Pradeep Eshwar: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ಪತ್ರ ವೈರಲ್, ಮಾತಿಗೆ ತಪ್ಪದ ಮಗ ಅಂದ್ರೆ ಪ್ರದೀಪ್ ಈಶ್ವರ್ ?!
Pradeep Eshwar : ತಮ್ಮ ವಿರೋಧಿ ಡಾ.ಕೆ.ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ವಿಧಾನಸಭೆ ವ್ಯಾಪ್ತಿಯಲ್ಲಿ ಒಂದು ಮತ ಹೆಚ್ಚು ಬಂದರೆ ರಾಜೀನಾಮೆ ಕೊಡುವೆ ಎಂದು ಪ್ರದೀಪ್ ಈಶ್ವರ್ ಹೇಳಿಕೆ ನೀಡಿದ್ದರು. ಆದರೆ ಮೊನ್ನೆ ಬಂದ ಲೋಕಸಭಾ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಹೆಚ್ಚು ಲೀಡ್ ಪಡೆದಿದ್ದಾರೆ. ಸದ್ಯ ಸುಧಾಕರ್ ರವರ ರಾಜೀನಾಮೆ ಪತ್ರ ವೈರಲ್ ಆಗುತ್ತಿದೆ.
ಫಲಿತಾಂಶ ಬೆನ್ನಲ್ಲೆ ಶಾಸಕ ಪ್ರದೀಪ್ ಈಶ್ವರ್ ಹೆಸರಿನ ರಾಜೀನಾಮೆ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ಗೆ ಕಾಂಗ್ರೆಸ್‌ಗಿಂತ 1 ಮತ ಹೆಚ್ಚು ಬಂದರೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು ಪ್ರದೀಪ್ ಈಶ್ವರ್. ಹಾಗಾಗಿ ಪ್ರದೀಪ್ ಈಶ್ವರ ರಾಜೀನಾಮೆ ನೀಡಿರಲು ಬಹುದು ಎನ್ನುವ ವಾದವೊಂದು ಇತ್ತು. ಇದೀಗ ಈ ಪತ್ರ ನಕಲಿ ಎಂದು ಶಾಸಕ ಪ್ರದೀಪ್ ಈಶ್ವರ್ ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ರನ್ನು ಗೆಲ್ಲೋದಕ್ಕೆ ಬಿಡಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅವರು ಒಂದೇ 1 ಮತ ಲೀಡ್ ಪಡೆದರೂ ನಾನು ರಾಜೀನಾಮೆಗೆ ಸಿದ್ಧ ಎಂದು ಹಲವಾರು ಬಾರಿ ಅವರು ಹೇಳಿದ್ದರು. ಸದ್ಯ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಂದಲ್ಲ, ನೂರಲ್ಲ, ಸಾವಿರವಲ್ಲ, ಬರೋಬ್ಬರಿ 20 ಸಾವಿರಕ್ಕೂ ಹೆಚ್ಚು ಮತಗಳ ಲೀಡನ್ನು ಡಾ.ಕೆ.ಸುಧಾಕರ್ ಪಡೆದಿದ್ದಾರೆ. ಹೀಗಾಗಿ ಕ್ಷೇತ್ರದ ತುಂಬೆಲ್ಲಾ ಪ್ರದೀಪ್ ಈಶ್ವರ್ ರಾಜೀನಾಮೆ ಎಲ್ಲಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಆದರೆ ಇದುವರೆಗೂ ಶಾಸಕ ಪ್ರದೀಪ್ ಈಶ್ವರ್ ಈ ರಾಜೀನಾಮೆ ಸುದ್ದಿಗೆ ಪ್ರತಿಕ್ರಿಯೆ ಕೊಟ್ಟಿಲ್ಲ.
ಇದನ್ನೂ ಓದಿ: Parliment Election : ಬಿಜೆಪಿ ಸೋಲಿನ ಪ್ರಮುಖ ಕಾರಣಗಳಿವು !!
ವೈರಲ್ ರಾಜೀನಾಮೆಯಲ್ಲಿ ಏನಿದೆ?
