ನು ತೆಗೆದುಹಾಕುತ್ತದೆ. ಧೂಳು ಹೆಚ್ಚಾಗಿ ಮೊಬೈಲ್ ಒಳಗೆ ಹೋಗುತ್ತದೆ ಮೊಬೈಲ್ ಹಾಳಾಗುತ್ತದೆ.

• ಯಾವುದೇ ಚೂಪಾದ ಪಿನ್ ಗಳನ್ನು ಬಳಸಬೇಡಿ

ಸ್ಪೀಕರ್ ಅಥವಾ ಮೈಕ್ರೊಫೋನ್ನಲ್ಲಿ ಸಿಕ್ಕಿಬಿದ್ದ ಧೂಳು ಅಥವಾ ಕೊಳೆಯನ್ನು ಸ್ವಚ್ಛಗೊಳಿಸಲು ಜನರು ಚೂಪಾದ ವಸ್ತುಗಳನ್ನು ಬಳಸುತ್ತಾರೆ. ಯಾವುದೇ ಸಮಯದಲ್ಲಿ ಪಿನ್ ಬಳಸುವುದರಿಂದ ಸ್ಪೀಕರ್ ಅಥವಾ ಮೈಕ್ರೊಫೋನ್ ಡಯಾಫ್ರಮ್ ಸ್ಫೋಟಗೊಳ್ಳಬಹುದು.

• ಮೃದುವಾದ ಬಟ್ಟೆಗಳನ್ನು ಬಳಸಿ

ಮೊಬೈಲ್ ಫೋನ್ ಪರದೆ ಕೊಳಕಾದಾಗ, ಅನೇಕ ಜನರು ಅದರ ಮೇಲೆ ನೀರನ್ನು ಸುರಿಯುವ ಮೂಲಕ ಅಥವಾ ಬಟ್ಟೆಯಿಂದ ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ. ಅಂತಹ ತಪ್ಪನ್ನು ಯಾರೂ ಮಾಡಬಾರದು. ಮೊಬೈಲ್ ಫೋನ್ ನ ಪರದೆಯನ್ನು ಯಾವಾಗಲೂ ಮೈಕ್ರೋಫೈಬರ್ ಬಟ್ಟೆಯಿಂದ ಸ್ವಚ್ಛಗೊಳಿಸಬೇಕು. ಇದು ಪರದೆಯನ್ನು ಗೀಚುವುದಿಲ್ಲ ಮತ್ತು ಪರದೆಯ ನಯತೆಯನ್ನು ಕಾಪಾಡಿಕೊಳ್ಳುತ್ತದೆ. ಮೈಕ್ರೋಫೈಬರ್ ನಿಂದ ಸ್ವಚ್ಛಗೊಳಿಸಿದಾಗಲೂ ಮೊಬೈಲ್ ಫೋನ್ ನ ಹೊಳಪು ಹಾಗೇ ಇರುತ್ತದೆ.

• ಭಾರವಾದ ರಾಸಾಯನಿಕಗಳನ್ನು ಬಳಸಬೇಡಿ.

ರಾಸಾಯನಿಕಗಳು ಮೊಬೈಲ್ ನ ಕವರ್ ಅಥವಾ ಪರದೆಯನ್ನು ಹಾನಿಯುಂಟುಮಾಡುತ್ತದೆ. ಯಾವುದೇ ರಾಸಾಯನಿಕದಿಂದ ಮೊಬೈಲ್ ಫೋನ್ ಅನ್ನು ಸ್ವಚ್ಛಗೊಳಿಸುವಾಗ, ಅದು ಸುಂದರವಾಗಿ ಕಾಣುತ್ತದೆ, ಆದರೆ ರಾಸಾಯನಿಕಗಳ ಬಳಕೆಯು ಮೊಬೈಲ್ ನ ಬಣ್ಣವನ್ನು ಮಸುಕಾಗಿಸುತ್ತದೆ. ಹೀಗಾಗಿ ತಪ್ಪಿಯೂ ರಾಸಾಯನಿಕ ವಸ್ತು ಬಳಸಬೇಡಿ.

Advertisement
Advertisement