ರಾಜೀನಾಮೆ ಪತ್ರದಲ್ಲಿ 'ಇವರಿಗೆ ಎಂದು ವಿಧಾನಸಭಾಧ್ಯಕ್ಷ ಯುಟಿ ಖಾದರ್ ಅವರ ಹೆಸರು ಉಲ್ಲೇಖಿಸಲಾಗಿದೆ. "ಕೊಟ್ಟ ಮಾತನ್ನು, ಇಟ್ಟ ಹೆಜ್ಜೆ ತಪ್ಪಬಾರದು" ಎಂಬ ನಿಯಮವನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದವನು ನಾನು. ಸುಧಾಕರ್ ಅವರಿಗೆ ಸವಾಲು ಹಾಕಿದ್ದೆ. ಈ ಹಿಂದೆ ಆಡಿದ ಮಾತಿಗೆ ಬದ್ಧನಾಗಿ ರಾಜೀನಾಮೆ ನೀಡುತ್ತೇನೆ " ಎಂದು ಪ್ರದೀಪ್ ಈಶ್ವರ್ ಹೇಳಿದಂತೆ ಬರೆದು ಕೆಳಗೆ ಸಹಿ ಇದೆ.
ನಕಲಿ ಪತ್ರ ಎಂದು ಸ್ಪಷ್ಟನೆ
ಈ ಪತ್ರ ನಕಲಿ ಎಂದು ಶಾಸಕ ಪ್ರದೀಪ್ ಈಶ್ವರ್ ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಆದರೆ, ಸವಾಲಿನ ಬಗ್ಗೆ ಮಾತನಾಡದೆ ಗಪ್ ಚುಪ್ ಆಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರದೀಪ್ ವಿರುದ್ಧ ಹೀನಾಯವಾಗಿ ಸೋತಿದ್ದ ಮಾಜಿ ಸಚಿವ ಸುಧಾಕರ್ ರನ್ನು ಲೋಕಸಭೆಯಲ್ಲಿ ಮತದಾರ ಕೈ ಹಿಡಿದಿದ್ದಾನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ 10,642 ಮತಗಳ ಅಂತರದಿಂದ ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ ವಿರುದ್ಧ ಸೋತಿದ್ದರು. ಆದರೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್ ಅವರಿಗೆ ಈ ಬಾರಿ 20,941 ಮತಗಳ ಅಂತರ ಸಿಕ್ಕಿದ್ದು, ಕ್ಷೇತ್ರದ ಮತದಾರ ಅವರ ಕೈ ಹಿಡಿದಿದ್ದಾನೆ.
ಶಕ್ತಿ ತುಂಬದ ಕಾಂಗ್ರೆಸ್ ಶಾಸಕರು
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಒಟ್ಟು 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಆದರೆ ಕಾಂಗ್ರೆಸ್ ಶಾಸಕರಿರುವ ಹೊಸಕೋಟೆಯಲ್ಲಿ 2304, ಬಾಗೇಪಲ್ಲಿಯಲ್ಲಿ 1300 ಮತಗಳ ಅಂತರದ ಲೀಡ್ ಕಾಂಗ್ರೆಸ್ ಗೆ ಸಿಕ್ಕಿದೆ. ಅದು ಬಿಟ್ರೆ ಉಳಿದಂತೆ ಗೌರಿಬಿದನೂರಲ್ಲಿ ಬಿಜೆಪಿಗೆ 483 ಮತಗಳ ಲೀಡ್, ದೇವನಹಳ್ಳಿಯಲ್ಲಿ 5253, ಚಿಕ್ಕಬಳ್ಳಾಪುರದಲ್ಲಿ 20,941 ಮತಗಳ ಮುನ್ನಡೆ, ನೆಲಮಂಗಲದಲ್ಲಿ 33,255 ಮತಗಳ ಮುನ್ನಡೆ ಸಿಕ್ಕಿದ್ದು ಅವೆಲ್ಲ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ. ಬಿಜೆಪಿ ಶಾಸಕರಿದ್ದ ಯಲಹಂಕದಲ್ಲಿ 83,237 ಹಾಗೂ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಗೆ 22,382 ಮತಗಳ ಭರ್ಜರಿ ಲೀಡ್ ಬಂದಿದೆ. ಅದು ಸುಧಾಕರ್ ರವರ ಗೆಲುವಿಗೆ ಕಾರಣವಾಗಿದೆ.